ADVERTISEMENT

ICC World Cup | ಅಫ್ಗಾನಿಸ್ತಾನ ತಂಡದ ಆಟಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2023, 5:00 IST
Last Updated 24 ಅಕ್ಟೋಬರ್ 2023, 5:00 IST
<div class="paragraphs"><p>ಸಚಿನ್‌ ತೆಂಡೂಲ್ಕರ್‌ ಮತ್ತು ಅಫ್ಗಾನಿಸ್ತಾನ ತಂಡದ ಆಟಗಾರರು</p></div>

ಸಚಿನ್‌ ತೆಂಡೂಲ್ಕರ್‌ ಮತ್ತು ಅಫ್ಗಾನಿಸ್ತಾನ ತಂಡದ ಆಟಗಾರರು

   

ಬೆಂಗಳೂರು: ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಿನ್ನೆ (ಸೋಮವಾರ) ನಡೆದ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಇದೇ ಮೊದಲ ಬಾರಿಗೆ ಸೋಲಿಸುವ ಮೂಲಕ ಅಫ್ಗಾನಿಸ್ತಾನ ಐತಿಹಾಸಿಕ ಸಾಧನೆ ಮಾಡಿದೆ. ಅಫ್ಗಾನಿಸ್ತಾನ ತಂಡದ ಈ ಆಟಕ್ಕೆ ಸಚಿನ್‌ ತೆಂಡೊಲ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ತೆಂಡೊಲ್ಕರ್‌, ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನ ತಂಡದ ಪ್ರದರ್ಶನವು ಬಹಳ ಅತ್ಯುತ್ತಮವಾಗಿದೆ. ಆಟದಲ್ಲಿನ ಅವರ ಶಿಸ್ತು, ಅವರು ತೋರಿದ ಮನೋಧರ್ಮ, ವಿಕೆಟ್‌ಗಳ ನಡುವೆ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಇದು ಬಹುಶಃ ಅಜಯ್‌ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ADVERTISEMENT

ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳ ಮೇಲೆ ಅವರು ಸಾಧಿಸಿರುವ ಗೆಲುವು, ಕ್ರಿಕೆಟ್‌ ಜಗತ್ತಿಗೆ ಹೊಸ ಅಫ್ಗಾನಿಸ್ತಾನ ತಂಡ ಹೊರಹೊಮ್ಮುತ್ತಿರುವುದನ್ನು ಸೂಚಿಸುತ್ತಿದೆ ಎಂದು ತೆಂಡೂಲ್ಕರ್‌ ತಿಳಿಸಿದ್ದಾರೆ.

ನಿನ್ನೆ (ಸೋಮವಾರ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಎದುರಾಳಿ ತಂಡಕ್ಕೆ 282 ರನ್‌ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಅಫ್ಗಾನಿಸ್ತಾನ ತಂಡದ ಆಟಗಾರರು ಸುಲಭವಾಗಿ ಗುರಿ ಮುಟ್ಟಿದರು.

ಅಫ್ಗಾನಿಸ್ತಾನ ತಂಡವು 2 ವಿಕೆಟ್‌ ನಷ್ಟಕ್ಕೆ 49 ಓವರ್‌ಗಳಲ್ಲಿ 286 ರನ್‌ ಗಳಿಸಿ ವಿಜಯದ ನಗೆ ಬೀರಿತು.

ಸತತ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡಕ್ಕೆ ಅಫ್ಗಾನಿಸ್ತಾನದ ಎದುರು ಗೆಲುವು ಅನಿವಾರ್ಯವಾಗಿತ್ತು. ಆದರೆ ಎದುರಾಳಿ ತಂಡದ ಉತ್ತಮ ಆಟದ ಪ್ರದರ್ಶನದಿಂದಾಗಿ ಪಾಕಿಸ್ತಾನ ಪರಾಭವಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.