ADVERTISEMENT

ಸತ್ಯ ಹೇಳಿದರೆ ನಿಮ್ಮನ್ನು ಹುಚ್ಚ ಎನ್ನಲಾಗುತ್ತದೆ ಎಂದ ಪಾಕ್ ಮಾಜಿ ನಾಯಕ ಯೂನಿಸ್

ಏಜೆನ್ಸೀಸ್
Published 25 ಮೇ 2020, 9:57 IST
Last Updated 25 ಮೇ 2020, 9:57 IST
   

ಲಾಹೋರ್:ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಕೆಲವೇ ದಿನಗಳಲ್ಲಿ ನಾಯಕತ್ವದಿಂದ ಕೆಳಗಿಳಿದಮಾಜಿ ನಾಯಕ ಯೂನಿಸ್‌ ಖಾನ್‌, ತಾವು ನಾಯಕತ್ವ ತೊರೆದದ್ದು ಏಕೆ ಎಂದು ತಿಳಿಸಿದ್ದಾರೆ.ಸತ್ಯ ಹೇಳಿದರೆ ನಿಮ್ಮನ್ನು ಹುಚ್ಚ ಎಂದು ಪರಿಗಣಿಸಲಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾಯಕತ್ವದ ವಿಚಾರವಾಗಿಗಲ್ಫ್‌ ನ್ಯೂಸ್‌ ಜೊತೆ ನಡೆಸಿದ ಮಾತುಕತೆ ವೇಳೆ, ‘ಸತ್ಯವನ್ನು ಹೇಳಿದ ನಂತರ ನಿಮ್ಮನ್ನು ಹುಚ್ಚು ಮನುಷ್ಯ ಎಂದು ಕರೆದಿರುವ ಸನ್ನಿವೇಶಗಳನ್ನು ನಿಮ್ಮ ಜೀವನದಲ್ಲಿ ಸಾಕಷ್ಟು ಸಲ ಎದುರಿಸಿರುತ್ತೀರಿ. ಕೆಲವು ಆಟಗಾರರ ಗುಂಪು ದೇಶಕ್ಕಾಗಿ ಮೈದಾನದಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ ಎಂಬುದನ್ನು ಬೊಟ್ಟು ಮಾಡಿ ಹೇಳಿದ್ದು ನನ್ನ ತಪ್ಪಾಯಿತು’ ಎಂದು ಹೇಳಿಕೊಂಡಿದ್ದಾರೆ.

‘ಕೆಲ ಸಮಯದ ಬಳಿಕ ಆ ಆಟಗಾರರು ತಮ್ಮ ತಪ್ಪಿಗೆ ವಿಷಾಧಿಸಿದ್ದರು ಮತ್ತು ನಂತರನಾವೆಲ್ಲ ಒಂದು ತಂಡವಾಗಿ ಒಟ್ಟಿಗೆ ಆಡಿದ್ದೇವೆ. ಸತ್ಯ ಹೇಳುವುದು ಮತ್ತು ವಿನಮ್ರವಾಗಿರುವುದು ನಾನು ನನ್ನ ತಂದೆಯಿಂದ ಕಲಿತ ಪಾಠವಾಗಿದೆ’ ಎಂದಿದ್ದಾರೆ.

ADVERTISEMENT

2009ರಲ್ಲಿ ಯೂನಿಸ್‌ ಖಾನ್‌ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಎನಿಸಿತ್ತು. ಆದರೆ, ಆಟಗಾರರ ಬೇಜವಾಬ್ದಾರಿನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಯೂನಿಸ್‌, ಕೆಲದಿನಗಳ ಬಳಿಕ ನಾಯಕತ್ವ ತೊರೆದಿದ್ದರು.

ಪಾಕ್‌ ಪರ 118 ಟೆಸ್ಟ್‌, 265 ಏಕದಿನ ಮತ್ತು 25 ಟೆಸ್‌ ಪಂದ್ಯಗಳನ್ನು ಆಡಿರುವ ಯೂನಿಸ್‌, ಕ್ರಮವಾಗಿ 10,099 ರನ್‌, 7,249 ರನ್ಮತ್ತು 442 ರನ್‌ ಕಲೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.