ADVERTISEMENT

ICC World Cup 2023: ವಿಶ್ವಕಪ್ ತಂಡದಲ್ಲಿರುತ್ತೇನೆ ಎಂದುಕೊಂಡಿರಲಿಲ್ಲ –ಅಶ್ವಿನ್

ಐಎಎನ್ಎಸ್
Published 30 ಸೆಪ್ಟೆಂಬರ್ 2023, 11:42 IST
Last Updated 30 ಸೆಪ್ಟೆಂಬರ್ 2023, 11:42 IST
<div class="paragraphs"><p>ಆರ್.ಅಶ್ವಿನ್‌</p></div>

ಆರ್.ಅಶ್ವಿನ್‌

   

ಪಿಟಿಐ ಚಿತ್ರ

ಗುವಾಹಟಿ: ಸ್ಪಿನ್ನರ್‌ ಆರ್.ಅಶ್ವಿನ್‌ ಅವರು ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಕೊನೇ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ADVERTISEMENT

ತವರಿನಲ್ಲೇ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಗೆ ತಂಡವನ್ನು ಅಂತಿಮಗೊಳಿಸಲು ಸೆಪ್ಟೆಂಬರ್‌ 28 ಕೊನೇ ದಿನವಾಗಿತ್ತು. ಈ ಮೊದಲು ಪ್ರಕಟಗೊಂಡಿದ್ದ 15 ಆಟಗಾರರನ್ನೊಳಗೊಂಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಅಕ್ಷರ್‌ ಪಟೇಲ್‌ ಗಾಯಗೊಂಡು ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲು ಅಶ್ವಿನ್‌ಗೆ ಸ್ಥಾನ ನೀಡಲಾಗಿದೆ.

ಗುವಾಹಟಿಯಲ್ಲಿ ಇಂದು (ಸೆ.30) ಭಾರತ ಹಾಗೂ ಇಂಗ್ಲೆಂಡ್‌ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಈ ವೇಳೆ ಮಾತನಾಡಿರುವ ಅಶ್ವಿನ್‌, ಜೀವನ ಸಾಕಷ್ಟು ಅಚ್ಚರಿಗಳಿಂದ ಕೂಡಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಇಲ್ಲಿ (ವಿಶ್ವಕಪ್‌ ತಂಡದಲ್ಲಿ) ಇರುತ್ತೇನೆ ಎಂದುಕೊಂಡಿರಲಿಲ್ಲ. ಪರಿಸ್ಥಿತಿ ನಾನು ಇಲ್ಲಿರುವಂತೆ ಮಾಡಿದೆ. ತಂಡದ ಆಡಳಿತ ನನ್ನ ಮೇಲೆ ನಂಬಿಕೆ ಇಟ್ಟಿದೆ ಎಂದಿದ್ದಾರೆ.

ಈ ವರೆಗೆ ಒಟ್ಟು 115 ಏಕದಿನ ಪಂದ್ಯಗಳಲ್ಲಿ ಆಡಿರುವ ಅಶ್ವಿನ್‌, 4.94ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟು 155 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2011ರಲ್ಲಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಆಟಗಾರರ ಪೈಕಿ, ವಿರಾಟ್‌ ಕೊಹ್ಲಿ ಹಾಗೂ ಅಶ್ವಿನ್‌ ಮಾತ್ರವೇ 2023ರ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯು ಅಕ್ಟೋಬರ್‌ 5ರಿಂದ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ಕಳೆದ ಬಾರಿ ರನ್ನರ್‌ ಅಪ್‌ ಆಗಿದ್ದ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ಭಾರತ ತಂಡ ಅಕ್ಟೋಬರ್‌ 8ರಂದು ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಅಭಿಯಾನ ಆರಂಭಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.