ADVERTISEMENT

ಟಿ20 ಮಹಿಳೆಯರ ವಿಶ್ವಕಪ್‌: ಆಸ್ಟ್ರೇಲಿಯಾಕ್ಕೆ ಮಣಿದ ಕಿವೀಸ್‌

ಪಿಟಿಐ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
ಬೆತ್ ಮೂನಿ
ಬೆತ್ ಮೂನಿ   

ಶಾರ್ಜಾ: ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಐಸಿಸಿ ಟಿ20 ಮಹಿಳೆಯರ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ನ್ಯೂಜಿಲೆಂಡ್‌ ವಿರುದ್ಧ 60 ರನ್‌ಗಳ ಸುಲಭ ಜಯ ಸಾಧಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಬೆತ್ ಮೂನಿ (40;32ಎ), ಎಲಿಸ್ ಪೆರಿ (30;24ಎ) ಅವರ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 148 ರನ್‌ ಗಳಿಸಿತು. ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ನಾಲ್ಕು ವಿಕೆಟ್‌ ಪಡೆದು ಮಿಂಚಿದರು.

ಗುರಿಯನ್ನು ಬೆನ್ನಟ್ಟಿದ ಕಿವೀಸ್‌ ತಂಡವನ್ನು ಬೌಲರ್‌ಗಳಾದ ಮೇಗನ್ ಶುಟ್ (3ಕ್ಕೆ3) ಮತ್ತು ಅನ್ನಾಬೆಲ್ ಸದರ್‌ರ್ಲೆಂಡ್ (21ಕ್ಕೆ3) ಕಾಡಿದರು. ಅಮೆಲಿಯಾ ಕೆರ್ (29;31ಎ) ಮತ್ತು ಸುಜಿ ಬೇಟ್ಸ್ (20;27ಎ) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಹೀಗಾಗಿ ತಂಡವು 19.2 ಓವರ್‌ಗಳಲ್ಲಿ 88 ರನ್‌ಗಳಿಸಿ ಹೋರಾಟವನ್ನು ಮುಗಿಸಿತು. ಆಸ್ಟ್ರೇಲಿಯಾ ತಂಡವು ಸತತ ಎರಡನೇ ಗೆಲುವಿನೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಮೊದಲ ಪಂದ್ಯದಲ್ಲಿ ಭಾರತವನ್ನು ಮಣಿಸಿದ್ದ ಕಿವೀಸ್‌ ತಂಡಕ್ಕೆ ಇದು ಮೊದಲ ಸೋಲು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 148 (ಎಲಿಸಾ ಹೀಲಿ 26, ಬೆತ್ ಮೂನಿ 40, ಎಲಿಸ್ ಪೆರಿ 30; ಅಮೆಲಿಯಾ ಕೆರ್ 26ಕ್ಕೆ 4, ರೋಸ್ಮರಿ ಮೈರ್ 22ಕ್ಕೆ 2, ಬ್ರೂಕ್ ಹ್ಯಾಲಿಡೇ 16ಕ್ಕೆ 2).

ನ್ಯೂಜಿಲೆಂಡ್‌: 19.2 ಓವರ್‌ಗಳಲ್ಲಿ 88 (ಅಮೆಲಿಯಾ ಕೆರ್  29, ಸುಜಿ ಬೇಟ್ಸ್ 20; ಮೇಗನ್ ಶುಟ್ 3ಕ್ಕೆ 3, ಅನ್ನಾಬೆಲ್ ಸದರ್‌ರ್ಲೆಂಡ್ 21ಕ್ಕೆ 3, ಸೋಫಿ ಮೊಲಿನೆಕ್ಸ್ 15ಕ್ಕೆ 2).

ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 60 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಮೇಗನ್ ಶುಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.