ADVERTISEMENT

ವಿಡಿಯೊ: ವಿರಾಟ್‌, ಬಾಬರ್‌ ಮತ್ತಿತರರ ಅಂದು ಮತ್ತು ಇಂದಿನ ಬ್ಯಾಟಿಂಗ್‌ ಶೈಲಿ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2022, 5:45 IST
Last Updated 4 ಫೆಬ್ರುವರಿ 2022, 5:45 IST
'19 ವರ್ಷದೊಳಗಿನವರ ಕ್ರಿಕೆಟ್‌' ದಿನಗಳಲ್ಲಿ ಮತ್ತು ಪ್ರಸ್ತುತ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಶೈಲಿ (ಚಿತ್ರ: ಐಸಿಸಿ ಇನ್‌ಸ್ಟಾಗ್ರಾಮ್‌ ಸ್ಕ್ರೀನ್‌ಶಾಟ್‌)
'19 ವರ್ಷದೊಳಗಿನವರ ಕ್ರಿಕೆಟ್‌' ದಿನಗಳಲ್ಲಿ ಮತ್ತು ಪ್ರಸ್ತುತ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಶೈಲಿ (ಚಿತ್ರ: ಐಸಿಸಿ ಇನ್‌ಸ್ಟಾಗ್ರಾಮ್‌ ಸ್ಕ್ರೀನ್‌ಶಾಟ್‌)   

ಬೆಂಗಳೂರು:ವಿರಾಟ್‌ ಕೊಹ್ಲಿ, ಬಾಬರ್‌ ಆಜಮ್‌, ಸ್ಟೀವ್‌ ಸ್ಮಿತ್‌ ಮತ್ತಿತರದಿಗ್ಗಜಆಟಗಾರರ '19 ವರ್ಷದೊಳಗಿನವರ ಕ್ರಿಕೆಟ್‌' ದಿನಗಳ ಬ್ಯಾಟಿಂಗ್‌ ಶೈಲಿಯನ್ನು ಇಂದಿನ ಆಟಕ್ಕೆ ಪರಸ್ಪರ ಹೋಲಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ವಿಡಿಯೊ ಹಂಚಿಕೊಂಡಿದೆ.

ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ಬಾಬರ್‌ ಆಜಮ್‌, ಜೋ ರೂಟ್‌, ಸ್ಟೀವ್‌ ಸ್ಮಿತ್‌ ಮತ್ತು ಬೆನ್‌ ಸ್ಟೋಕ್‌ ಅವರ ಅಂದಿನ ಮತ್ತು ಇಂದಿನ ಬ್ಯಾಟಿಂಗ್‌ ಶೈಲಿಯನ್ನು ಹೋಲಿಸಿದ ವಿಡಿಯೊ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ. ಅಂದು 19 ವರ್ಷದೊಳಗಿನ ಕ್ರಿಕೆಟ್‌ನಲ್ಲಿ ಸಿಕ್ಸರ್‌ ಅಥವಾ ಬೌಂಡರಿಗೆ ಅಟ್ಟುತ್ತಿದ್ದ ಬ್ಯಾಟಿಂಗ್‌ ಭಂಗಿಗೂ, ಇಂದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿನ ಬ್ಯಾಟಿಂಗ್‌ ಶೈಲಿಗೂ ವಿಧಾನದಲ್ಲಿ ಬದಲಾವಣೆ ಕಂಡರೂ ಅದೇ ಅಬ್ಬರವಿದೆ.

'ಆಡುವ ವಿಧಾನ ಬದಲಾಗಿದೆ ಆದರೆ ಬ್ಯಾಟಿಂಗ್‌ ಅಬ್ಬರ ಅಂದಿನಂತೆ ಇದೆ' ಎಂದು ಐಸಿಸಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹೇಳಿದೆ. 'ಯಾವ ಆಟಗಾರನ ಬ್ಯಾಟಿಂಗ್‌ ವಿಧಾನ ಹೆಚ್ಚು ಬದಲಾಗಿದೆ?' ಎಂಬ ಪ್ರಶ್ನೆಯನ್ನು ಐಸಿಸಿ ಪ್ರೇಕ್ಷಕರ ಮುಂದಿಟ್ಟಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.