ಮೆಲ್ಬೋರ್ನ್:ಜಂಕ್ಷನ್ ಓವಲ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮಹಿಳಾ ಟಿ20ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತದ ವನಿತೆಯರು ನಾಲ್ಕು ರನ್‌ಗಳ ರೋಚಕ ಜಯ ದಾಖಲಿಸಿದ್ದಾರೆ.
ಈ ಗೆಲುವಿನೊಂದಿಗೆ ಭಾರತದ ಮಹಿಳಾ ತಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಭಾರತ ನೀಡಿದ 133 ರನ್‌ಗ ಗುರಿ ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡದ ಆರಂಭಿಕರು ಉತ್ತಮ ರನ್ ಕಲೆ ಹಾಕುವಲ್ಲಿ ವಿಫಲರಾದರು. ನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರರು ತಕ್ಕ ಮಟ್ಟಿನ ಪ್ರತಿರೋಧ ತೋರಿದರು. ಮ್ಯಾಡಿ ಗ್ರೀನ್ 24, ಕ್ಯಾಟಿ ಮಾರ್ಟಿನ್ 24 ರನ್‌ಗಳ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು. ನಂತರ ಬಂದ ಅಮೆಲಿಯಾ ಕೇರ್ ಕೇವಲ 19 ಬಾಲ್‌ಗಳಿಂದ 34 ರನ್ ಸಿಡಿಸಿ ಮಿಂಚಿನ ಆಟ ಪ್ರದರ್ಶಿಸಿದರು. ಔಟಾಗದೇ ಉಳಿದ ಅವರು ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು.
ಎರಡೂ ತಂಡಗಳ ಸಮಬಲದ ಹೋರಾಟದ ಪರಿಣಾಮವಾಗಿ ಪಂದ್ಯವು ಕೊನೆ ಬಾಲ್ ವರೆಗೆ ರೋಚಕತೆ ಉಳಿಸಿಕೊಂಡಿತ್ತು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 129ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ದೀಪ್ತಿ, ಶಿಖಾ, ರಾಜೇಶ್ವರಿ, ಪೂನಮ್ ಮತ್ತು ರಾಧಾ ಅವರು ತಲಾ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.