ಎಜ್‌ಬಾಸ್ಟನ್: ಅಮೋಘ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಬ್ಯಾಟರ್ ಜಾನಿ ಬೆಸ್ಟೊ, ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಮೂರು ಶತಕಗಳ ಸಾಧನೆ ಮಾಡಿದ್ದಾರೆ.
ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಬೆಸ್ಟೊ ಆಸರೆಯಾದರು.
84/5 ಎಂಬ ಸ್ಕೋರ್‌ನಿಂದ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಆಂಗ್ಲರ ಪಡೆಗೆ ನಾಯಕ ಬೆನ್ ಸ್ಟೋಕ್ಸ್ (25) ವಿಕೆಟ್ ನಷ್ಟವಾಯಿತು.
ಆದರೆ ವಿಕೆಟ್‌ನ ಇನ್ನೊಂದು ತುದಿಯಿಂದ ಅಮೋಘ ಇನ್ನಿಂಗ್ಸ್ ಕಟ್ಟಿದ ಬೆಸ್ಟೊ, ಭಾರತೀಯ ಬೌಲರ್‌ಗಳನ್ನು ಕಾಡಿದರು.
ಅಲ್ಲದೆ ಹ್ಯಾಟ್ರಿಕ್ ಶತಕ ಸಾಧನೆ ಮಾಡಿದರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲೂ ಬೆಸ್ಟೊ ಶತಕ ಗಳಿಸಿದ್ದರು.
ಬೆಸ್ಟೊ ಅವರಿಗೆ ಸ್ಯಾಮ್ ಬಿಲ್ಲಿಂಗ್ಸ್ ತಕ್ಕ ಸಾಥ್ ನೀಡುತ್ತಿದ್ದಾರೆ. ಅಲ್ಲದೆ ಮುರಿಯದ ಆರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ಕಟ್ಟಿದ್ದಾರೆ.
ಊಟದ ವಿರಾಮದ ಬಳಿಕವೂ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್, 49 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ. ಅಲ್ಲದೆ 189 ರನ್ ಹಿನ್ನಡೆಯಲ್ಲಿದೆ.
ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.
ಮೂರನೇ ದಿನದಾಟದಲ್ಲೂ ಪಂದ್ಯಕ್ಕೆ ಅಲ್ಪ ಹೊತ್ತು ಮಳೆ ಅಡಚೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.