ಮುಂಬೈ: ಕೆಲವು ಐಪಿಎಲ್ ತಂಡಗಳಿಂದ ಮೋಸ ಹೋಗಿರುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಬಹಿರಂಗಪಡಿಸಿದ್ದಾರೆ.
ಐಪಿಎಲ್ ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿರುವ ಹರ್ಷಲ್, ಮೂರು-ನಾಲ್ಕು ಐಪಿಎಲ್ ಫ್ರಾಂಚೈಸ್‌ಗಳು ತನಗೆ ದ್ರೋಹ ಬಗೆದಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:68ರಿಂದ 115; ಆರ್ಸಿಬಿ ಸೋಲಿಗೆ ಕಾರಣಗಳೇನು?
ಗೌರವ್ ಕಪೂರ್ ಅವರೊಂದಿಗೆ 'ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್' ಸಂದರ್ಶನದಲ್ಲಿ ಹರ್ಷಲ್ ಈ ಕುರಿತು ಮನಸ್ಸು ಬಿಚ್ಚಿಟ್ಟಿದ್ದಾರೆ.
'ವಿಪರ್ಯಾಸವೆಂದರೆ ವಿವಿಧ ಫ್ರಾಂಚೈಸ್‌ಗಳ ಮೂರು-ನಾಲ್ಕು ಜನರು ತನ್ನನ್ನು ಸಂಪರ್ಕಿಸಿ ಬಿಡ್ ಮಾಡುವುದಾಗಿ ತಿಳಿಸಿದ್ದರು. ಆದರೆ ಹರಾಜು ದಿನದಲ್ಲಿ ಯಾರೂ ನನಗಾಗಿ ಬಿಡ್ ಸಲ್ಲಿಸಿರಲಿಲ್ಲ. ಆಗ ನನಗೆ ಮೋಸ ಹೋದಂತೆ ಭಾಸವಾಯಿತು. ಅವರು ನನ್ನಲ್ಲಿ ಸುಳ್ಳು ಹೇಳಿದ್ದರು' ಎಂದುತಿಳಿಸಿದ್ದಾರೆ.
ಆದರೆ ಈ ಕರಾಳ ಆಲೋಚನೆಯಿಂದ ಹೊರಬರುವುದು ಅತಿ ಮುಖ್ಯವೆನಿಸಿತ್ತು ಎಂದುಹೇಳಿದ್ದಾರೆ.
31 ವರ್ಷದ ಹರ್ಷಲ್, ಕಳೆದ ವರ್ಷ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ್ದರು. 15 ಪಂದ್ಯಗಳಲ್ಲಿ 32 ವಿಕೆಟ್ ಗಳಿಸಿ ಮಿಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.