ಗಯಾನ, ವೆಸ್ಟ್‌ಇಂಡೀಸ್: ನ್ಯೂಜಿಲೆಂಡ್ ಬೌಲರ್‌ಗಳ ದಾಳಿಯನ್ನು ದೂಳೀಪಟ ಮಾಡಿದ ಭಾರತದ ಹರ್ಮನ್ ಪ್ರೀತ್ ಕೌರ್ ದಾಖಲೆಯ ಶತಕ ಸಿಡಿಸಿ ಸಂಭ್ರಮಿಸಿದರು. ಇಲ್ಲಿ ಶುಕ್ರವಾರ ಆರಂಭಗೊಂಡ ಮಹಿಳೆಯರ ವಿಶ್ವಕಪ್ ಟ್ವೆಂಟಿ–20 ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ 34 .ರನ್‌ಗಳ ಜಯ ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲಿ ಆಘಾತ ಕಾದಿತ್ತು. 40 ರನ್ ಗಳಿಸುವಷ್ಟರಲ್ಲಿ ತಾನಿಯಾ ಭಾಟಿಯಾ, ಸ್ಮೃತಿ ಮಂದಾನ ಮತ್ತು ಹೇಮಲತಾ ಅವರು ಪೆವಿಲಿಯನ್ ದಾರಿ ಹಿಡಿದಿದ್ದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಮುಂಬೈನ ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಜೊತೆಗೂಡಿ ಎದುರಾಳಿಗಳನ್ನು ಕಂಗೆಡಿಸಿದರು. ಶತಕದ ಜೊತೆಯಾಟವಾಡಿ ಸಂಭ್ರಮಿಸಿದರು.
ಜೆಮಿಮಾ (59; 45 ಎಸೆತ, 7 ಬೌಂಡರಿ) ಔಟಾದ ನಂತರ ಹರ್ಮನ್‌ಪ್ರೀತ್ ಕೌರ್ ಶತಕ ಸಿಡಿಸಿದರು. ಈ ಮೂಲಕ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಟಿದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು.
195 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 194 (ಜೆಮಿಮಾ ರಾಡ್ರಿಗಸ್ ಬ್ಯಾಟಿಂಗ್ 57, ಹರ್ಮನ್‌ಪ್ರೀತ್ ಕೌರ್ 103, ಲೀ ತಹುಹು 18ಕ್ಕೆ2, ಲೀಗ್ ಕಾಸ್ಪರೆಕ್ 28ಕ್ಕೆ1); ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 9ಕ್ಕೆ 160 (ಬೇಟ್ಸ್ 67, ಮಾರ್ಟಿನ್ 35; ಹೇಮಲತಾ 26ಕ್ಕೆ3, ಪೂನಂ ಯಾದವ್ 33ಕ್ಕೆ3). ಫಲಿತಾಂಶ: ಭಾರತಕ್ಕೆ 34 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.