ADVERTISEMENT

IND vs ENG: ದೇವದತ್ತ ಪಡಿಕ್ಕಲ್ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕದ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2024, 9:53 IST
Last Updated 8 ಮಾರ್ಚ್ 2024, 9:53 IST
<div class="paragraphs"><p>ದೇವದತ್ತ ಪಡಿಕ್ಕಲ್</p></div>

ದೇವದತ್ತ ಪಡಿಕ್ಕಲ್

   

(ಚಿತ್ರ ಕೃಪೆ: X/@BCCI)

ಧರ್ಮಶಾಲಾ: ಭಾರತದ ಯುವ ಭರವಸೆಯ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಪದಾರ್ಪಣಾ ಪಂದ್ಯದಲ್ಲೇ ಅರ್ಧಶತಕದ ಸಾಧನೆ ಮಾಡಿದ್ದಾರೆ.

ADVERTISEMENT

ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಪಡಿಕ್ಕಲ್, ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ರಜತ್‌ ಪಾಟೀದಾರ್ ಪಾದದ ನೋವಿನಿಂದ ಅಲಭ್ಯರಾದ ಹಿನ್ನೆಲೆಯಲ್ಲಿ ಪಡಿಕ್ಕಲ್‌ ಅವರಿಗೆ ಆಡುವ ಅವಕಾಶ ದೊರೆಯಿತು.

ನೂರನೇ ಟೆಸ್ಟ್‌ ಮೈಲಿಗಲ್ಲು ತಲುಪಿದ ಆರ್‌.ಅಶ್ವಿನ್ ಅವರು ಕರ್ನಾಟಕದ ಆಟಗಾರನಿಗೆ ಚೊಚ್ಚಲ ‘ಟೆಸ್ಟ್‌ ಕ್ಯಾಪ್‌’ ನೀಡಿದ್ದರು.

ಪ್ರಥಮ ದರ್ಜೆ ಹಾಗೂ ಐಪಿಎಲ್‌ನಲ್ಲಿ ಛಾಪು ಮೂಡಿಸಿರುವ ಪಡಿಕ್ಕಲ್, ಈಗ ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ.

ಪಡಿಕ್ಕಲ್ 103 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 65 ರನ್ ಗಳಿಸಿ ಔಟ್ ಆದರು.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸರ್ಫರಾಜ್ ಖಾನ್ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕದ ಸಾಧನೆ ಮಾಡಿದ್ದರು. ರಜತ್ ಪಾಟೀದಾರ್, ಧ್ರುವ್ ಜುರೇಲ್, ಆಕಾಶ್ ದೀಪ್ ಸಹ ಇದೇ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.