ADVERTISEMENT

IND vs NZ ಪುಣೆಯಲ್ಲಿ ಎರಡನೇ ಟೆಸ್ಟ್‌: ರಿಷಭ್, ಗಿಲ್ ಫಿಟ್ ಆಗುವ ನಿರೀಕ್ಷೆ

ಪಿಟಿಐ
Published 23 ಅಕ್ಟೋಬರ್ 2024, 0:30 IST
Last Updated 23 ಅಕ್ಟೋಬರ್ 2024, 0:30 IST
<div class="paragraphs"><p>ಬ್ಯಾಟರ್ ಕೆ.ಎಲ್.ರಾಹುಲ್ ಮತ್ತು ನೆರವು ಸಿಬ್ಬಂದಿ ಮಾತುಕತೆ&nbsp; </p></div>

ಬ್ಯಾಟರ್ ಕೆ.ಎಲ್.ರಾಹುಲ್ ಮತ್ತು ನೆರವು ಸಿಬ್ಬಂದಿ ಮಾತುಕತೆ 

   

–ಪ್ರಜಾವಾಣಿ ಚಿತ್ರ

ಪುಣೆ: ಬ್ಯಾಟರ್ ಕೆ.ಎಲ್. ರಾಹುಲ್ ಅವರ ಮೇಲೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಅಪಾರ ವಿಶ್ವಾಸವಿದೆ. ರಾಹುಲ್ ಅವರಿಗೆ ಇನ್ನೂ ಹೆಚ್ಚು ಅವಕಾಶಗಳನ್ನು ನೀಡುವ ಮನಸ್ಸು ಅವರಿಗೆ ಇದೆ. ಕೌಶಲದ ದೃಷ್ಟಿಯಿಂದ ನೋಡಿದರೆ ಅವರು ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡಾಶಿ ಹೇಳಿದರು. 

ADVERTISEMENT

ಇದೇ 24ರಿಂದ ಪುಣೆಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಸರಣಿಯ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಕಣಕ್ಕಿಳಿಯುವ 11 ಮಂದಿಯ ಆಯ್ಕೆಯ ಕುರಿತು ಈಗ ಕುತೂಹಲ ಗರಿಗೆದರಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ಅದರಲ್ಲಿ ಸರ್ಫರಾಜ್ ಖಾನ್ ಅವರು ಎರಡನೇ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು. ಆದರೆ ರಾಹುಲ್ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದರು. 

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಿಯಾನ್ ಟೆನ್, ‘ಪ್ರಸ್ತುತ ಬಹಳ ತುರುಸಿನ ಸ್ಪರ್ಧಾತ್ಮಕವಾದ ವಾತಾವರಣ ಇದೆ. ಸರ್ಫರಾಜ್ ಕಳೆದ ಟೆಸ್ಟ್‌ನಲ್ಲಿ 150 ಮತ್ತು ಇರಾನಿ ಟ್ರೋಫಿಯಲ್ಲಿ (ಅಜೇಯ 222) ದ್ವಿಶತಕ ಗಳಿಸಿದ್ದರು. ರಾಹುಲ್ ಬಗ್ಗೆ ಯಾವುದೇ ತಕರಾರು ಇಲ್ಲ. ಅವರು ಮಾನಸಿಕವಾಗಿ ಬಹಳ ಸಬಲರಾಗಿದ್ದಾರೆ. ಬ್ಯಾಟಿಂಗ್ ಕೂಡ ಉತ್ತಮವಾಗಿ ಮಾಡುತ್ತಿದ್ದಾರೆ. ಆದರೆ ನಾವು ಏಳು ಮಂದಿಯನ್ನು ಆರು ಸ್ಥಾನಗಳಲ್ಲಿ ಹೊಂದಿಸುವ ಸವಾಲು ಇದೆ‘ ಎಂದರು. 

‘ಗೌತಮ್ ಅವರು ಕಳೆದ ಮೂರು ತಿಂಗಳುಗಳಿಂದ ತಂಡದಲ್ಲಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಅರಿತುಕೊಂಡಿದ್ದಾರೆ. ತಂಡದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ  ನಮ್ಮ ಎಲ್ಲ ಆಟಗಾರರನ್ನೂ ಬೆಂಬಲಿಸುತ್ತೇವೆ’  ಎಂದರು. 

ಬೆಂಗಳೂರು ಟೆಸ್ಟ್‌ನಲ್ಲಿ ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್ ಪಂತ್ ವಿಕೆಟ್‌ಕೀಪಿಂಗ್ ಮಾಡಿರಲಿಲ್ಲ. ಶುಭಮನ್ ಗಿಲ್ ಅವರು ಕತ್ತು ನೋವಿನ ಕಾರಣ ಪಂದ್ಯದಲ್ಲಿ ಆಡಿರಲಿಲ್ಲ. 

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ರಿಷಭ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕುರಿತು ರೋಹಿತ್ (ಶರ್ಮಾ) ಈಚೆಗೆ ಹೇಳಿದ್ದಾರೆ ಅನಿಸುತ್ತದೆ. ಮೊಣಕಾಲಿನ ಚಲನೆಯಲ್ಲಿ ಸ್ವಲ್ಪಮಟ್ಟಿಗೆ ಅವರು ನೋವು ಅನುಭವಿಸುತ್ತಿದ್ದರು. ಅವರ ಚೇತರಿಕೆಗಾಗಿ ಹಾರೈಸುತ್ತಿದ್ದೇವೆ. ಗಿಲ್ ಕೂಡ ಫಿಟ್ ಆಗಿದ್ದಾರೆ. ಅವರು ಟೆಸ್ಟ್ ಪಂದ್ಯದ ಆಯ್ಕೆಗೆ ಲಭ್ಯರಾಗಲಿದ್ದಾರೆ’ ಎಂದರು. 

ಪುಣೆ ಟೆಸ್ಟ್‌ಗಿಲ್ಲ ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ತಂಡದ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು ಭಾರತ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಆಡುವುದಿಲ್ಲ.

ಅವರು ಕಳೆದ ಕೆಲವು ದಿನಗಳಿಂದ ತೊಡೆಯ ಸ್ನಾಯುವಿನ ಸೆಳೆತದಿಂದ ಬಳಲುತ್ತಿದ್ದಾರೆ. ಆದ್ದರಿಂದ ಸರಣಿಯ ಮೊದಲ ಪಂದ್ಯದಲ್ಲಿಯೂ ಅವರು ಆಡಿರಲಿಲ್ಲ. ‘ಕೇನ್ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದೇವೆ. ಅವರು ಶೇ 100ರಷ್ಟು ಫಿಟ್ ಆದರೆ ಮಾತ್ರ ಆಡಲಿದ್ದಾರೆ’ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.