ಶಾರ್ಜಾ: ವೆಸ್ಟ್ ಇಂಡೀಸ್ ತಂಡದ ಆಫ್‌ಸ್ಪಿನ್ನರ್ ಕರಿಷ್ಮಾ ರಾಮಾರ್ಕ್ (17ಕ್ಕೆ4) ಅವರ ಅಮೋಘ ಬೌಲಿಂಗ್ ಮುಂದೆ ಬಾಂಗ್ಲಾದೇಶ ತಂಡವು ಕುಸಿಯಿತು.
ಇಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ವಿಂಡೀಸ್ ತಂಡವು 8 ವಿಕೆಟ್‌ಗಳಿಂದ ಜಯಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರಿಷ್ಮಾ ಅವರ ಬೌಲಿಂಗ್ ಎದುರು ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 103 ರನ್ ಗಳಿಸಿತು. ನಾಯಕಿ ನಿಜರ್ ಸುಲ್ತಾನಾ (39 ರನ್) ಅವರೊಬ್ಬರೇ ಹೋರಾಟ ಮಾಡಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು.
ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು 12.5 ಓವರ್‌ಗಳಲ್ಲಿ2 ವಿಕೆಟ್‌ಗಳಿಗೆ 104 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಹೇಯಲಿ ಮ್ಯಾಥ್ಯೂಸ್ (34; 22ಎ, 4X6) ಅವರು ಉತ್ತಮ ಆರಂಭ ನೀಡಿದರು. ದಿಯಾಂದ್ರಾ ಡಾಟಿನ್ (ಔಟಾಗದೆ 19; 7ಎ, 4X1, 6X2) ಮಿಂಚಿನ ಬ್ಯಾಟಿಂಗ್ ಮಾಡಿದರು.
ವಿಂಡೀಸ್ ತಂಡದ ಲೆಗ್‌ಬ್ರೇಕ್ ಬೌಲರ್ ಎಫೈ ಫ್ಲೆಚರ್ ಅವರೂ ಎರಡು ವಿಕೆಟ್ ಗಳಿಸಿದರು.
ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮೂರನೇ ಪಂದ್ಯ ಹಾಗೂ ಎರಡನೇ ಜಯವಾಗಿದೆ. ಬಾಂಗ್ಲಾ ತಂಡಕ್ಕೆ ಇದು ಎರಡನೇ ಸೋಲು.
ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 103 (ದಿಲಾರಾ ಅಕ್ತರ್ 19, ಶೋಭನಾ ಮೊಸ್ತಾರೆ 16, ನಿಜರ್ ಸುಲ್ತಾನಾ 39,ರಿತು ಮೋನಿ 10, ಕರಿಷ್ಮಾ ರಾಮಾರ್ಕ್ 17ಕ್ಕೆ4, ಎಫೈ ಫ್ಲೆಚರ್ 25ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.