ಕ್ರೈಸ್ಟ್ ಚರ್ಚ್: ಟೂರ್ನಿಯಿಂದ ಹೊರಬೀಳುವ ಹಂತದಿಂದ ಪುಟಿದೆದ್ದು ಗೆಲುವಿನ ಹಾದಿಯಲ್ಲಿ ಮುನ್ನುಗ್ಗಿದ ಇಂಗ್ಲೆಂಡ್ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಹಂತಕ್ಕೆ ಲಗ್ಗೆ ಇರಿಸಿದೆ.
ಗುರುವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಇಂಗ್ಲೆಂಡ್ 137 ರನ್‌ಗಳಿಂದ ಮಣಿಸಿತು. ಹಾಲಿ ಚಾಂಪಿಯನ್ ಇಂಗ್ಲೆಂಡ್ ಲೀಗ್ ಹಂತದ ಆರಂಭದಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿತ್ತು. ನಂತರ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿತ್ತು.
ಗುರುವಾರ ಆರಂಭಿಕ ಬ್ಯಾಟರ್ ಡ್ಯಾನಿ ವ್ಯಾಟ್ (129; 125 ಎಸೆತ, 12 ಬೌಂಡರಿ) ಅವರ ಶತಕ ಮತ್ತು ಆರನೇ ಕ್ರಮಾಂಕದ ಸೋಫಿಯಾ ಡಂಕ್ಲಿ (60; 72 ಎ, 4 ಬೌಂ) ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 8ಕ್ಕೆ 293 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 38 ಓವರ್‌ಗಳಲ್ಲಿ 156 ರನ್‌ಗಳಿಗೆ ಪತನ ಕಂಡಿತು. ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅವರ ಪ್ರಬಲ ದಾಳಿ ತಂಡದ ಸುಲಭ ಜಯಕ್ಕೆ ಕಾರಣವಾಯಿತು.
ದಕ್ಷಿಣ ಆಫ್ರಿಕಾ 8 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದಲೂ ನಿರೀಕ್ಷಿತ ಸಾಮರ್ಥ್ಯ ಕಂಡುಬರಲಿಲ್ಲ. ಹೀಗಾಗಿ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಸಾಗಿತು. 110 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ತಂಡ ನಂತರ ಸ್ವಲ್ಪ ಚೇತರಿಸಿಕೊಂಡಿತು. ಅದರೂ ಗೆಲುವಿನತ್ತ ಹೆಜ್ಜೆ ಹಾಕಲು ಸಾಧ್ಯವಾಗಲೇ ಇಲ್ಲ.
ವ್ಯಾಟ್‌ಗೆ ಕೈಚೆಲ್ಲಿದ ಕ್ಯಾಚ್‌ಗಳ ಲಾಭ
ಹ್ಯಾಗ್ಲಿ ಓವಲ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ತಂಡಕ್ಕೆ ಡ್ಯಾನಿ ವ್ಯಾಟ್ ಬಲ ತುಂಬಿದರು. ದಕ್ಷಿಣ ಆಫ್ರಿಕಾ ಫೀಲ್ಡರ್‌ಗಳು ಐದು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಇದರ ಲಾಭ ಪಡೆದುಕೊಂಡ ವ್ಯಾಟ್ ಭರ್ಜರಿ ಬ್ಯಾಟಿಂಗ್ ಮಾಡಿದರು.
ಮತ್ತೊಂದು ತುದಿಯಲ್ಲಿ ಸತತವಾಗಿ ವಿಕೆಟ್‌ಗಳು ಉರುಳುತ್ತಿದ್ದವು. ಹೀಗಾಗಿ 26ನೇ ಓವರ್‌ನಲ್ಲಿ 4ಕ್ಕೆ 126 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ವ್ಯಾಟ್ ಜೊತೆಗೂಡಿದ ಸೋಫಿಯಾ ಡಂಕ್ಲಿ 116 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು ಏರುಗತಿಯಲ್ಲಿ ಸಾಗಿಸಿದರು.
ಮಹಿಳಾ ಕ್ರಿಕೆಟ್: ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ಸ್ಕೋರ್
ಇಂಗ್ಲೆಂಡ್ 8ಕ್ಕೆ 283 (50)
ಬ್ಯೂಮೌಂಟ್ ಸಿ ಚೆಟ್ಟಿ ಬಿ ಕಾಪ್ 7 (14 ಎ, 4x1), ವ್ಯಾಟ್ ಸಿ ಲೀ ಬಿ ಕ್ಲಾಸ್ 129 (125 ಎ, 4x12), ನೈಟ್ ಎಲ್‌ಬಿಡಬ್ಲ್ಯು ಬಿ ಖಾಕ 1 (19 ಎ), ಶೀವರ್ ಸಿ ಕಾಪ್ ಬಿ ಶಮ್ನಿಮ್ 15 (18 ಎ, 4x1), ಆ್ಯಮಿ ಸಿ ಟ್ರಯಾನ್ ಬಿ ಕಾಪ್ 28 (32 ಎ, 4x3), ಸೋಫಿಯಾ ಸಿ ಲೀ ಬಿ ಶಬ್ನಿಮ್ 60 (72 ಎ, 4x4), ಬ್ರಂಟ್ ಬಿ ಕ್ಲಾಸ್ 9 (9 ಎ, 4x1), ಎಕ್ಲೆಸ್ಟೋನ್ ಬಿ ಶಬ್ನಿಮ್ 24 (11 ಎ, 4x5), ಕ್ರಾಸ್ ಔಟಾಗದೆ 0 (0 ಎ)
ಇತರೆ: (ಬೈ 4, ವೈಡ್ 16) 20
ವಿಕೆಟ್ ಪತನ:1-10 (ಟಾಮಿ ಬ್ಯೂಮೌಂಟ್, 3.2), 2-51 (ಹೀದರ್ ನೈಟ್, 12.4), 3-77 (ನ್ಯಾಟ್ ಶೀವರ್, 17.1), 4-126 (ಆ್ಯಮಿ ಜೋನ್ಸ್, 25.4), 5-242 (ಡ್ಯಾನಿ ವ್ಯಾಟ್, 44.2), 6-261 (ಕ್ಯಾಥರಿನ್ ಬ್ರುಂಟ್, 46.5), 7-281 (ಸೋಫಿಯಾ ಡಂಕ್ಲಿ, 49.1), 8-293 (ಸೋಫಿಯಾ ಎಕ್ಲೆಸ್ಟೋನ್, 49.6)
ಬೌಲಿಂಗ್:ಶಬ್ನಿಮ್ ಇಸ್ಮಾಯಿಲ್ 10–0–46–3, ಮರಿಜನ್ ಕಾಪ್ 10–0–52–2, ಅಯಬೊಂಗ ಖಾಕ 10–0–66–1, ಮಸಬಟ ಕ್ಲಾಸ್ 10–1–55–2, ಕ್ಲೋ ಟ್ರಯಾನ್ 10–0–70–0
ದಕ್ಷಿಣ ಆಫ್ರಿಕಾ 156 (38 ಓವರ್)
ಲಿಜೆಲಿ ಸಿ ಶೀವರ್ ಬಿ ಶ್ರಬ್‌ಸೊಲ್ 2 (15 ಎ), ವೊಲ್ವಾರ್ಟ್ ಸಿ ಮತ್ತು ಬಿ ಶ್ರಬ್‌ಸೋಲ್ 0 (2 ಎ), ಗೂಡಾಲ್ ಬಿ ಡೀನ್ 28 (49 ಎ, 4x4), ಲೂಜ್ ಬಿ ಕ್ರಾಸ್ 21 (24 ಎ, 4x2), ಪ್ರೀಜ್ ಬಿ ಎಕ್ಲೆಸ್ಟೋನ್ 30 (48 ಎ, 4x2), ಮರಿಜಾನ್ ಬಿ ಎಕ್ಲೆಸ್ಟೋನ್ 21 (28 ಎ, 4x2), ಟ್ರಯಾನ್ ಸಿ ಶೀವರ್ ಬಿ ಎಕ್ಲೆಸ್ಟೋನ್ 3 (10 ಎ), ಟ್ರಿಶಾ ಸ್ಟಂಪ್ಡ್ ಜೋನ್ಸ್ ಬಿ ಎಕ್ಲೆಸ್ಟೋನ್ 21 (28 ಎ,4x1), ಶಬ್ನಿಮ್ ಸಿ ಡೀನ್ ಬಿ ಎಕ್ಲೆಸ್ಟೋನ್ 12 (14 ಎ, 4x2), ಕ್ಲಾಸ್ ಸಿ ಬ್ಯೂಮೌಂಟ್ ಬಿ ಎಕ್ಲೆಸ್ಟೋನ್ 3 (10 ಎ), ಅಯಬೊಂಗ ಔಟಾಗದೆ 0 (0 ಎ)
ಇತರೆ:(ಲೆಗ್‌ಬೈ 5, ವೈಡ್ 10) 15
ಇತರೆ:1-1 (ಲಾರಾ ವೊಲ್ವಾರ್ಟ್, 1.2), 2-8 (ಲಿಜೆಲಿ ಲೀ, 3.6), 3-44 (ಸೂನ್ ಲೂಜ್, 11.5), 4-67 (ಲಾರಾ ಗೂಡಾಲ್, 18.3), 5-96 (ಮರಿಜಾನ್ ಕಾಪ್, 25.3), 6-101 (ಕ್ಲೋ ಟ್ರಯಾನ್, 27.5), 7-110 (ಮಿಗ್ನನ್ ಡು ಪ್ರೀಜ್, 29.6), 8-148 (ಶಬ್ನಿಮ್ ಇಸ್ಮಾಯಿಲ್, 35.3), 9-152 (ಮಸಬಟ ಕ್ಲಾಸ್, 37.2), 10-156 (ಟ್ರಿಶಾ ಚೆಟ್ಟಿ, 37.6)
ಬೌಲಿಂಗ್:ಕ್ಯಾಥರಿನ್ ಬ್ರಂಟ್ 4–2–9–0, ಅನ್ಯಾ ಶ್ರಬ್‌ಸೋಲ್ 5–0–27–2, ನ್ಯಾಟ್ ಶೀವರ್ 5–0–16–0, ಕೇಟ್ ಕ್ರಾಸ್ 6–0–22–1, ಚಾರ್ಲಿ ಡೀನ್ 10–0–41–1, ಸೋಫಿ ಎಕ್ಲೆಸ್ಟೋನ್ 8–0–36–6
ಫಲಿತಾಂಶ: ಇಂಗ್ಲೆಂಡ್‌ಗೆ 137 ರನ್‌ಗಳ ಜಯ; ಫೈನಲ್ ಪ್ರವೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.