ADVERTISEMENT

IND vs BAN Pink Test | ಎರಡನೇ ದಿನವೇ ಮುಕ್ತಾಯದ ಹಂತ ತಲುಪಿದ ಪಿಂಕ್‌ ಟೆಸ್ಟ್‌!

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 13:53 IST
Last Updated 23 ನವೆಂಬರ್ 2019, 13:53 IST
   

ಕೋಲ್ಕತ್ತ: ಐತಿಹಾಸಿಕ ಪಿಂಕ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 106 ರನ್‌ಗಳಿಗೆ ಆಲೌಟ್‌ ಆಗಿದ್ದ ಬಾಂಗ್ಲಾದೇಶ, ಎರಡನೇ ಇನಿಂಗ್ಸ್‌ನಲ್ಲೂಅದೇ ಚಾಳಿ ಮುಂದುವರಿಸಿದೆ. ಹೀಗಾಗಿ ಇಲ್ಲಿನಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯ ಎರಡನೇ ದಿನವೇ ಮುಕ್ತಾಯದ ಹಂತಕ್ಕೆ ತಲುಪಿದೆ.

ನಾಯಕ ವಿರಾಟ್‌ ಕೊಹ್ಲಿ(136) ಶತಕದ ನೆರವಿನಿಂದ 9 ವಿಕೆಟ್‌ ನಷ್ಟಕ್ಕೆ 347 ರನ್‌ ಗಳಿಸಿದ್ದ ಭಾರತ,241 ರನ್‌ ಮುನ್ನಡೆ ಸಾಧಿಸಿ ಎರಡನೇ ದಿನ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಕೊಹ್ಲಿ ಪಡೆಯಮುನ್ನಡೆ ಲೆಕ್ಕ ಚುಕ್ತಾ ಮಾಡಲು ಎರಡನೇ ಇನಿಂಗ್ಸ್‌ ಆರಂಭಿಸಿದ ಮೊಮಿನಲ್ ಹಕ್‌ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ವೇಗಿಗಳು ಮತ್ತೆ ಕಾಡಲಾರಂಭಿಸಿದ್ದಾರೆ. ಬ್ಯಾಟಿಂಗ್‌ ಮರೆತವರಂತೆ ಆಡುತ್ತಿರುವಪ್ರವಾಸಿ ತಂಡದ ಆರಂಭಿಕ ಶಾದಮನ್‌ ಇಸ್ಲಾಂ ಹಾಗೂ ನಾಯಕ ಹಕ್‌ ಖಾತೆ ತೆರೆಯುವ ಮೊದಲೇ ಇಶಾಂತ್‌ಗೆ ವಿಕೆಟ್‌ ಒಪ್ಪಿಸಿದರು.

ಆರಂಭಿಕ ಇಮ್ರುಲ್‌ ಕಯೇಸ್‌(5) ಹಾಗೂಮಧ್ಯಮ ಕ್ರಮಾಂಕದ ಮೊಹಮದ್‌ ಮಿಥುನ್‌(6) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಪಡೆ ಎದುರಿಸಿದ್ದು ಕೇವಲ 30.3 ಓವರ್‌. ಬಳಿಕ ಬ್ಯಾಟಿಂಗ್‌ ಮಾಡಿದ್ದ ಭಾರತ 46 ಓವರ್‌ ಆಡಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದು ದಿನ 90 ಓವರ್‌ಗಳ ಆಟ ನಡೆಯುತ್ತದೆ.ಆದರೆ ಪಿಂಕ್‌ ಟೆಸ್ಟ್‌ನ ಮೊದಲ ದಿನದಾಟ ಕೇವಲ 76.3 ಓವರ್‌ಗಳಿಗೆ ಸೀಮಿತವಾಗಿತ್ತು.

ಭಾರತ ಎರಡನೇ ದಿನ ಒಟ್ಟು 43.4 ಓವರ್‌ ಬ್ಯಾಟ್‌ ಬೀಸಿ, ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಒಂದು ವೇಳೆ ಎರಡನೇ ದಿನ 90 ಓವರ್‌ಗಳ ಆಟ ನಡೆದರೆಬಾಂಗ್ಲಾ ಬ್ಯಾಟ್ಸ್‌ಮನ್‌ಗಳು 40ಕ್ಕಿಂತ ಹೆಚ್ಚು ಓವರ್‌ಗಳನ್ನು ಎದುರಿಸಬೇಕಾಗುತ್ತದೆ.

ಸದ್ಯ 17 ಓವರ್‌ಗಳ ಆಟ ಮುಗಿದಿದೆ. ತಂಡದ ಮೊತ್ತ 73 ಆಗಿದ್ದು, ಈಗಾಗಲೇ ಬಾಂಗ್ಲಾ ತಂಡದಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದಾರೆ. ಉಳಿದಿರುವ 25ಕ್ಕೂ ಹೆಚ್ಚು ಓವರ್‌ಗಳ ಆಟದಲ್ಲಿ 6 ವಿಕೆಟ್‌‍ಉರುಳಿದರೆ ಐತಿಹಾಸಿಕ ಟೆಸ್ಟ್‌ ಪಂದ್ಯ ಎರಡೇ ದಿನದಲ್ಲಿ ಮುಕ್ತಾಯವಾದಂತಾಗುತ್ತದೆ.

ಒಂದು ಹಂತದಲ್ಲಿ ಕೇವಲ 13ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದ್ದ ಬಾಂಗ್ಲಾ ತಂಡಕ್ಕೆ, ಅನುಭವಿ ಮುಪಿಕರ್ ರಹೀಂ(18) ಹಾಗೂ ಮೊಹಮದುಲ್ಲಾ(32) ಆಸರೆಯಾಗಿದ್ದಾರೆ. ಈ ಜೋಡಿ ಐದನೇ ವಿಕೆಟ್‌ಗೆ 60 ರನ್‌ ಸೇರಿಸಿ ಕುಸಿತಕ್ಕೆ ತಡೆಯೊಡ್ಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಉರುಳಿಸಿದ್ದ ಇಶಾಂತ್‌ ಶರ್ಮಾ, ಎರಡನೇ ಇನಿಂಗ್ಸ್‌ನಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಆರು ಓವರ್‌ಗಳಲ್ಲಿ 21 ರನ್‌ ನೀಡಿ 3 ವಿಕೆಟ್‌ ಉರುಳಿಸಿರುವ ಅವರಿಗೆ, ಉಮೇಶ್‌ ಯಾದವ್‌(1) ಸಾಥ್‌ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.