ಕರಾಚಿ: ಚಾಂಪಿಯನ್ಸ್ ಟ್ರೋಫಿಗೆ ನಡೆದಿರುವ ಸಿದ್ಧತೆ ಪರಿಶೀಲಿಸಲು ಈ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿರುವ ಐಸಿಸಿ ನಿಯೋಗವು, ಪಿಸಿಬಿ ಜೊತೆ ಈ ಟೂರ್ನಿಯ ಪ್ರಾಥಮಿಕ ವೇಳಾಪಟ್ಟಿಯ ಬಗ್ಗೆಯೂ ಚರ್ಚೆ ನಡೆಸಲಿದೆ.
ಐಸಿಸಿಯ ಎಷ್ಟು ಮಂದಿ ಬರಲಿದ್ದಾರೆ ಮತ್ತು ಅವರು ಯಾವ ವಿಭಾಗ ಪ್ರತಿನಿಧಿಸಲಿದ್ದಾರೆ ಎಂಬ ಬಗ್ಗೆ ಇದುವರೆಗೆ ಪಿಸಿಬಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ವೇಳಾಪಟ್ಟಿಯ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ಈ ಬೆಳವಣಿಗೆಯ ಮಾಹಿತಿಯಿರುವ ಮೂಲವೊಂದು ತಿಳಿಸಿದೆ.
ಪಿಸಿಬಿ ಕೆಲದಿನಗಳ ಹಿಂದೆಯೇ ಐಸಿಸಿಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಕಳುಹಿಸಿದೆ. ಅದರಲ್ಲಿ ಲಾಹೋರ್ಅನ್ನು ಭಾರತ ತಂಡದ ನೆಲೆಯನ್ನಾಗಿ ಗುರುತಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.