ADVERTISEMENT

ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯದ ಬಗ್ಗೆ ಚಿಂತೆ ಇಲ್ಲ: ವಿಕ್ರಮ್ ರಾಥೋಡ್

ಪಿಟಿಐ
Published 16 ಜೂನ್ 2024, 3:15 IST
Last Updated 16 ಜೂನ್ 2024, 3:15 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಫ್ಲಾರಿಡಾ: ಪ್ರಸಕ್ತ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ.

ADVERTISEMENT

ಮೊದಲ ಮೂರು ಪಂದ್ಯಗಳಲ್ಲಿ ಎರಡಂಕಿಯನ್ನು ತಲುಪಿಲ್ಲ. ಆದರೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಲಯದ ಬಗ್ಗೆ ಚಿಂತೆ ಇಲ್ಲ ಎಂದು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್‌ ವಿಕ್ರಮ್ ರಾಥೋಡ್ ತಿಳಿಸಿದ್ದಾರೆ.

ಐರ್ಲೆಂಡ್, ಪಾಕಿಸ್ತಾನ ಹಾಗೂ ಅಮೆರಿಕ ವಿರುದ್ಧ ವಿರಾಟ್ ಅನುಕ್ರಮವಾಗಿ 1, 4 ಹಾಗೂ ಶೂನ್ಯಕ್ಕೆ ಔಟ್ ಆಗಿದ್ದರು.

'ಪ್ರತಿ ಸಲವೂ ವಿರಾಟ್ ಲಯದ ಬಗ್ಗೆ ಪ್ರಶ್ನೆ ಬಂದಾಗ ಉತ್ತರಿಸಲು ಇಷ್ಟಪಡುತ್ತೇನೆ. ಅವರ ಬ್ಯಾಟಿಂಗ್ ಲಯದ ಕುರಿತು ಯಾವುದೇ ಚಿಂತೆಯಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ಐಪಿಎಲ್ ಟೂರ್ನಿಯಿಂದ ವಿರಾಟ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಂದೆರಡು ವೈಫಲ್ಯದಿಂದ ಏನೂ ಬದಲಾಗುವುದಿಲ್ಲ. ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.

ತಂಡಕ್ಕೆ ಹೆಚ್ಚು ಅಗತ್ಯವಿದ್ದ ಸಂದರ್ಭದಲ್ಲಿ ವಿರಾಟ್ ಬ್ಯಾಟ್ ಸದ್ದು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

'ನಿಜವಾಗಿಯೂ ಸ್ವಲ್ಪ ರನ್‌ಗಾಗಿನ ಹಸಿವು ಉತ್ತಮ. ಬ್ಯಾಟರ್ ಆಗಿ ಉತ್ತಮ ಸ್ಥಿತಿಯಲ್ಲಿರಲಿದ್ದು, ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.