ADVERTISEMENT

IND vs ENG Test: ಭಾರತಕ್ಕೆ 171 ರನ್‌ಗಳ ಮುನ್ನಡೆ

ಏಜೆನ್ಸೀಸ್
Published 3 ಫೆಬ್ರುವರಿ 2024, 11:52 IST
Last Updated 3 ಫೆಬ್ರುವರಿ 2024, 11:52 IST
ಜಸ್‌ಪ್ರೀತ್ ಬೂಮ್ರಾ 
ಜಸ್‌ಪ್ರೀತ್ ಬೂಮ್ರಾ    

ವಿಶಾಖಪಟ್ಟಣ: 22 ವರ್ಷದ ಯಶಸ್ವಿ ಜೈಸ್ವಾಲ್‌ ಅವರ ಚೆಂದದ ಬ್ಯಾಟಿಂಗ್ ಹಾಗೂ ಬೂಮ್ರಾ ಅವರ ಮಾರಕ ಬೌಲಿಂಗ್‌ ದಾಳಿಯಿಂದ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ 2ನೇ ದಿನದಾಟದ ಅಂತ್ಯಕ್ಕೆ 171 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್‌ಗಳಿಗೆ ಆಲೌಟ್‌ ಆಯಿತು. ಭಾರತದ ಪರ ಯಶಸ್ವಿ ಜೈಸ್ವಾಲ್‌ ದ್ವಿಶತಕ ಸಿಡಿಸಿ ಗಮನ ಸೆಳೆದರು. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 253 ರನ್‌ಗಳಿಗೆ ಆಲೌಟ್‌ ಆಯಿತು. ಮಾರಕ ದಾಳಿ ನಡೆಸಿದ ಬೂಮ್ರಾ 6 ವಿಕೆಟ್‌ ಪಡೆದು ಆಂಗ್ಲ ಪಡೆಗೆ ಪೆಟ್ಟುಕೊಟ್ಟರು. 

ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದು ಯಾವುದೇ ವಿಕೆಟ್‌ ನಷ್ಟವಿಲ್ಲದೇ 28 ರನ್‌ ಗಳಿಸಿದೆ. ಕ್ರಿಸ್‌ನಲ್ಲಿ ಜೈಸ್ವಾಲ್‌ ಮತ್ತು ರೋಹಿತ್‌ ಶರ್ಮಾ ಆಡುತ್ತಿದ್ದಾರೆ. 

ADVERTISEMENT

 ಸ್ಕೋರ್‌...

ಭಾರತ ಮೊದಲ ಇನ್ನಿಂಗ್ಸ್‌: 396

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 253

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.