ನವದೆಹಲಿ: ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕ್ರಿಕೆಟಿಗರಿಗೆ ನೆರವಾಗಲು ಮುಂದಾಗಿರುವ ಭಾರತ ಕ್ರಿಕೆಟಿಗರ ಸಂಘವು (ಐಸಿಎ) ₹78 ಲಕ್ಷ ಸಂಗ್ರಹಿಸಿದೆ. ಅಗತ್ಯವಿರುವ 57 ಕ್ರಿಕೆಟಿಗರಿಗೆ ಈ ಸಹಾಯಧನವನ್ನು ಹಂಚಲಿದೆ.
‘ಈ ಮೊದಲು ಐಸಿಎ 25ರಿಂದ 30 ಹಿರಿಯ ಆಟಗಾರರಿಗೆ ನೆರವು ನೀಡಲು ನಿರ್ಧರಿಸಿತ್ತು. ಆದರೆ ಸಹ ಆಟಗಾರರ ಬೆಂಬಲದಿಂದ 57 ಕ್ರಿಕೆಟಿಗರಿಗೆ ಸಹಾಯಧನ ಒದಗಿಸಲು ಸಾಧ್ಯವಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಅಶೋಕ್ ಮಲ್ಹೊತ್ರಾ ಹೇಳಿದ್ದಾರೆ.
ಹೊಸದಾಗಿ 25 ಮಂದಿ ಈ ನೆರವು ಪಡೆಯುತ್ತಿದ್ದು, ಪದ್ಮಶ್ರೀ ಪುರಸ್ಕೃತ ಅಂಧ ಕ್ರಿಕೆಟಿಗ ಶೇಖರ್ ನಾಯ್ಕ್, ಹಿರಿಯ ಕ್ರಿಕೆಟಿಗರ ಮೂವರು ವಿಧವೆ ಪತ್ನಿಯರು ಇದರಲ್ಲಿ ಸೇರಿದ್ದಾರೆ.
2012ರಲ್ಲಿ ನಡೆದ ಅಂಧರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಪಿಯನ್ ಆಗಿದ್ದ ಭಾರತ ತಂಡವನ್ನು ಶೇಖರ್ ನಾಯ್ಕ್ ಅವರು ಮುನ್ನಡೆಸಿದ್ದರು. ಅವರೂ ಸೇರಿ ಏಳು ಮಂದಿ ತಲಾ ಒಂದು ಲಕ್ಷ ರೂಪಾಯಿ ನೆರವು ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.