ADVERTISEMENT

IND vs NZ: ಬೆಂಗಳೂರು ನೆಲದಲ್ಲಿ ಮಗದೊಂದು ಸ್ಮರಣೀಯ ಶತಕ ಗಳಿಸಿದ ರಚಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2024, 10:26 IST
Last Updated 18 ಅಕ್ಟೋಬರ್ 2024, 10:26 IST
<div class="paragraphs"><p>ರಚಿನ್ ರವೀಂದ್ರ</p></div>

ರಚಿನ್ ರವೀಂದ್ರ

   

(ಪಿಟಿಐ ಚಿತ್ರ)

ಬೆಂಗಳೂರು: ಭಾರತದ ಜತೆ ನಂಟು ಹೊಂದಿರುವ ನ್ಯೂಜಿಲೆಂಡ್‌ ಕ್ರಿಕೆಟ್ ತಂಡದ ಎಡಗೈ ಬ್ಯಾಟರ್ ರಚಿನ್ ರವೀಂದ್ರ ಪಾಲಿಗೆ ಬೆಂಗಳೂರು ನೆಚ್ಚಿನ ತಾಣವೆನಿಸಿದೆ.

ADVERTISEMENT

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರಚಿನ್ ರವೀಂದ್ರ ಸ್ಮರಣೀಯ ಶತಕ ಸಾಧನೆ ಮಾಡಿದ್ದಾರೆ. ಇದು ಭಾರತ ವಿರುದ್ಧ ರಚಿನ್ ಬ್ಯಾಟ್‌ನಿಂದ ಸಿಡಿದ ಮೊದಲ ಶತಕವಾಗಿದೆ.

ಆ ಮೂಲಕ ಭಾರತದ 46 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್, ಮೂರನೇ ದಿನದಾಟದಲ್ಲಿ 402 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಅಲ್ಲದೆ ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಮುನ್ನಡೆ ಗಳಿಸಿತು.

ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರಚಿನ್ 157 ಎಸೆತಗಳಲ್ಲಿ 134 ರನ್ ಗಳಿಸಿ ಔಟ್ ಆದರು. ಅವರ ಆಕರ್ಷಕ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ರಚಿನ್, 2012ರ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ನೆಲದಲ್ಲಿ ಶತಕ ಗಳಿಸಿದ ನ್ಯೂಜಿಲೆಂಡ್ ಬ್ಯಾಟರ್ ಎನಿಸಿದ್ದಾರೆ. 2012ರಲ್ಲಿ ಇದೇ ಮೈದಾನದಲ್ಲಿ ರಾಸ್ ಟೇಲರ್ ಶತಕ ಗಳಿಸಿದ್ದರು.

ಏಕದಿನ ವಿಶ್ವಕಪ್‌ನಲ್ಲೂ ರಚಿನ್ ಶತಕ ಸಾಧನೆ...

ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲೂ ರಚಿನ್ ರವೀಂದ್ರ ಅಮೋಘ ಶತಕ ಸಾಧನೆ ಮಾಡಿದ್ದರು.

2023ರ ನವೆಂಬರ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರಚಿನ್ ಶತಕ ಸಾಧನೆ ಮಾಡಿದ್ದರು. ಅಂದು 94 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದ್ದರು.

ರಚಿನ್ ರವೀಂದ್ರ

ರಚಿನ್ ಬೆಂಗಳೂರು ನಂಟು...

ರಚಿನ್‌ ಅವರು ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್‌ನಲ್ಲಾದರೂ, ಬೆಂಗಳೂರು ಜತೆ ನಂಟು ಹೊಂದಿದ್ದಾರೆ. ಅವರ ತಂದೆ, ರವೀಂದ್ರ ಬೆಂಗಳೂರಿನವರು. ಹೆತ್ತವರ ಜತೆ ರಚಿನ್‌ ಹಲವು ಸಲ ಬೆಂಗಳೂರಿಗೆ ಬಂದಿದ್ದಾರೆ.

ಸಚಿನ್...ರಚಿನ್...

ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಮೇಲೆ ಮಗನಿಗೆ ರಚಿನ್ (ರ ಹಾಗೂ ಚಿನ್) ಎಂಬ ಹೆಸರನ್ನು ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.