ADVERTISEMENT

T20 WC | IND vs NZ: ಕಿವೀಸ್ ವಿರುದ್ಧ ಮುಗ್ಗರಿಸಿದ ಭಾರತದ ಸೆಮೀಸ್ ಹಾದಿ ಕಠಿಣ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 17:20 IST
Last Updated 31 ಅಕ್ಟೋಬರ್ 2021, 17:20 IST

ನ್ಯೂಜಿಲೆಂಡ್ ಗೆಲುವಿನ ಕ್ಷಣ

ಭಾರತಕ್ಕೆ ಸತತ ಎರಡನೇ ಸೋಲು, ಸೆಮೀಸ್ ಹಾದಿ ಕಠಿಣ

ನ್ಯೂಜಿಲೆಂಡ್‌ಗೆ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ. 

ಇದರೊಂದಿಗೆ ಸತತ ಎರಡನೇ ಸೋಲಿನ ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಕನಸು ಬಹುತೇಕ ಅಸ್ತಮಿಸಿದೆ. ಈ ಮೊದಲು ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಹೀನಾಯ ಸೋಲಿಗೆ ಶರಣಾಗಿತ್ತು. 

ADVERTISEMENT

ಭಾರತ ಒಡ್ಡಿದ 111 ರನ್ ಗೆಲುವಿನ ಗುರಿಯನ್ನು 14.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ತಲುಪಿದ ನ್ಯೂಜಿಲೆಂಡ್ ಜಯಭೇರಿ ಮೊಳಗಿಸಿತು. 

ಡೆರಿಲ್ ಮಿಚೆಲ್ 49 ರನ್ ಗಳಿಸಿ ಔಟ್

ಗೆಲುವಿನತ್ತ ಕಿವೀಸ್

10 ಓವರ್ ಅಂತ್ಯಕ್ಕೆ ನ್ಯೂಜಿಲೆಂಡ್ ಒಂದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಇದರೊಂದಿಗೆ ಭಾರತ ಸೋಲಿನ ಭೀತಿಗೊಳಗಾಗಿದೆ. 

ಪವರ್ ಪ್ಲೇ ಅಂತ್ಯಕ್ಕೆ ನ್ಯೂಜಿಲೆಂಡ್ 44/1

ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಮಾರ್ಟಿನ್ ಗಪ್ಟಿಲ್ (20) ವಿಕೆಟ್ ಜಸ್‌ಪ್ರೀತ್ ಬೂಮ್ರಾ ಕಬಳಿಸಿದರು. 

ಗೆಲುವಿನ ನಿರೀಕ್ಷೆಯಲ್ಲಿ ಪೂಜಾರ

ಭಾರತ 110/7

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿರುವ ಟೀಮ್ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಸಮರ್ಥವಾಗಿದೆ. 

ಭಾರತದ ಬ್ಯಾಟರ್‌ಗಳು ಯಾವ ಹಂತದಲ್ಲೂ ಹೋರಾಟದ ಮನೋಭಾವವನ್ನು ತೋರಲೇ ಇಲ್ಲ. ಅಲ್ಲದೆ ಕಿವೀಸ್ ಬೌಲರ್‌ಗಳ ನಿಖರ ದಾಳಿಯ ಎದುರು ಪೆವಿಲಿಯನ್ ಪೆರೇಡ್ ನಡೆಸಿದರು. 

ಕೊನೆಯ ಹಂತದಲ್ಲಿ ರವೀಂದ್ರ ಜಡೇಜ 26* ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇಶಾನ್ ಕಿಶನ್ (4), ಕೆ.ಎಲ್ ರಾಹುಲ್ (18), ರೋಹಿತ್ ಶರ್ಮಾ (14), ನಾಯಕ ವಿರಾಟ್ ಕೊಹ್ಲಿ (9), ರಿಷಭ್ ಪಂತ್ (12) ಹಾಗೂ ಹಾರ್ದಿಕ್ ಪಾಂಡ್ಯ (23) ನಿರಾಸೆ ಮೂಡಿಸಿದರು. 

ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮೂರು ಹಾಗೂ ಇಶ್ ಸೋಧಿ ಎರಡು ವಿಕೆಟ್ ಕಬಳಿಸಿದರು. 

ರಿಷಭ್ ಪಂತ್ ಔಟ್

ಬೌಂಡರಿ ಗೆರೆ ಬಳಿಯಲ್ಲಿ ಅದ್ಭುತ ಫೀಲ್ಡಿಂಗ್

ಭಾರತದ ಐದನೇ ವಿಕೆಟ್ ಪತನ

15 ಓವರ್ ಅಂತ್ಯಕ್ಕೆ ಭಾರತ ಐದು ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ (13*) ಹಾಗೂ ರವೀಂದ್ರ ಜಡೇಜ (0*) ಕ್ರೀಸಿನಲ್ಲಿದ್ದಾರೆ. 

ನಾಯಕ ವಿರಾಟ್ ಕೊಹ್ಲಿ ಔಟ್

10 ಓವರ್ ಅಂತ್ಯಕ್ಕೆ ಭಾರತ 48/3

10 ಓವರ್ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ (9*) ಹಾಗೂ ರಿಷಭ್ ಪಂತ್ (3*) ಕ್ರೀಸಿನಲ್ಲಿದ್ದಾರೆ.  

ರೋಹಿತ್ 14 ರನ್ ಗಳಿಸಿ ನಿರ್ಗಮನ

ಸದ್ದು ಮಾಡಲಿಲ್ಲ ರೋಹಿತ್ ಬ್ಯಾಟ್

ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ವಿಕೆಟ್ ಕೂಡ ಭಾರತಕ್ಕೆ ನಷ್ಟವಾಗಿದೆ. ಇದರೊಂದಿಗೆ 40 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

ನಿರಾಸೆ ಮೂಡಿಸಿದ ರಾಹುಲ್

ಪವರ್ ಪ್ಲೇ ಅಂತ್ಯಕ್ಕೆ ಭಾರತ 35/2

ಪವರ್ ಪ್ಲೇ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ. ಭಾರತದಕ್ಕೆ ಇಶಾನ್ ಕಿಶನ್ (4) ಹಾಗೂ ಕೆ.ಎಲ್. ರಾಹುಲ್ (18) ವಿಕೆಟ್ ನಷ್ಟವಾಗಿದೆ. ರೋಹಿತ್ ಶರ್ಮಾ (13*) ಕ್ರೀಸಿನಲ್ಲಿದ್ದಾರೆ. 

ರೋಹಿತ್‌ಗೆ ಜೀವದಾನ

ಇಶಾನ್ ಕಿಶನ್ 4 ರನ್ ಗಳಿಸಿ ಔಟ್

ಭಾರತದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ ಸ್ಥಾನದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ ಕೇವಲ ನಾಲ್ಕು ರನ್ ಗಳಿಸಿ ಔಟ್ ಆದರು. 

ಹಾರ್ದಿಕ್ ಇನ್, ಭಾರತ ತಂಡದಲ್ಲಿ ಎರಡು ಬದಲಾವಣೆ

ಭಾರತ ತಂಡದಲ್ಲಿ ಎರಡು ಬದಲಾವಣೆ ತರಲಾಗಿದೆ. ಗಾಯಾಳು ಸೂರ್ಯಕುಮಾರ್ ಯಾದವ್ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಡಲಾಗಿದೆ. ಅವರ ಸ್ಥಾನಗಳಿಗೆ ಇಶಾನ್ ಕಿಶನ್ ಹಾಗೂ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಲಾಗಿದೆ. 

ಅಂತೆಯೇ ಹಾರ್ದಿಕ್ ಪಾಂಡ್ಯ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. 

ಸೂರ್ಯಕುಮಾರ್ ಯಾದವ್‌ಗೆ ಗಾಯದ ಸಮಸ್ಯೆ

ಟಾಸ್ ಝಲಕ್

ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್ ಆಯ್ಕೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.  

ಕೇನ್ ವಿಲಿಯಮ್ಸನ್ ಹೇಳಿಕೆ

ಕಿವೀಸ್ ತಂಡ ಆಗಮನ

ಪಿಚ್ ಹೇಗಿದೆ ನೋಡಿ

ಟೀಮ್ ಇಂಡಿಯಾ ರೆಡಿ

ಹಾರ್ದಿಕ್ ಪಾಂಡ್ಯ ಕಣಕ್ಕೆ?

ಕಿವೀಸ್ ಬಗ್ಗೆ ಕೊಹ್ಲಿ ಮಾತು

'ಮಾಡು ಇಲ್ಲವೇ ಮಡಿ'

ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ಅತ್ಯಂತ ಕಠಿಣವಾದ ಸವಾಲಿನ ಹೊಸ್ತಿಲಲ್ಲಿ ನಿಂತಿದ್ದಾರೆ. ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥೇಯ ತಂಡವಾಗಿರುವ ಭಾರತ ತಂಡಕ್ಕೆ ಸೆಮಿಫೈನಲ್‌ ಪ್ರವೇಶದ ಕನಸು ಜೀವಂತವಾಗಿ ಉಳಿಯಬೇಕಾದರೆ ಭಾನುವಾರ ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು ಜಯಿಸಲೇಬೇಕು. ಕಿವೀಸ್ ಬಳಗಕ್ಕೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವೇ ಆಗಿದೆ. ಸೋತವರಿಗೆ ನಾಲ್ಕರ ಘಟ್ಟದ ಬಾಗಿಲು ಮುಚ್ಚುವ ಸಾಧ್ಯತೆ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.