ಟಾಂಟನ್(ಇಂಗ್ಲೆಂಡ್):ಹಿಂದಿನ ಪಂದ್ಯದಲ್ಲಿ ಭಾರತದೆದುರು 36ರನ್ ಅಂತರದ ಸೋಲು ಕಂಡು ಜಯದ ಲಯಕ್ಕೆ ಮರಳುವತ್ತ ಚಿತ್ತ ನೆಟ್ಟಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಇಂದು ಪಾಕಿಸ್ತಾನ ಬೌಲರ್‌ಗಳನ್ನು ಕಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ307ರನ್ ಕಲೆ ಹಾಕಿದೆ.
ಫಿಂಚ್ ವಾರ್ನರ್ ಜೋಡಿ ಮೊದಲ ವಿಕೆಟ್‌ಗೆ 22.1 ಓವರ್‌ಗಳಲ್ಲಿ 146ರನ್ ಗಳಿಸಿತು. ಫಿಂಚ್(82) ಔಟಾದ ಬಳಿಕವೂ ಉತ್ತಮವಾಗಿ ಆಡಿದ ವಾರ್ನರ್ 111 ಎಸೆತಗಳಲ್ಲಿ 107ರನ್ ಗಳಿಸಿದರು.
ಒಂದು ಹಂತದಲ್ಲಿ ಕೇವಲ 2ವಿಕೆಟ್‌ಗೆ 200ರನ್ ಗಳಿಸಿದ್ದ ಆಸ್ಟ್ರೇಲಿಯಾ 350ರ ಗಡಿ ದಾಟುವ ಲೆಕ್ಕಾಚಾರದಲ್ಲಿತ್ತು. ಆದರೆ, ಡೇವಿಡ್ ವಾರ್ನರ್ ವಿಕೆಟ್ ಪತನದ ರನ್ ಗತಿ ಇಳಿಯಿತು. 37.5ನೇ ಓವರ್‌ನಲ್ಲಿ ವಾರ್ನರ್ ಔಟಾದಾಗ ಆಸಿಸ್ 242ರನ್ ಗಳಿಸಿತ್ತು.ಬಳಿಕ ಲಯಕ್ಕೆ ಮರಳಿದಂತೆ ಆಡಿದ ಪಾಕ್ ಬೌಲರ್‌ಗಳು ರನ್ ವೇಗಕ್ಕೆ ತಕ್ಕ ಮಟ್ಟಿಗೆ ಕಡಿವಾಣ ಹಾಕಿದರು.
ಉಸ್ಮಾನ್ ಖ್ವಾಜಾ, ಶಾನ್ ಮಾರ್ಸ್ ಸೇರಿದಂತೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸದ ಕಾರಣನಿರೀಕ್ಷಿತ ಲೆಕ್ಕಾಚಾರ ತಲುಪಲು ವಿಫಲವಾದಆಸ್ಟ್ರೇಲಿಯಾ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಆಲೌಟ್ ಆಯಿತು.
ಹತ್ತು ಓವರ್‌ಗಳಲ್ಲಿ ಕೇವಲ30ರನ್ ನೀಡಿದಮೊಹಮ್ಮದ್ ಅಮೀರ್ 5 ವಿಕೆಟ್ ಪಡೆದು ಮಿಂಚಿದರು.
ಲೈವ್ ಸ್ಕೋರ್ ಬೋರ್ಡ್ ನೋಡಲು ಇಲ್ಲಿ ಕ್ಲಿಕ್ಕಿಸಿ: ಆಸ್ಟ್ರೇಲಿಯಾ vs ಪಾಕಿಸ್ತಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.