ADVERTISEMENT

ಕ್ರಿಕೆಟ್ ಲೆಕ್ಕ| ವಿಶ್ವಕಪ್‌ ರನ್, ವಿಕೆಟ್ ಗಳಿಕೆ ಪಟ್ಟಿಯಲ್ಲಿ ಯಾರು ಮುಂದು?

ವಿಶ್ವಕಪ್‌ 2019

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 10:13 IST
Last Updated 27 ಜೂನ್ 2019, 10:13 IST
   

ಕ್ರಿಕೆಟ್‌ ಇತಿಹಾಸದಲ್ಲಿ ಇದುವೆರೆಗೆ 11 ವಿಶ್ವಕಪ್‌ ಪಂದ್ಯಾವಳಿಗಳು ನಡೆದಿವೆ. ಕಾಂಗರೂ ಬಳಗ ಆಸ್ಟ್ರೇಲಿಯಾ ಐದು ಬಾರಿ ಕಪ್‌ ಗೆದ್ದು ಪ್ರಭುತ್ವ ಸಾಧಿಸಿದೆ. ಕ್ರಿಕೆಟ್‌ ಲೋಕದ ‘ಬ್ಲಾಕ್‌ ಹಾರ್ಸ್‌’ ವೆಸ್ಟ್‌ ಇಂಡೀಸ್‌ ಹಾಗೂ ‘ಮೆನ್‌ ಇನ್‌ ಬ್ಲೂ’ಖ್ಯಾತಿಯ ಟೀಂ ಇಂಡಿಯಾ ತಲಾ ಎರಡು ಬಾರಿ ಚಾಂಪಿಯನ್‌ ಪಟ್ಟಕ್ಕೇರಿವೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳೂ ಒಂದೊಂದು ಟ್ರೋಫಿಯನ್ನು ತಮ್ಮ ಹೆಸರಿಗೆ ಷರಾ ಬರೆದುಕೊಂಡಿವೆ.

ಈ ಬಾರಿ ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳುಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು ಎನಿಸಿಕೊಂಡಿವೆ. ಈ ತಂಡಗಳಿಗೆ ಮಾತ್ರವೇ ಸೆಮಿಫೈನಲ್‌ಗೇರುವ ಸಾಮರ್ಥ್ಯವಿದೆ ಎಂದೂ ಹೇಳಲಾಗುತ್ತಿದೆ. ಆದರೆ ಇತಿಹಾಸದ ಪುಟ ತಿರುವಿ ನೋಡಿದರೆ ಅಂತಹ ಬಲಿಷ್ಠ ತಂಡಗಳೂ ಸಾಕಷ್ಟು ಬಾರಿ ಮಕಾಡೆ ಮಲಗಿರುವುದು ಗೋಚರಿಸುತ್ತದೆ. ಕ್ರಿಕೆಟ್‌ ಮಾತ್ರವಲ್ಲ ಯಾವುದೇ ಆಟವಾದರೂ ಅದು ಆ ಕ್ಷಣದ ಸ್ವತ್ತು ಅಷ್ಟೇ. ಆ ಕ್ಷಣ ಅಥವಾ ಆ ದಿನ ಯಾರು ಸಮರ್ಥವಾಗಿ ಆಡಬಲ್ಲರೋ ಅವರಷ್ಟೇ ವಿಜಯಿಗಳಾಗುತ್ತಾರೆ.1983ರ ವಿಶ್ವಕಪ್‌ ಫೈನಲ್‌ನಲ್ಲಿ ಕ್ರಿಕೆಟ್‌ ಧೈತ್ಯ ವಿಂಡೀಸ್‌ ಪಡೆಗೆ ಸೋಲುಣಿಸಿ ಮೊದಲ ಸಲ ಪ್ರಶಸ್ತಿ ಎತ್ತಿ ಹಿಡಿಯುವಾಗ ಅಂತಹದೊಂದು ಶ್ರೇಷ್ಠ ಪ್ರದರ್ಶನ ಭಾರತದ ಬೆನ್ನಿಗಿತ್ತು. ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ವಿರುದ್ಧ ಒಮ್ಮೆಯಾದರೂ ಜಯ ಕಾಣಬೇಕೆಂದು ದಶಕಗಳಿಂದ ಕಾದಿದ್ದಪಾಕಿಸ್ತಾನ, ಚಾಂಪಿಯನ್ಸ್‌ ಟ್ರೋಫಿ–2017ರ ಫೈನಲ್‌ನಲ್ಲಿ ಭಾರತವನ್ನು 180 ರನ್‌ ಗಳಿಂದ ಹಣಿದದ್ದೂ ಅಖಾಡದ ಅಚ್ಚರಿಗೊಂದು ನಿದರ್ಶನವಷ್ಟೇ.

ಈ ಹಿಂದಿನ ಎಲ್ಲವಿಶ್ವಕಪ್‌ ಪಂದ್ಯಾವಳಿಗಳ ಅಂಕಿ ಸಂಖ್ಯೆಯನ್ನು ಗುಡ್ಡೆಹಾಕಿ ಲೆಕ್ಕಚಾರ ಮಾಡಿದರೆ ವಿಶ್ವಕಪ್‌ ಪಂದ್ಯಾವಳಿಯ ಒಂದಿಷ್ಟು ಅಪರೂಪದ ಸಾಧನೆಯ ಪಟ್ಟಿಯನ್ನು ಹೊರಗೆಳೆಯಬಹುದು.ದಾಖಲೆಯಾಗಿ ಉಳಿದಿರುವ ಸಾಧನೆಗಳ ಸಾರ ಆಸಕ್ತಿಕರವೆನಿಸಿದರೂ, ಪ್ರಸ್ತುತದ ಅಂಕಿ–ಅಂಶಗಳೇ ಹೆಚ್ಚು ರಂಜನೀಯ ವೆನಿಸುವುದು. ಆ ಹಿನ್ನಲೆಯಲ್ಲಿ ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯ ಪ್ರಮುಖ ಅಂಕಿ–ಅಂಶ ಹಾಗೂ ವಿಶ್ವಕಪ್‌ ಇತಿಹಾಸದ ಕೆಲವು ದಾಖಲೆಗಳನ್ನು ಇಲ್ಲಿ ಗುರುತಿಸಲಾಗಿದೆ.

ADVERTISEMENT

ಕ್ಷಣಕ್ಷಣದ ಸ್ಕೋರ್‌:https://bit.ly/2X9OQP1

ಈ ಬಾರಿಯವಿಶ್ವಕಪ್‌ನಲ್ಲಿಜೂನ್‌ 26ರಂದು ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳ ನಡುವೆನಡೆದಪಂದ್ಯದ ವರೆಗಿನಅಂಕಿ–ಅಂಶ

* ದಾಖಲಾದ ಒಟ್ಟು ಸಿಕ್ಸರ್‌|259
* ಒಂದೇ ಇನಿಂಗ್ಸ್‌ನಲ್ಲಿ ಹೆಚ್‌ ಸಿಕ್ಸರ್‌ ಗಳಿಸಿದ ಆಟಗಾರ| ಇಯಾನ್‌ ಮಾರ್ಗನ್‌ (17)
* ಒಟ್ಟು ಬೌಂಡರಿಗಳು|1124
*ಪತನಗೊಂಡ ವಿಕೆಟ್‌ಗಳು| 433
*ದಾಖಲಾದ ಶತಕಗಳು|18
* ದಾಖಲಾದ ಅರ್ಧಶತಕಗಳು|73
* ಇನಿಂಗ್ಸ್‌ನಲ್ಲಿ ತಂಡವೊಂದರ ಗರಿಷ್ಠ ಮೊತ್ತ| ಅಫ್ಗಾನಿಸ್ತಾನವಿರುದ್ಧಇಂಗ್ಲೆಂಡ್‌ 6 ವಿಕೆಟ್‌ಗೆ397 ರನ್
* ಇನಿಂಗ್ಸ್‌ನಲ್ಲಿ ತಂಡವೊಂದರ ಕನಿಷ್ಠ ಮೊತ್ತ|ವೆಸ್ಟ್‌ ಇಂಡೀಸ್‌ ವಿರುದ್ಧ ಪಾಕಿಸ್ತಾನ 105 ರನ್‌ ಗಳಿಸಿ ಆಲೌಟ್‌

ವೈಯಕ್ತಿಕ ಗರಿಷ್ಠ ಮೊತ್ತ

ಸಂಖ್ಯೆ ಆಟಗಾರ ತಂಡ ಎದುರಾಳಿ ರನ್
01 ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ ಬಾಂಗ್ಲಾದೇಶ 166
02 ಜೇಸನ್‌ ರಾಯ್‌ ಇಂಗ್ಲೆಂಡ್‌ ಬಾಂಗ್ಲಾದೇಶ 153
03 ಆ್ಯರನ್‌ ಫಿಂಚ್‌ ಆಸ್ಟ್ರೇಲಿಯಾ ಶ್ರೀಲಂಕಾ 153
04 ಇಯಾನ್‌ ಮಾರ್ಗನ್ ಇಂಗ್ಲೆಂಡ್ ಅಫ್ಘಾನಿಸ್ತಾನ 148
05 ಕೇನ್‌ ವಿಲಿಯಮ್ಸ್‌ ನ್ಯೂಜಿಲೆಂಡ್ ವೆಸ್ಟ್‌ ಇಂಡೀಸ್‌ 140

ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರು

ಸಂಖ್ಯೆ ಆಟಗಾರ ತಂಡ ಇನಿಂಗ್ಸ್‌ ಒಟ್ಟು ರನ್‌
01 ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ 06 500
02 ಆ್ಯರನ್‌ ಫಿಂಚ್‌ ಆಸ್ಟ್ರೇಲಿಯಾ 05 496
03

ಶಕೀಬ್‌ ಅಲ್‌ ಹಸನ್‌

ಬಾಂಗ್ಲಾದೇಶ

06 476
04

ಜೋ ರೂಟ್‌

ಇಂಗ್ಲೆಂಡ್‌ 06 432
05 ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್‌ 04 414

ಅತಿ ಹೆಚ್ಚು ವಿಕೆಟ್‌ ಪಡೆದಆಟಗಾರರು

ಸಂಖ್ಯೆ ಆಟಗಾರ ತಂಡ ಇನಿಂಗ್ಸ್‌ ವಿಕೆಟ್
01 ಮಿಚೆಲ್‌ ಸ್ಟಾರ್ಕ್‌ ಆಸ್ಟ್ರೇಲಿಯಾ 07 19
02 ಜೋಫ್ರಾ ಆರ್ಚರ್‌ ಇಂಗ್ಲೆಂಡ್‌ 07 16
03

ಮೊಹಮದ್‌ ಆಮೀರ್‌

ಪಾಕಿಸ್ತಾನ

06 16
04 ಲೂಕಿ ಫರ್ಗ್ಯೂಸನ್‌ ನ್ಯೂಜಿಲೆಂಡ್‌ 06 15
05 ಮಾರ್ಕ್‌ ವುಡ್ ಇಂಗ್ಲೆಂಡ್‌ 06 13

ಹೆಚ್ಚು ಶತಕಗಳು

ಸಂಖ್ಯೆ ಆಟಗಾರ ತಂಡ ಇನಿಂಗ್ಸ್‌ ಶತಕ
01 ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ 07 2
02 ಆ್ಯರನ್‌ ಫಿಂಚ್‌ ಆಸ್ಟ್ರೇಲಿಯಾ 07 2
03 ಶಕೀಬ್‌ ಅಲ್‌ ಹಸನ್‌ ಬಾಂಗ್ಲಾದೇಶ 06 2
04 ಜೋ ರೂಟ್‌ ಇಂಗ್ಲೆಂಡ್‌ 07 2
05 ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್‌ 06 2

ಹೆಚ್ಚು ಅರ್ಧ ಶತಕಗಳು

ಸಂಖ್ಯೆ ಆಟಗಾರ ತಂಡ ಇನಿಂಗ್ಸ್‌ ಶತಕ
01 ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ 07 03
02 ಆ್ಯರನ್‌ ಫಿಂಚ್‌ ಆಸ್ಟ್ರೇಲಿಯಾ 07 03
03 ಶಕೀಬ್‌ ಅಲ್‌ ಹಸನ್‌ ಬಾಂಗ್ಲಾದೇಶ 06 03
04 ಜೋ ರೂಟ್‌ ಇಂಗ್ಲೆಂಡ್‌ 07 03
05 ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ 06 03

ವಿಶ್ವಕಪ್‌ ಸುದ್ದಿಗಳಿಗಾಗಿ: https://www.prajavani.net/icc-worldcup-cricket-2019

ಹೆಚ್ಚು ಸಿಕ್ಸರ್‌

ಸಂಖ್ಯೆ ಆಟಗಾರ ತಂಡ ಇನಿಂಗ್ಸ್‌ ಸಿಕ್ಸರ್‌
01 ಇಯಾನ್‌ ಮಾರ್ಗನ್‌ ಇಂಗ್ಲೆಂಡ್‌ 06 22
02 ಆ್ಯರನ್‌ ಫಿಂಚ್‌ ಆಸ್ಟ್ರೇಲಿಯಾ 07 18
03 ಕ್ರಿಸ್‌ ಗೇಯ್ಲ್‌ ವೆಸ್ಟ್‌ ಇಂಡೀಸ್‌ 05 10
04 ಕಾರ್ಲೋಸ್‌ ಬ್ರಾಥ್‌ವೇಟ್‌ ವೆಸ್ಟ್‌ ಇಂಡೀಸ್‌ 03 07
05 ರೋಹಿತ್‌ ಶರ್ಮಾ ಭಾರತ 04 06

ಹೆಚ್ಚು ಬೌಂಡರಿಗಳು

ಸಂಖ್ಯೆ ಆಟಗಾರ ತಂಡ ಇನಿಂಗ್ಸ್‌ ಬೌಂಡರಿ
01

ಶಕೀಬ್‌ ಅಲ್‌ ಹಸನ್‌

ಬಾಂಗ್ಲಾದೇಶ 06 48
02

ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾ 07 46
03

ಆ್ಯರನ್‌ ಫಿಂಚ್‌

ಆಸ್ಟ್ರೇಲಿಯಾ 07 46
04 ಜೋ ರೂಟ್‌ ಇಂಗ್ಲೆಂಡ್‌ 07 37
05 ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್‌ 05 37

ಹೆಚ್ಚು ರನ್‌ ಅಂತರದ ಗೆಲುವು

ಸಂಖ್ಯೆ ತಂಡ ಎದುರಾಳಿ ಜಯದ ಅಂತರ
01 ಇಂಗ್ಲೆಂಡ್‌ ಅಫ್ಘಾನಿಸ್ತಾನ 150 ರನ್‌
02 ಇಂಗ್ಲೆಂಡ್‌ ಬಾಂಗ್ಲಾದೇಶ 106 ರನ್‌
03 ಇಂಗ್ಲೆಂಡ್‌

ದಕ್ಷಿಣ ಆಫ್ರಿಕಾ

104 ರನ್‌
04 ಭಾರತ ಪಾಕಿಸ್ತಾನ 89 ರನ್‌
05 ಆಸ್ಟ್ರೇಲಿಯಾ ಶ್ರೀಲಂಕಾ 87 ರನ್‌

ಹೆಚ್ಚು ವಿಕೆಟ್‌ ಅಂತರದ ಗೆಲುವು

ಸಂಖ್ಯೆ ತಂಡ ಎದುರಾಳಿ ಜಯದ ಅಂತರ
01 ನ್ಯೂಜಿಲೆಂಡ್‌ ಶ್ರೀಲಂಕಾ 10 ವಿಕೆಟ್‌
02 ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನ 9 ವಿಕೆಟ್‌
03 ಇಂಗ್ಲೆಂಡ್‌ ವೆಸ್ಟ್‌ ಇಂಡೀಸ್‌ 8 ವಿಕೆಟ್‌
04 ವೆಸ್ಟ್‌ ಇಂಡೀಸ್‌ ಪಾಕಿಸ್ತಾನ 7 ವಿಕೆಟ್‌
05 ಬಾಂಗ್ಲಾದೇಶ ವೆಸ್ಟ್‌ ಇಂಡೀಸ್‌ 7 ವಿಕೆಟ್‌

ಅಂಕಪಟ್ಟಿ

ಸಂಖ್ಯೆ ತಂಡ ಪಂದ್ಯ ಗೆಲವು ಸೋಲು ರದ್ದು ಅಂಕ
01 ಆಸ್ಟ್ರೇಲಿಯಾ 7 6 1 12
02 ನ್ಯೂಜಿಲೆಂಡ್‌ 7 5 1 1 11
03 ಭಾರತ 5 4 1 09
04 ಇಂಗ್ಲೆಂಡ್‌ 7 4 3 08
05 ಬಾಂಗ್ಲಾದೇಶ 7 3 3 1 07
06 ಪಾಕಿಸ್ತಾನ 7 3 3 1 07
07 ಶ್ರೀಲಂಕಾ 6 2 2 2 06
08 ವೆಸ್ಟ್‌ ಇಂಡೀಸ್‌ 6 1 4 1 03
09 ದಕ್ಷಿಣ ಆಫ್ರಿಕಾ 7 1 5 1 03
10 ಅಫ್ಘಾನಿಸ್ತಾನ 7 0 7 00

ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದ ಕೆಲವು ಪ್ರಮುಖ ಸಾಧನೆಗಳು
* ಇನಿಂಗ್ಸ್‌ನಲ್ಲಿ ತಂಡವೊಂದರ ಗರಿಷ್ಠ ಮೊತ್ತ| ಅಫ್ಗಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ417/6ವಿಕೆಟ್‌(2015)
* ಇನಿಂಗ್ಸ್‌ನಲ್ಲಿ ತಂಡವೊಂದರ ಕನಿಷ್ಠ ಮೊತ್ತ| ಶ್ರೀಲಂಕಾ ವಿರುದ್ಧ ಕೆನಡಾ36ರನ್‌ಗೆ ಆಲೌಟ್‌(2003)
* ಅತಿಹೆಚ್ಚು ಮೊತ್ತದ ಗುರಿ ಬೆನ್ನಟ್ಟಿ ಗೆದ್ದ ದಾಖಲೆ| ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ಧ 329ಕ್ಕೆ 7ವಿಕೆಟ್‌
* ಒಂದೇ ಟೂರ್ನಿಯಲ್ಲಿ ಹೆಚ್ಚು ರನ್‌| ವಿಶ್ವಕಪ್‌–2003, ಸಚಿನ್ ತೆಂಡೂಲ್ಕರ್‌(673), ಭಾರತ
* ಒಂದೇ ಟೂರ್ನಿಯಲ್ಲಿಹೆಚ್ಚು ವಿಕೆಟ್‌|ವಿಶ್ವಕಪ್‌–2007, ಗ್ಲೇನ್‌ ಮೆಕ್‌ಗ್ರಾತ್‌ 26ವಿಕೆಟ್‌
* ಇನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌| ಮಾರ್ಟಿನ್‌ ಗಪ್ಟಿಲ್‌(237), ನ್ಯೂಜಿಲೆಂಡ್‌
* ಇನಿಂಗ್ಸ್‌ನಲ್ಲಿ ವೈಯಕ್ತಿಕಹೆಚ್ಚು ವಿಕೆಟ್‌| ಗ್ಲೇನ್‌ ಮೆಕ್‌ಗ್ರಾತ್‌ 15 ರನ್‌ 7ವಿಕೆಟ್‌
* ಅತಿ ಹೆಚ್ಚು ರನ್‌| ಸಚಿನ್ ತೆಂಡೂಲ್ಕರ್‌(2278),ಭಾರತ
* ಅತಿ ಹೆಚ್ಚು ವಿಕೆಟ್‌| ಗ್ಲೇನ್‌ ಮೆಕ್‌ಗ್ರಾತ್‌(71),ಆಸ್ಟ್ರೇಲಿಯಾ
* ಹೆಚ್ಚು ಶತಕಗಳು|ಸಚಿನ್ ತೆಂಡೂಲ್ಕರ್‌(6), ಭಾರತ
*ಹೆಚ್ಚು ಅರ್ಧಶತಕಗಳು| ಸಚಿನ್ ತೆಂಡೂಲ್ಕರ್‌(15), ಭಾರತ
* ಅತಿಹೆಚ್ಚು ಕ್ಯಾಚ್‌ ಪಡೆದವರು| ರಿಕಿ ಪಾಂಟಿಂಗ್‌(28), ಆಸ್ಟ್ರೇಲಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.