ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆಟಗಾರ ಟಿಮ್ ಸೌಥಿ ಆಕರ್ಷಕ ಅರ್ಧಶತಕದ ಸಾಧನೆ ಮಾಡಿದ್ದಾರೆ.
ಅಲ್ಲದೆ ಎಡಗೈ ಬ್ಯಾಟರ್ ರಚಿನ್ ರವೀಂದ್ರ ಅವರೊಂದಿಗೆ ಎಂಟನೇ ವಿಕೆಟ್‌ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು.
ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಬೃಹತ್ ಮುನ್ನಡೆ ಗಳಿಸಲು ನೆರವಾದರು. ಭಾರತದ 46 ರನ್ನಿಗೆ ಉತ್ತರವಾಗಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 402 ರನ್ನಿಗೆ ಆಲೌಟ್ ಆಯಿತು. ಕಿವೀಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಬೃಹತ್ ಮುನ್ನಡೆ ಗಳಿಸಿತು.
ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಅರ್ಧಶತಕ ಗಳಿಸಿದರು. 73 ಎಸೆತಗಳಲ್ಲಿ 65 ರನ್ ಗಳಿಸಿದ ಸೌಥಿ ಇನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.
ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಪಟ್ಟಿಯಲ್ಲಿ ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ.
103 ಟೆಸ್ಟ್ ಪಂದ್ಯಗಳಲ್ಲಿ ಸೌಥಿ ಈವರೆಗೆ 93 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಮತ್ತೊಂದೆಡೆ ಸೆಹ್ವಾಗ್ 104 ಪಂದ್ಯಗಳಲ್ಲಿ 91 ಸಿಕ್ಸರ್ ಗಳಿಸಿದ್ದರು.
ಒಟ್ಟಾರೆ ಪಟ್ಟಿಯಲ್ಲಿ ಸೆಹ್ವಾಗ್ ಹಿಂದಿಕ್ಕಿರುವ ಸೌಥಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಸಮಕಾಲೀನ ಆಟಗಾರರ ಪೈಕಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಒಟ್ಟು 87 ಸಿಕ್ಸರ್‌ಗಳನ್ನು ಗಳಿಸಿದ್ದಾರೆ.
ಬೆನ್ ಸ್ಟೋಕ್ಸ್: 131
ಬ್ರೆಂಡನ್ ಮೆಕಲಮ್: 107
ಆ್ಯಡಂ ಗಿಲ್‌ಕ್ರಿಸ್ಟ್: 100
ಕ್ರಿಸ್ ಗೇಲ್: 98
ಜಾಕ್ ಕಾಲಿಸ್: 97
ಟಿಮ್ ಸೌಥಿ: 93*
ವೀರೇಂದ್ರ ಸೆಹ್ವಾಗ್: 91
ಬ್ರಿಯಾನ್ ಲಾರಾ: 88
ಕ್ರಿಸ್ ಕ್ರೇನ್ಸ್: 87
ರೋಹಿತ್ ಶರ್ಮಾ: 87*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.