ADVERTISEMENT

T20 ವಿಶ್ವಕಪ್‌ 2024: ದಾಖಲೆ ಮೊತ್ತದ ಬಹುಮಾನ ಘೋಷಿಸಿದ ಐಸಿಸಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2024, 15:05 IST
Last Updated 3 ಜೂನ್ 2024, 15:05 IST
   

ದುಬೈ: ಕ್ರಿಕೆಟ್‌ ಟಿ20 ವಿಶ್ವಕಪ್‌ನ 9ನೇ ಆವೃತ್ತಿಯ ವಿಜೇತರಿಗೆ ಭಾರೀ ಮೊತ್ತದ ಬಹುಮಾನವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಘೋಷಿಸಿದೆ.

ಕ್ರಿಕೆಟ್‌ ಇತಿಹಾಸದಲ್ಲೇ ಇದು ಈವರೆಗಿನ ಅತ್ಯಧಿಕ ಬಹುಮಾನ ಮೊತ್ತವಾಗಿದೆ. ಬಾರ್ಬಡೊಸ್‌ನಲ್ಲಿರುವ ಕಿಂಗ್‌ಸ್ಟನ್‌ ಓವಲ್‌ನಲ್ಲಿ ಜೂನ್ 29ರಂದು ನಡೆಯುವ ಅಂತಿಮ ಪಂದ್ಯದಲ್ಲಿ ಟ್ರೋಫಿ ಎತ್ತುವ ತಂಡಕ್ಕೆ ಬರೋಬ್ಬರಿ 24.5ಲಕ್ಷ ಅಮೆರಿಕನ್ ಡಾಲರ್ (₹20.36 ಕೋಟಿ) ಬಹುಮಾನ ಪಡೆಯಲಿದ್ದಾರೆ.

2ನೇ ಸ್ಥಾನ ಪಡೆದ ತಂಡಕ್ಕೆ 12.8 ಅಮೆರಿಕನ್ ಡಾಲರ್‌ (₹10.63 ಕೋಟಿ) ಬಹುಮಾನ ಸಿಗಲಿದೆ. ಸೆಮಿಫೈನಲ್‌ ಹಂತಕ್ಕೆ ತಲುಪಿದ ತಂಡಗಳಿಗೆ ತಲಾ ₹6.54 ಕೋಟಿ ಬಹುಮಾನ ಸಿಗಲಿದೆ. 

ADVERTISEMENT

ಸೂಪರ್ 8 ಹಂತದಲ್ಲೇ ಪರಾಭವಗೊಳ್ಳುವ ನಾಲ್ಕು ತಂಡಗಳಿಗೆ ತಲಾ ₹3.17 ಕೋಟಿ ಲಭಿಸಲಿದೆ. 9, 10, 11 ಹಾಗೂ 12ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ ₹2 ಕೋಟಿ ಸಿಗಲಿದೆ.

ಇವುಗಳೊಂದಿಗೆ ಪ್ರತಿ ತಂಡವೂ ಆಡುವ ಪ್ರತಿ ಪಂದ್ಯಕ್ಕೆ ₹25ಲಕ್ಷ ಹೆಚ್ಚುವರಿ ಹಣ ಪಡೆಯಲಿವೆ. 28 ದಿನಗಳಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಅಮೆರಿಕದ 3, ವೆಸ್ಟ್ ಇಂಡೀಸ್‌ನ 6 ಸೇರಿ ಒಟ್ಟು 9 ಕ್ರೀಡಾಂಗಣಗಳು ಸಜ್ಜುಗೊಂಡಿವೆ. 

ಜೂನ್ 1ರಿಂದ ಆರಂಭವಾಗಿರುವ ಟಿ20 ವಿಶ್ವಕಪ್‌ನ ಪ್ರಾಥಮಿಕ ಸುತ್ತಿನಲ್ಲಿ 40 ಪಂದ್ಯಗಳು ನಡೆಯಲಿವೆ. ನಂತರ ಸೂಪರ್ 8ರ ಹಂತ, ಸೆಮಿ ಫೈನಲ್‌ ಹಾಗೂ ಫೈನಲ್‌ ಪಂದ್ಯ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.