ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಿಂದ ಬಲಗೈ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ಕೈಬಿಡಲಾಗಿದೆ.
ಇತ್ತೀಚಿನ ಕೆಲವು ಸರಣಿಗಳಲ್ಲಿ ರಾಹುಲ್ ಕಳಪೆ ಬ್ಯಾಟಿಂಗ್ ಲಯದಲ್ಲಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಾಹುಲ್ ಬ್ಯಾಟಿಂಗ್ ಕಾರ್ಡ್:
ಮೊದಲ ಟೆಸ್ಟ್ (ನಾಗ್ಪುರ): 20
ದ್ವಿತೀಯ ಟೆಸ್ಟ್ (ದೆಹಲಿ): 17 ಹಾಗೂ 1
ರಾಹುಲ್ ವಿರುದ್ಧ ಟೀಕೆ...
ಸತತ ವೈಫಲ್ಯ ಅನುಭವಿಸಿರುವ ರಾಹುಲ್ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಮಾಜಿಗಳು ತೀವ್ರ ವಾಗ್ದಾಳಿ ನಡೆಸಿದ್ದರು.
ರಾಹುಲ್ ಸ್ಥಾನಕ್ಕೆ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಾಜಿಗಳು ಆಗ್ರಹಿಸಿದ್ದರು.
ರೋಹಿತ್, ದ್ರಾವಿಡ್ ಬೆಂಬಲ...
ಈ ಎಲ್ಲ ಟೀಕೆಗಳ ನಡುವೆಯೂ ರಾಹುಲ್ ಅವರಿಗೆ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬೆಂಬಲ ಸೂಚಿಸಿದ್ದರು. ಆದರೂ ಮೂರನೇ ಪಂದ್ಯದಲ್ಲಿ ಆಯ್ಕೆಗೆ ಪರಿಗಣಿಸಲಾಗಿಲ್ಲ.
ಉಪನಾಯಕ ಸ್ಥಾನದಿಂದಲೂ ತೆರವು...
ಕೆ.ಎಲ್. ರಾಹುಲ್ ಅವರನ್ನು ಉಪನಾಯಕ ಸ್ಥಾನದಿಂದಲೂ ಕೈಬಿಡಲಾಗಿತ್ತು. ಈ ಮೂಲಕ ಮೂರನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಿಂದ ರಾಹುಲ್‌ರನ್ನು ಕೈಬಿಡಲಾಗಿದೆ.
ರಾಹುಲ್ ಸ್ಥಾನಕ್ಕೆ ಯುವ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಸೇರ್ಪಡೆಗೊಳಿಸಲಾಗಿದೆ.
ರಾಹುಲ್ ಟೆಸ್ಟ್ ವೃತ್ತಿಜೀವನ:
ಪಂದ್ಯ: 47
ಇನಿಂಗ್ಸ್: 81
ಅಜೇಯ: 2
ರನ್: 2642
ಗರಿಷ್ಠ: 199
ಸರಾಸರಿ: 33.44
ಶತಕ: 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.