ADVERTISEMENT

ಅಡಿಲೇಡ್‌ನಲ್ಲಿ 36, ಬೆಂಗಳೂರಿನಲ್ಲಿ 46: ಟೀಮ್ ಇಂಡಿಯಾ ಕಳಪೆ ಸಾಧನೆಗಳ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2024, 9:57 IST
Last Updated 17 ಅಕ್ಟೋಬರ್ 2024, 9:57 IST
<div class="paragraphs"><p>ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ</p></div>

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ.

ADVERTISEMENT

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದಿಂದ ದಾಖಲಾದ ಮೂರನೇ ಕನಿಷ್ಠ ಮೊತ್ತವಾಗಿದೆ. 2020ರ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್ನಿಗೆ ಆಲೌಟ್ ಆಗಿರುವುದು ಭಾರತದ ಕನಿಷ್ಠ ಮೊತ್ತವಾಗಿದೆ.

ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 36 ರನ್ನಿಗೆ ಆಲೌಟ್ ಆಗಿದ್ದರೆ ಈಗ ರೋಹಿತ್ ಶರ್ಮಾ ಕಪ್ತಾನಗಿರಿಯಲ್ಲಿ 46 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ ನೆಲದಲ್ಲಿ ಕಳಪೆ ಸಾಧನೆ...

ಭಾರತ ನೆಲದಲ್ಲಿ ದಾಖಲಾದ ಅತಿ ಕನಿಷ್ಠ ಮೊತ್ತ ಇದಾಗಿದೆ. 2021ರ ಮುಂಬೈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ 62 ರನ್ನಿಗೆ ಆಲೌಟ್ ಆಗಿರುವುದು ಈವರೆಗಿನ ಕನಿಷ್ಠ ಮೊತ್ತವಾಗಿತ್ತು.

ಏಷ್ಯಾದ ನೆಲದಲ್ಲಿ ದಾಖಲಾದ ಅತಿ ಕನಿಷ್ಠ ಮೊತ್ತ ಎಂಬ ಅಪಖ್ಯಾತಿಗೂ ಭಾರತ ಒಳಗಾಗಿದೆ. 1986ರಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್‌ಇಂಡೀಸ್ 53ಕ್ಕೆ ಆಲೌಟ್ ಆಗಿರುವುದು ಈವರೆಗಿನ ಕನಿಷ್ಠ ಮೊತ್ತವಾಗಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕನಿಷ್ಠ ಮೊತ್ತ:

  • 36 (ಆಸ್ಟ್ರೇಲಿಯಾ ವಿರುದ್ಧ), ಅಡಿಲೇಡ್ (2020)

  • 42 (ಇಂಗ್ಲೆಂಡ್ ವಿರುದ್ಧ), ಲಾರ್ಡ್ಸ್ (1974)

  • 46 (ನ್ಯೂಜಿಲೆಂಡ್ ವಿರುದ್ಧ), ಬೆಂಗಳೂರು, 2024

  • 58 (ಆಸ್ಟ್ರೇಲಿಯಾ ವಿರುದ್ಧ), ಬ್ರಿಸ್ಬೇನ್, 1947

  • 58 (ಇಂಗ್ಲೆಂಡ್ ವಿರುದ್ಧ) ಮ್ಯಾಂಚೆಸ್ಟರ್, 1952

ಭಾರತ ನೆಲದಲ್ಲಿ ಕನಿಷ್ಠ ಮೊತ್ತ (ಟೆಸ್ಟ್ ಕ್ರಿಕೆಟ್):

  • ಭಾರತ: 46 (ನ್ಯೂಜಿಲೆಂಡ್ ವಿರುದ್ಧ), ಬೆಂಗಳೂರು (2024)

  • ನ್ಯೂಜಿಲೆಂಡ್: 62 (ಭಾರತ ವಿರುದ್ಧ), ಮುಂಬೈ (2021)

  • ಭಾರತ: 75 (ವೆಸ್ಟ್ ಇಂಡೀಸ್ ವಿರುದ್ಧ), ದೆಹಲಿ (1987)

  • ಭಾರತ: 76 (ದಕ್ಷಿಣ ಆಫ್ರಿಕಾ ವಿರುದ್ಧ), ಅಹಮದಾಬಾದ್ (2008)

  • ದಕ್ಷಿಣ ಆಫ್ರಿಕಾ: 79 (ಭಾರತ ವಿರುದ್ಧ), ನಾಗ್ಪುರ, 2015

ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಮೆರೆದಾಡಿದರು. ಭಾರತ 31.2 ಓವರ್‌ಗಳಲ್ಲಿ 46 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಐದು (15/5) ಮತ್ತು ವಿಲಿಯಂ ಒ ರೂರ್ಕಿ (22/4) ನಾಲ್ಕು ವಿಕೆಟ್ ಸಾಧನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.