ADVERTISEMENT

ಟಿ20 ವಿಶ್ವಕಪ್: ಕಾಮೆಂಟ್ರಿ ತಂಡದಲ್ಲಿ ದಿನೇಶ್ ಕಾರ್ತಿಕ್ 

ಪಿಟಿಐ
Published 24 ಮೇ 2024, 13:11 IST
Last Updated 24 ಮೇ 2024, 13:11 IST
<div class="paragraphs"><p>ದಿನೇಶ್ ಕಾರ್ತಿಕ್&nbsp;</p></div>

ದಿನೇಶ್ ಕಾರ್ತಿಕ್ 

   

ದುಬೈ: ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಈಚೆಗಷ್ಟೇ ವಿದಾಯ ಹೇಳಿದ ದಿನೇಶ್ ಕಾರ್ತಿಕ್ ಅವರು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಮೆರಿಕದ ಜೇಮ್ಸ್‌ ಒಬ್ರೇನ್ ಕಾಮೆಂಟ್ರಿ ಬಾಕ್ಸ್‌ಗೆ ಪದಾರ್ಪಣೆ ಮಾಡಲಿದ್ಧಾರೆ.

ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ದಿನೇಶ್, ಈಚೆಗೆ ಎಲಿಮಿನೇಟರ್ ಪಂದ್ಯದ ನಂತರ ವಿದಾಯ ಹೇಳಿದ್ದರು. 

ADVERTISEMENT

ಜೂನ್ 1ರಿಂದ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟಿ.ವಿ. ವೀಕ್ಷಕ ವಿವರಣೆಕಾರರ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಬಿಡುಗಡೆ ಮಾಡಿದೆ. 

ಭಾರತದ ದಿಗ್ಗಜರಾದ ಸುನಿಲ್ ಗಾವಸ್ಕರ್, ರವಿ ಶಾಸ್ತ್ರಿ  ಹಾಗೂ ಹರ್ಷ ಭೋಗ್ಲೆ ಅವರು ವೀಕ್ಷಕ ವಿವರಣೆಕಾರರ ತಂಡದಲ್ಲಿದ್ದಾರೆ.

ಇನ್ನುಳಿದಂತೆ; ನಾಸಿರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಇಯಾನ್ ಬಿಷಪ್, ಎಬನಿ ರೇನ್‌ಫೋರ್ಡ್‌ ಬ್ರೆಂಟ್, ಸ್ಯಾಮುಯೆಲ್ ಬದ್ರಿ, ಕಾರ್ಲೋಸ್ ಬ್ರೇಥ್‌ವೇಟ್, ಸ್ಟೀವ್ ಸ್ಪಿತ್, ಆ್ಯರನ್‌ ಫಿಂಚ್, ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ರಮೀಜ್ ರಝಾ, ಏಯಾನ್ ಮಾರ್ಗನ್, ಟಾಮ್ ಮೂಡಿ, ವಸೀಂ ಅಕ್ರಂ, ಡೇಲ್ ಸ್ಟೇನ್, ಗ್ರೆಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೊಲ್, ಶಾನ್ ಪೊಲಾಕ್, ಕೇಟಿ ಮಾರ್ಟಿನ್, ಎಂಪುಎಲೆಲೊ ಮಬಾಂಗ್ವಾ, ನಥಾಲಿ ಜೆರ್ಮನೊಸ್, ಅಲನ್ ವಿಲ್ಕಿನ್ಸ್, ಬ್ರಯನ್ ಮರ್ಗೆಟ್ರಾಯ್ಡ್, ಮೈಕ್ ಹೈಸ್‌ಮನ್, ಇಯಾನ್ ವಾರ್ಡ್, ಅತ್ತರ್ ಅಲಿ ಖಾನ್, ರಸೆಲ್ ಅರ್ನಾಲ್ಡ್, ನಿಯಾಲ್ ಒಬ್ರೇನ್, ಕಾಸ್ ನಾಯ್ಡು, ಡರೆನ್ ಗಂಗಾ ಹಾಗೂ ಲೀಸಾ ಸ್ಥಳೇಕರ್ ಅವರು ಈ ತಂಡದಲ್ಲಿದ್ದಾರೆ. 

28 ದಿನಗಳ ಟೂರ್ನಿಯಲ್ಲಿ ಪಂದ್ಯ ಪೂರ್ವ, ಇನಿಂಗ್ಸ್‌ ಬ್ರೇಕ್ ಹಾಗೂ ಪಂದ್ಯದ ನಂತರದ ಕಾರ್ಯಕ್ರಮಗಳು ಹಾಗೂ ವೀಕ್ಷಕ ವಿವರಣೆಗಳನ್ನು ಈ ತಂಡವು ನೀಡಲಿದೆ. 

ಈ ಬಾರಿ ಕೃತಕ ಬುದ್ಧಮತ್ತೆ ತಂತ್ರಜ್ಞಾನದ ಮೂಲಕ ಬಹು ಆಯಾಮದ ಪ್ರಸಾರ ವ್ಯವಸ್ಥೆಯನ್ನು ಮಾಡಲಾಗಿದೆ. ಡಿಸ್ನಿ ಸ್ಟಾರ್, ಖಾದಿಚ್ ಇನೊವೆಷನ್ ಲ್ಯಾಬ್ಸ್ ಮತ್ತು ಎನ್‌.ಇ.ಪಿ  ಸಂಸ್ಥೆಗಳು ಜಂಟಿಯಾಗಿ ನಿರ್ವಹಿಸಲಿವೆ. 

ಸುನಿಲ್ ಗವಾಸ್ಕರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.