ADVERTISEMENT

ICC T20 World cup: ಉಗಾಂಡ ಕೇವಲ 40 ರನ್‌ಗೆ ಆಲೌಟ್‌– ಕಿವೀಸ್ ಗೆಲುವಿನ ನಗೆ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉಗಾಂಡ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭರ್ಜರಿ ಗೆಲುವು ದಾಖಲಿಸಿತು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2024, 3:33 IST
Last Updated 15 ಜೂನ್ 2024, 3:33 IST
<div class="paragraphs"><p>ICC T20 World cup: ಉಗಾಂಡ ಕೇವಲ 40 ರನ್‌ಗೆ ಆಲೌಟ್‌– ಕಿವೀಸ್ ಗೆಲುವಿನ ನಗೆ</p></div>

ICC T20 World cup: ಉಗಾಂಡ ಕೇವಲ 40 ರನ್‌ಗೆ ಆಲೌಟ್‌– ಕಿವೀಸ್ ಗೆಲುವಿನ ನಗೆ

   

ಬೆಂಗಳೂರು: ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉಗಾಂಡ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಸೋತ ಉಗಾಂಡ ಬ್ಯಾಟಿಂಗ್‌ಗೆ ಇಳಿದು ರನ್ ಗಳಿಸಲು ತಿಣುಕಾಡಿತು. ನ್ಯೂಜಿಲೆಂಡ್‌ನ ಶಿಸ್ತಿನ ದಾಳಿಗೆ ತತ್ತರಿಸಿದ ಉಗಾಂಡ 18.4 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 40 ರನ್ ಗಳಿಸಿತು. ಇದರಲ್ಲಿ 8 ರನ್‌ಗಳು ಇತರೆ ಇಂದಲೇ ಬಂದಿದ್ದು ವಿಶೇಷ.

ADVERTISEMENT

ಉಗಾಂಡ ಪರ ಕೆನ್ನಿತ್ 11 ರನ್ ಹಾಗೂ ಫ್ರೆಡ್ ಅಚ್‌ಲೆಮ್ 9 ರನ್ ಹೊಡೆದಿದ್ದು ಹೆಚ್ಚು. ನ್ಯೂಜಿಲೆಂಡ್ ಪರ ಟೀಮ್ ಸೌಥಿ, ರಚಿನ್ ರವೀಂದ್ರ ಹಾಗೂ ಟ್ರೆಂಟ್ ಅವರು ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 5.2 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿ ವಿಜಯದ ನಗೆ ಬೀರಿತು. ನ್ಯೂಜಿಲೆಂಡ್ ಪರ ಡೇವೊನ್ ಕಾನ್‌ವೊ ಔಟಾಗದೇ 29 ರನ್ ಗಳಿಸಿದರು. ಫಿನ್ ಅಲೇನ್ 9 ಹಾಗೂ ರಚಿನ್ ರವೀಂದ್ರ 1 ರನ್ ಗಳಿಸಿದರು.

ಈ ಪಂದ್ಯ ಟಿ20 ವಿಶ್ವಕಪ್‌ನಲ್ಲಿ ಎರಡನೇ ಅತಿ ಕಡಿಮೆ ರನ್ ದಾಖಲಿಸಿದ ಪಂದ್ಯ ಎಂದು ದಾಖಲೆ ಬರೆಯಿತು. 2021ರಲ್ಲಿ ಶ್ರೀಲಂಕಾ–ನೆದರ್‌ಲೆಂಡ್ಸ್ ಪಂದ್ಯದಲ್ಲಿ ನೆದರ್‌ಲೆಂಡ್ಸ್ 44 ರನ್‌ಗಳಿಗೆ ಆಲ್‌ಔಟ್ ಆಗಿತ್ತು.

ಸಿ ಗುಂಪಿನಲ್ಲಿ ನ್ಯೂಜಿಲೆಂಡ್, ಪಾಪುವಾ ನ್ಯೂಗಿನಿ ಹಾಗೂ ಉಗಾಂಡ ತಂಡಗಳು ನಿರ್ಗಮಿಸಿವೆ. ಈ ಪೈಕಿ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಗುಂಪು ಹಂತದಿಂದಲೇ ನಿರ್ಗಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.