ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಿನ ಎಂಟು ವರ್ಷಗಳ ಪಂದ್ಯಗಳ ಪ್ರಸಾರ ಹಕ್ಕು ಹರಾಜು ಮಾಡಲು ಸಿದ್ಧತೆ ಆರಂಭಿಸಿದೆ.
2024ರಿಂದ ಎಂಟು ವರ್ಷಗಳ ಅವಧಿಗೆ ಮಾಧ್ಯಮ ಪ್ರಸಾರ ಹಕ್ಕುಗಳನ್ನು ಐಸಿಸಿ ಹರಾಜು ಮಾಡಲಿದೆ. ಈ ಅವಧಿಯಲ್ಲಿ 711 ಪಂದ್ಯಗಳು ನಡೆಯಲಿವೆ.
ಒಟ್ಟು ಮೂರು ಪ್ಯಾಕೇಜ್‌ಗಳಲ್ಲಿ ಪಂದ್ಯಗಳನ್ನು ವಿಂಗಡಣೆ ಮಾಡಲಾಗಿದೆ. 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯೂಇದರಲ್ಲಿ ಸೇರಿದೆ.
ಈಚೆಗಷ್ಟೇ ಐಪಿಎಲ್ ಪ್ರಸಾರ ಹಕ್ಕುಗಳನ್ನು ಬಿಸಿಸಿಐ ₹ 48390 ಕೋಟಿಗೆ ಇ– ಹರಾಜು ಮಾಡಿತ್ತು. ಆದರೆ ಐಸಿಸಿಯು ಸಾಂಪ್ರದಾಯಿಕ ಶೈಲಿಯಲ್ಲಿಯೇ ಬಿಡ್ ನಡೆಸಲಿದೆ.
ಸೀಲ್ಡ್ ಬಿಡ್ ಪ್ರಕ್ರಿಯೆ ನಡೆಸಲಿದೆ. ಎ ಪ್ಯಾಕೇಜ್‌ನಲ್ಲಿ ಟಿವಿ ಪ್ರಸಾರ, ಬಿ ಪ್ಯಾಕೇಜ್‌ನಲ್ಲಿ ಡಿಜಿಟಲ್ ಹಕ್ಕು ಮತ್ತು ಸಿ ಪ್ಯಾಕೇಜ್‌ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ.ವಿ. ಹಾಗೂ ಡಿಜಿಟಲ್ ಪ್ರಸಾರದ ಸಂಯುಕ್ತವಾದ ಹಕ್ಕುಗಳನ್ನು ಬಿಡ್ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.