ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಐಸಿಸಿಯ ನಿಯಮ ಉಲ್ಲಂಘಿಸಿದ ಭಾರತದ ತಂಡದ ಬೌಲರ್ ಅರುಂಧತಿ ರೆಡ್ಡಿ ಅವರನ್ನು ವಾಗ್ದಂಡನೆಗೆ ಗುರಿ ಪಡಿಸಲಾಗಿದೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಭಾರತ ತಂಡವು ಆರು ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಗೆಲುವಿನ ರೂವಾರಿಯಾಗಿದ್ದರು. ಆದರೆ, ಅರುಂಧತಿ ಅವರು ಪಾಕ್ ತಂಡದ ನಿದಾ ದಾರ್ ಅವರನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಅಲ್ಲದೆ, ಪೆವಿಲಿಯನ್ಗೆ ಹೋಗುವಂತೆ ಕೈ ಸನ್ನೆ ಮಾಡಿದ್ದರು.
‘ಐಸಿಸಿಯ ನೀತಿ ಸಂಹಿತೆಯ ವಿಧಿ 2.5 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅರುಂಧತಿ ರೆಡ್ಡಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಯಾವುದೇ ಆಟಗಾರರು ಔಟಾದಾಗ ಆಕ್ರಮಣಕಾರಿ ವರ್ತನೆ ತೋರುವುದು ಮತ್ತು ಪಂದ್ಯದ ವೇಳೆ ಅವಾಚ್ಯ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದನ್ನು ಈ ನಿಯಮ ಸೂಚಿಸುತ್ತದೆ. ಅರುಂಧತಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ’ ಎಂದು ಐಸಿಸಿಯ ಪ್ರಕಟಣೆ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.