ADVERTISEMENT

T20 WC | ENG vs NZ: ಇಂಗ್ಲೆಂಡ್‌ಗೆ ಸೋಲಿನ ಆಘಾತ; ಕಿವೀಸ್ ಫೈನಲ್‌ಗೆ ಲಗ್ಗೆ

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 17:36 IST
Last Updated 10 ನವೆಂಬರ್ 2021, 17:36 IST

ನ್ಯೂಜಿಲೆಂಡ್‌ಗೆ ಐದು ವಿಕೆಟ್ ಅಂತರದ ರೋಚಕ ಜಯ

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 
ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ. 

ಈ ಮೂಲಕ 2019ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. 

ಈಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್‌ನ ವಿಜೇತ ತಂಡದ ಸವಾಲನ್ನು ಎದುರಿಸಲಿದೆ. ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ ಮುಖಾಮುಖಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ. 

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಮೋಯಿನ್ ಅಲಿ (51*) ಹಾಗೂ ಡೇವಿಡ್ ಮಲಾನ್ (42) ಉಪಯುಕ್ತ ಆಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 166 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.  

ಬಳಿಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಡೆರಿಲ್ ಮಿಚೆಲ್ (72*), ಡೆವೊನ್ ಕಾನ್ವೆ (46)ಹಾಗೂ ಜೇಮ್ಸ್ ನೀಶಮ್ (27) ದಿಟ್ಟ ಹೋರಾಟದ ಬೆಂಬಲದೊಂದಿಗೆ ಇನ್ನು ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಜೇಮ್ಸ್ ನೀಶಮ್ ಅಬ್ಬರ

ರೋಚಕ ಹಂತದಲ್ಲಿ ಪಂದ್ಯ

ಅಂತಿಮ 2 ಓವರ್‌ನಲ್ಲಿ ಕಿವೀಸ್ ಗೆಲುವಿಗೆ 20 ರನ್ ಬೇಕಿದೆ. 

ಲಿವಿಂಗ್‌ಸ್ಟೋನ್ ಸ್ಪಿನ್ ಮೋಡಿ

ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ ಬೇಕು 60 ರನ್

15 ಓವರ್ ಅಂತ್ಯಕ್ಕೆ ನ್ಯೂಜಿಲೆಂಡ್ ಮೂರು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ಅಂತಿಮ 5 ಓವರ್‌ಗಳಲ್ಲಿ ಗೆಲುವಿಗೆ 60 ರನ್ ಬೇಕಿದೆ. 

ಅರ್ಧಶತಕ ವಂಚಿತ ಕಾನ್ವೆ

ಕ್ವಾನೆ ಸ್ಟಂಪ್ ಔಟ್, ಮಹತ್ವದ ವಿಕೆಟ್ ಪಡೆದ ಲಿವಿಂಗ್‌ಸ್ಟೋನ್

ಕಾನ್ವೆ ದಿಟ್ಟ ಹೋರಾಟ

ಮಾರ್ಕ್ ವುಡ್ ದಾಳಿಯಲ್ಲಿ ಕಾನ್ವೆ ಸಿಕ್ಸರ್

ಇಂಗ್ಲೆಂಡ್‌ಗೆ ಕಿವೀಸ್ ತಿರುಗೇಟು

ಕಾನ್ವೆ-ಮಿಚೆಲ್ ಫಿಫ್ಟಿ ಜೊತೆಯಾಟ

10 ಓವರ್ ಅಂತ್ಯಕ್ಕೆ ಕಿವೀಸ್ 58/2

10 ಓವರ್ ಅಂತ್ಯಕ್ಕೆ ಕಿವೀಸ್ ಎರಡು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಅಂತಿಮ 60 ಎಸೆತಗಳಲ್ಲಿ ತಂಡದ ಗೆಲುವಿಗೆ 109 ರನ್ ಬೇಕಿದೆ. ಡೆರಿಲ್ ಮಿಚೆಲ್ (22*) ಹಾಗೂ ಡೆವೊನ್ ಕಾನ್ವೆ (26*) ಕ್ರೀಸಿನಲ್ಲಿದ್ದಾರೆ. 

ಕಿವೀಸ್‌ಗೆ ಕಾನ್ವೆ ಆಸರೆ

ಬೌಂಡರಿ ಬಾರಿಸಿದ ಡೆವೊನ್ ಕಾನ್ವೆ

ಪವರ್ ಪ್ಲೇ ಅಂತ್ಯಕ್ಕೆ ಕಿವೀಸ್ 36/2

ಪವರ್ ಪ್ಲೇ ಅಂತ್ಯಕ್ಕೆ ನ್ಯೂಜಿಲೆಂಡ್ ಎರಡು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. ಮಾರ್ಟಿನ್ ಗಪ್ಟಿಲ್ (4) ಹಾಗೂ ನಾಯಕ ಕೇನ್ ವಿಲಿಯಮ್ಸನ್ (5) ವಿಕೆಟ್ ನಷ್ಟವಾಗಿದೆ. ಡೆರಿಲ್ ಮಿಚೆಲ್ (12*) ಹಾಗೂ ಡೆವೊನ್ ಕಾನ್ವೆ (14*) ಕ್ರೀಸಿನಲ್ಲಿದ್ದಾರೆ. 

ಕೆಟ್ಟ ಹೊಡೆತಕ್ಕೆ ದೊಡ್ಡ ಬೆಲೆ ತೆತ್ತ ವಿಲಿಯಮ್ಸನ್

ವಿಲಿಯಮ್ಸನ್ ಹೊರದಬ್ಬಿದ ಕ್ರಿಸ್ ವೋಕ್ಸ್

ಶ್ರೀಲಂಕಾ ಅಭಿಮಾನಿಗಳ ಕ್ರಿಕೆಟ್ ಪ್ರೀತಿ

ಮೊದಲ ಓವರ್‌ನಲ್ಲೇ ಆಘಾತ ನೀಡಿದ ಕ್ರಿಸ್ ವೋಕ್ಸ್

ಮಾರ್ಟಿನ್ ಗಪ್ಟಿಲ್ 4 ರನ್ ಗಳಿಸಿ ಔಟ್

ಪಂದ್ಯದ ಗತಿ ಬದಲಾಯಿಸಿದ ಮಲಾನ್-ಮೋಯಿನ್ ಜೊತೆಯಾಟ

ಮೋಯಿನ್ ಅಲಿ ಸಿಕ್ಸರ್

ಮೋಯಿನ್ ಅಲಿ ಅಜೇಯ ಅರ್ಧಶತಕ ಸಾಧನೆ

ಮೋಯಿನ್ ಅಲಿ ಫಿಫ್ಟಿ; ಇಂಗ್ಲೆಂಡ್ 166/4

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 166 ರನ್‌‍ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಇಂಗ್ಲೆಂಡ್ ಪರ ಮೋಯಿನ್ ಅಲಿ (51*) ಆಕರ್ಷಕ ಅರ್ಧಶತಕ ಗಳಿಸಿದರು. ಡೇವಿಡ್ ಮಲಾನ್ (42),  ಜೋಸ್ ಬಟ್ಲರ್ (29) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (17) ಸಹ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ಮಲಾನ್ ವಿಕೆಟ್ ಪಡೆದ ಸೌಥಿ

ಮಲಾನ್ ಸಿಕ್ಸರ್

ಮೊಯಿನ್ ಅಲಿ ಆಕರ್ಷಕ ಆಟ

ಅರ್ಧಶತಕ ವಂಚಿತ ಮಲಾನ್

ಮಲಾನ್ ಉಪಯುಕ್ತ ಆಟ

ಮಲಾನ್-ಅಲಿ ಫಿಫ್ಟಿ ಜೊತೆಯಾಟ

15 ಓವರ್ ಅಂತ್ಯಕ್ಕೆ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ. ಡೇವಿಡ್ ಮಲಾನ್ (36*) ಹಾಗೂ ಮೊಯಿನ್ ಅಲಿ (25*) ಕ್ರೀಸಿನಲ್ಲಿದ್ದಾರೆ. 

ಬಟ್ಲರ್ ರಿವರ್ಸ್ ಸ್ವೀಪ್ ಬೌಂಡರಿ

ವಿಲಿಯಮ್ಸನ್ ಅತ್ಯುತ್ತಮ ಕ್ಯಾಚ್; ಬೆಸ್ಟೊ ನಿರ್ಗಮನ

ಬಟ್ಲರ್ ಆಟದ ವೈಖರಿ

29 ರನ್ ಗಳಿಸಿ ಬಟ್ಲರ್ ಔಟ್

ನ್ಯೂಜಿಲೆಂಡ್ ನಿಖರ ದಾಳಿ

10 ಓವರ್ ಅಂತ್ಯಕ್ಕೆ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ಜಾನಿ ಬೆಸ್ಟೊ (13), ಜೋಸ್ ಬಟ್ಲರ್ (29) ವಿಕೆಟ್ ನಷ್ಟವಾಗಿದೆ. ಕ್ರೀಸಿನಲ್ಲಿದ್ದಾರೆ.  

ಬೆಸ್ಟೊ 13 ರನ್ ಗಳಿಸಿ ಔಟ್

ಪವರ್ ಪ್ಲೇ ಅಂತ್ಯಕ್ಕೆ ಇಂಗ್ಲೆಂಡ್ 40/1

ಪವರ್ ಪ್ಲೇ ಅಂತ್ಯಕ್ಕೆ ಇಂಗ್ಲೆಂಡ್ ಒಂದು ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ. ಜಾನಿ ಬೆಸ್ಟೊ (13) ವಿಕೆಟ್ ನಷ್ಟವಾಗಿದೆ. ಜೋಸ್ ಬಟ್ಲರ್ (20*) ಕ್ರೀಸಿನಲ್ಲಿದ್ದಾರೆ.  

ಫೈನಲ್ ರೇಸ್...

ಬಟ್ಲರ್-ಬೆಸ್ಟೊ ಆರಂಭಿಕ ಜೋಡಿ

ಇಂಗ್ಲೆಂಡ್ ಎಚ್ಚರಿಕೆಯ ಆರಂಭವನ್ನು ಪಡೆದಿದೆ. ಮೂರು ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ. 

ಟಾಸ್ ಗೆದ್ದ ಕೇನ್ ವಿಲಿಯಮ್ಸನ್

ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಗೆಲುವು ಯಾರಿಗೆ?

ಇಂಗ್ಲೆಂಡ್ ತಯಾರಿ

ಕೇನ್ ವಿಲಿಯಮ್ಸನ್ vs ಏಯಾನ್ ಮಾರ್ಗನ್

ಇಂಗ್ಲೆಂಡ್ ಆಟಗಾರರ ತಯಾರಿ

ರೋಚಕ ಪಂದ್ಯಕ್ಕೆ ಕ್ಷಣಗಣನೆ

ತಂಡಗಳು ಇಂತಿವೆ:

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜಾನಿ ಬೆಸ್ಟೊ, ಸ್ಯಾಮ್ ಬಿಲಿಂಗ್ಸ್, ಜಾಸ್ ಬಟ್ಲರ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೇಮ್ಸ್ ವಿನ್ಸಿ, ಡೇವಿಡ್ ವಿಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಟಾಮ್ ಕರನ್, ರೀಸ್ ಟಾಪ್ಲೆ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಲೆ, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪಮನ್, ಡೇವನ್ ಕಾನ್ವೆ, ಮಾರ್ಟಿನ್ ಗಪ್ಟಿಲ್, ಕೈಲ್ ಜೆಮಿಸನ್, ಡೆರಿಲ್ ಮಿಚೆಲ್, ಜೇಮ್ಸ್ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೀಫರ್ಟ್, ಈಶ್ ಸೋಧಿ, ಟಿಮ್ ಸೌಥಿ, ಆ್ಯಡಂ ಮಿಲ್ನೆ.

ಇಂಗ್ಲೆಂಡ್ vs ನ್ಯೂಜಿಲೆಂಡ್

ಶಾಂತಚಿತ್ತದ ನಾಯಕ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡಕ್ಕೆ ’ಗಾಯದ ಸಮಸ್ಯೆ‘ಯಿಂದ ಬಳಲಿರುವ ಇಂಗ್ಲೆಂಡ್ ತಂಡವು ಬುಧವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಸವಾಲೊಡ್ಡಲಿದೆ.

ಟೂರ್ನಿಯ ಆರಂಭಕ್ಕೂ ಮುನ್ನವೇ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿ ಬಿಂಬಿತವಾಗಿರುವ ಇಂಗ್ಲೆಂಡ್ ತಂಡದ ಆಟಗಾರರಿಗೆ ಗಾಯದ ಸಮಸ್ಯೆ ಬೆನ್ನು ಹತ್ತಿದೆ. ಆದರೂ ಸೂಪರ್ 12 ರ ಹಂತದ ಮೊದಲ ಗುಂಪಿನಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಗುಂಪಿನ ಐದನೇ ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ಎದುರು ಸೋತಿತ್ತು. ಉತ್ತಮ ಲಯದಲ್ಲಿದ್ದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಮೀನಖಂಡದ ಗಾಯದಿಂದಾಗಿ ಟೂರ್ನಿಯಿಂದ ಹೊರನಡೆದಿದ್ದಾರೆ. ಇದರಿಂದಾಗಿ ಜಾಸ್ ಬಟ್ಲರ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಜಾನಿ ಬೆಸ್ಟೊಗೆ ಅವಕಾಶ ಸಿಗಬಹುದು.

ಬೌಲರ್ ಟೈಮಲ್ ಮಿಲ್ಸ್‌ ಕೂಡ ಗಾಯಗೊಂಡು ಹೊರನಡೆದಿದ್ದಾರೆ. ಆದ್ದರಿಂದ ಬೌಲಿಂಗ್‌ ವಿಭಾಗದಲ್ಲಿ ಚಿಂತೆ ಕಾಡುತ್ತಿದೆ. ಮಾರ್ಕ್ ವುಡ್‌ ವೇಗದ ಎಸೆತಗಳನ್ನು ಹಾಕಬಲ್ಲರು. ಆದರೆ, ಮಿಲ್ಸ್‌ ಅವರಂತೆ ವೈವಿಧ್ಯತೆ ಇಲ್ಲ. ದಕ್ಷಿಣ ಆಫ್ರಿಕಾ ಎದುರು ವುಡ್ಸ್‌ ದುಬಾರಿಯಾಗಿದ್ದರು. ಆದ್ದರಿಂದ ಸ್ಪಿನ್ನರ್ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. 2019ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ರೋಚಕ ಹಣಾಹಣಿಯಲ್ಲಿ ಏಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಗೆದ್ದಿತ್ತು.

ಆ ದಿನದ ಮುಯ್ಯಿ ತೀರಿಸಿಕೊಳ್ಳಲು ಕೇನ್ ವಿಲಿಯಮ್ಸನ್ ಬಳಗ ಸಿದ್ಧವಾಗಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತಿದ್ದ ತಂಡವು ನಂತರ ನಿರಂತರವಾಗಿ ಗೆಲುವಿನ ಹಾದಿಯಲ್ಲಿದೆ.ಸ್ಥಿರವಾದ ಪ್ರದರ್ಶನದ ಮೂಲಕ ಆಟಗಾರರು ತಂಡವನ್ನು ಸೆಮಿಫೈನಲ್‌ ಹಂತಕ್ಕೆ ತಂದಿದ್ದಾರೆ.

ವೇಗಿಗಳಾದ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಸ್ಪಿನ್ನರ್ ಈಶ್ ಸೋಧಿ, ಮಿಚೆಲ್ ಸ್ಯಾಂಟನರ್  ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರು. ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ ಬ್ಯಾಟಿಂಗ್‌ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಕೇನ್, ಡೆವೊನ್ ಕಾನ್ವೆ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ಬಳಗವು ಇಂಗ್ಲೆಂಡ್ ಗೆ ಕಠಿಣ ಪೈಪೋಟಿಯೊಡ್ಡುವ ಸಾಧ್ಯತೆಗಳು ಹೆಚ್ಚಿವೆ.

ಪಿಚ್ ಹೇಗಿದೆ?: ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದ ಪಿಚ್‌ ಮೊದಲಿನಿಂದಲೂ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿದೆ. ಅದರಿಂದಾಗಿ ಇಲ್ಲಿ ರನ್‌ಗಳ ಹೊಳೆ ಹರಿಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.