ADVERTISEMENT

ಮಾಜಿ ನಾಯಕ ಎಂ.ಎಸ್. ಧೋನಿಯ 17 ವರ್ಷಗಳ ದಾಖಲೆ ಮುರಿದ ಅಕ್ಷರ್ ಪಟೇಲ್

ಐಎಎನ್ಎಸ್
Published 26 ಜುಲೈ 2022, 2:41 IST
Last Updated 26 ಜುಲೈ 2022, 2:41 IST
   

ಪೋರ್ಟ್ ಆಫ್ ಸ್ಪೇನ್(ಟ್ರಿನಿಡಾಡ್): ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮಿಂಚಿದ್ದ ಆಲ್‌ರೌಂಡರ್ ಅಕ್ಷರ್ ಪಟೇಲ್ 35 ಎಸೆತಗಳಲ್ಲಿ 64 ರನ್ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಅಕ್ಷರ್ ಪಟೇಲ್ ಅವರ ಅಮೋಘ ಆಟದಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದವು. 7ನೇ ಕ್ರಮಾಂಕದಲ್ಲಿ ಅವರು ಪ್ರದರ್ಶಿಸಿದ ಈ ಆಟ ಇದೀಗ ಹೊಸ ದಾಖಲೆ ಬರೆದಿದೆ.

ಹೌದು, ಭಾರತಕ್ಕೆ ಕೊನೆಯ ಮೂರು ಎಸೆತಗಳಲ್ಲಿ 6 ರನ್ ಬೇಕಿದ್ದಾಗ ಕೈಲ್ ಮೇಯರ್ ಎಸೆದ ಫುಲ್ ಟಾಸ್ ಎಸೆತವನ್ನು ಸಿಕ್ಸರ್ ಎತ್ತಿದ್ದ ಅಕ್ಷರ್ ಪಟೇಲ್ ಭಾರತಕ್ಕೆ ರೋಚಕ ಗೆಲುವು ತಂದು ಕೊಡುವ ಜೊತೆಗೆ ಮಾಜಿ ನಾಯಕ ಎಂ.ಎಸ್. ಧೋನಿ ಅವರ 17 ವರ್ಷಗಳ ದಾಖಲೆಯನ್ನು ಮುರಿದರು.

ADVERTISEMENT

ಅಕ್ಷರ್ ಪಟೇಲ್ ಸಿಡಿಸಿದ 5 ಸಿಕ್ಸರ್ ಏಕದಿನ ಕ್ರಿಕೆಟ್‌ನ ಚೇಸಿಂಗ್‌ನಲ್ಲಿ7ನೇ ಕ್ರಮಾಂಕದ ಅಥವಾ ಅದಕ್ಕಿಂತ ಕೆಳ ಕ್ರಮಾಂಕದ ಬ್ಯಾಟರ್ ಒಬ್ಬ ಸಿಡಿಸಿದ ಅತ್ಯಧಿಕ ಸಿಕ್ಸರ್‌ಗಳಾಗಿವೆ.

2005ರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದ್ದ ಧೋನಿ ಹೆಸರಲ್ಲಿ ಈ ದಾಖಲೆ ಇತ್ತು. 2011ರಲ್ಲಿ ಯೂಸುಫ್ ಪಠಾಣ್ ಎರಡು ಬಾರಿ ದಾಖಲೆ ಸರಿಗಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.