ADVERTISEMENT

'ನಿವೃತ್ತಿ ನಿರ್ಧಾರವನ್ನು ದಿಗ್ಗಜರಿಗೆ ಬಿಡಿ': ಜೇಮ್ಸ್‌ ಸಾಧನೆಗೆ ಕೈಫ್ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2021, 9:54 IST
Last Updated 7 ಆಗಸ್ಟ್ 2021, 9:54 IST
ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್‌
ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್‌   

ಕ್ರಿಕೆಟ್‌ ಇರಲಿ ಅಥವಾ ಬೇರೆ ಯಾವುದೇ ಕ್ರೀಡೆಯಾಗಲಿ, ಆಟಗಾರರಿಗೆ ವಯಸ್ಸಾಗುತ್ತಿದ್ದಂತೆ ನಿವೃತ್ತಿಯ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ವೃತ್ತಿಪರ ಆಟಗಾರನಾಗಿ ಎಷ್ಟೇ ಸಾಧನೆ ಮಾಡಿದ್ದರೂ, ಉತ್ತಮ ಪ್ರದರ್ಶನ ಕಾಯ್ದುಕೊಳ್ಳಲೇಬೇಕು. ಇಲ್ಲವಾದರೆ, ನಿವೃತ್ತಿಯ ಆಗ್ರಹಗಳು ಹೆಚ್ಚುತ್ತವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ತಾವು ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನು ದಿಗ್ಗಜರೇನಿರ್ಧರಿಸಲಿ ಬಿಡಿ ಎಂದುಹೇಳಿದ್ದಾರೆ.

ಭಾರತದ ವಿರುದ್ಧ ನಾಟಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡದ 39 ವರ್ಷದ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರು. ಆ ಮೂಲಕ ಅವರುಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು621 ವಿಕೆಟ್‌ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಅವರು, ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು.

ಆ್ಯಂಡರ್ಸನ್‌ಸಾಧನೆಯ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಕೈಫ್‌,ʼನಿಯಮದಂತೆ ಯಾವಾಗ ನಿವೃತ್ತಿ ಹೊಂದಬೇಕು ಎಂಬುದನ್ನು ಯಾವಾಗಲೂದಿಗ್ಗಜರೇ ನಿರ್ಧರಿಸಲಿ. ಜಿಮ್ಮಿಆ್ಯಂಡರ್ಸನ್‌ 40 ವರ್ಷಕ್ಕೆ ಸಮೀಪಿಸುತ್ತಿದ್ದಾರೆ. ಆದರೆ,621 ವಿಕೆಟ್‌ಗಳನ್ನು ಪಡೆದಿದ್ದು, ವಿಕೆಟ್‌ ಬೇಟೆ ಮುಂದುವರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿಅತಿಹೆಚ್ಚು ವಿಕೆಟ್‌ ಕಬಳಿಸಿದ ಮೂರನೇಬೌಲರ್‌ ಎನಿಸಿರುವುದಕ್ಕೆ ಅವರಿಗೆ ಅಭಿನಂದನೆಗಳುʼ ಎಂದಿದ್ದಾರೆ.

ಈವರೆಗೆ ಕನ್ನಡಿಗ ಅನಿಲ್‌ ಕುಂಬ್ಳೆ ಮೂರನೇ ಸ್ಥಾನದಲ್ಲಿದ್ದರು.132 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂಬ್ಳೆ 619 ವಿಕೆಟ್‌ಗಳನ್ನು ಉರುಳಿಸಿದ್ದರು.

ಸದ್ಯಸ್ಪಿನ್‌ ದಂತಕಥೆಗಳಾದಶ್ರೀಲಂಕಾ ತಂಡದಮಾಜಿ ಆಟಗಾರ ಮುತ್ತಯ್ಯ ಮುರುಳೀಧರನ್‌ ಮತ್ತು ಆಸ್ಟ್ರೇಲಿಯಾದ ಮಾಜಿ ಬೌಲರ್ ಶೇನ್‌ ವಾರ್ನ್‌ಮಾತ್ರವೇ ಇಂಗ್ಲೆಂಡ್‌ ವೇಗಿಗಿಂತ ಮುಂದಿದ್ದಾರೆ. ಮುರುಳಿಧರನ್‌ ಖಾತೆಯಲ್ಲಿ ಬರೋಬ್ಬರಿ800ಮತ್ತು ವಾರ್ನ್‌ ಬಳಿ708 ವಿಕೆಟ್‌ಗಳಿವೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ600ಕ್ಕಿಂತ ಹೆಚ್ಚು ವಿಕೆಟ್‌ಗಳಿಸಿದ ಏಕೈಕ ವೇಗಿ ಎಂಬ ಶ್ರೇಯವೂ ಜೇಮ್ಸ್‌ ಅವರದ್ದಾಗಿದೆ.

ಭಾರತಕ್ಕೆ ಇನಿಂಗ್ಸ್‌ ಮುನ್ನಡೆ
ಐದು ಟೆಸ್ಟ್‌ ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು,ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್183 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಭಾರತ, ಕನ್ನಡಿಗ ಕೆ.ಎಲ್.‌ ರಾಹುಲ್‌ (84) ಮತ್ತು ರವೀಂದ್ರ ಜಡೇಜಾ (56) ಗಳಿಸಿದ ಅರ್ಧಶತಕಗಳ ನೆರವಿನಿಂದ 278ರನ್‌ ಕಲೆಹಾಕಿತು. ಇದರೊಂದಿಗೆ95 ರನ್‌ಗಳ ಮುನ್ನಡೆಯನ್ನೂ ಗಳಿಸಿಕೊಂಡಿತು.

ಸದ್ಯ ಆತಿಥೇಯ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ ಆರಂಭಿಸಿದ್ದು, ವಿಕೆಟ್‌ ನಷ್ಟವಿಲ್ಲದೆ 25 ರನ್‌ ಗಳಿಸಿದೆ.

ಅಂದಹಾಗೆ ಇದು ಎರಡನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಉದ್ಘಾಟನಾ ಸರಣಿಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.