ದುಬೈ: ಮುಂದಿನ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಪಂದ್ಯಗಳನ್ನು ನ್ಯೂಯಾರ್ಕ್, ಫ್ಲಾರಿಡಾ ಹಾಗೂ ಡಲ್ಲಾಸ್‌ನಲ್ಲಿ ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.
ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ವೆಸ್ಟ್ ಇಂಡೀಸ್ ನೊಂದಿಗೆ ಅಮೆರಿಕದ ಸಹ ಆತಿಥ್ಯ ವಹಿಸಿದೆ.
‘ಅಮೆರಿಕದ ಮೂರು ತಾಣಗಳಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವ ಪ್ರಯತ್ನಕ್ಕೆ ಇದರಿಂದ ಮತ್ತಷ್ಟು ಬಲ ಬರಲಿದೆ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲಾರ್ಡಿಸ್ ಹೇಳಿದ್ದಾರೆ.
‘ಫ್ಲಾರಿಡಾ ಮತ್ತು ಡಲಾಸ್‌ನಲ್ಲಿ ಈಗಾಗಲೇ ಕ್ರಿಕೆಟ್ ಆಯೋಜಿಸಿದ ತಾಣಗಳಿವೆ. ಅದೇ ಕ್ರೀಡಾಂಗಣಗಳನ್ನು ಇನ್ನೂ ಹೆಚ್ಚು ಅಭಿಮಾನಿಗಳು ಸೇರಲು ಅನುಕೂಲವಾಗುವಂತೆ ನವೀಕರಣ ಗೊಳಿಸಲಾಗುತ್ತಿದೆ‘ ಎಂದೂ ಜೆಫ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.