ಮುಂಬೈ: 'ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ' ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಟೂರ್ನಿಗೂ ಮುನ್ನವೇ ಶೇ 70ರಿಂದ 80ರಷ್ಟು ಆಟಗಾರರನ್ನು ಆಯ್ಕೆಗೆ ಅಂತಿಮಗೊಳಿಸಲಾಗಿತ್ತು ಎಂದು ರೋಹಿತ್ ವಿವರಿಸಿದ್ದಾರೆ.
'ಐಪಿಎಲ್‌ಗೂ ಮೊದಲೇ ಅಂತಿಮ 15ರ ಕುರಿತು ಚರ್ಚೆಯನ್ನು ಪ್ರಾರಂಭಿಸಿದ್ದೆವು. ಕೆಲವು ಸ್ಥಾನಗಳಿಗಾಗಿ ಮಾತ್ರ ಐಪಿಎಲ್‌ನತ್ತ ಗಮನ ಹರಿಸಲಾಯಿತು' ಎಂದು ಅವರು ತಿಳಿಸಿದ್ದಾರೆ.
'ಐಪಿಎಲ್‌ನಲ್ಲಿ ದಿನದಿಂದ ದಿನಕ್ಕೆ ಪ್ರದರ್ಶನಗಳು ಬದಲಾಗುತ್ತದೆ. ಓರ್ವ ಆಟಗಾರ ಶತಕ ಗಳಿಸುತ್ತಾರೆ. ಮತ್ತೊಬ್ಬರು ವಿಕೆಟ್ ಗಳಿಸುತ್ತಾರೆ. ಐಪಿಎಲ್‌ಗೂ ಮೊದಲೇ ಶೇ 70-80ರಷ್ಟು ಆಟಗಾರರ ಬಗ್ಗೆ ಖಚಿತತೆಯಿತ್ತು' ಎಂದು ಅವರು ಹೇಳಿದ್ದಾರೆ.
ಆಡುವ ಹನ್ನೊಂದರ ಬಳಗದ ಕುರಿತು ಸ್ಪಷ್ಟತೆ ಇತ್ತು. ಬಹಳಷ್ಟು ಸಿದ್ಧತೆ ಹಾಗೂ ಮಾತುಕತೆಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.
ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿಗೆ ಅವಕಾಶ ಕಲ್ಪಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ರೋಹಿತ್, 'ಕಾರಣ ಈಗ ಹೇಳಲಾಗದು. ಖಂಡಿತವಾಗಿಯೂ ನಾಲ್ವರು ಸ್ಪಿನ್ನರ್‌ಗಳ ಅಗತ್ಯವಿತ್ತು. ಅಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಪಂದ್ಯ ಬೆಳಿಗ್ಗೆ 10ರ ವೇಳೆಗೆ ಆರಂಭವಾಗಲಿದೆ. ತಾಂತ್ರಿಕ ಅಂಶವೂ ಅಡಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.