ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಬದಲಿಗೆ ಕಣಕ್ಕಿಳಿದ ಕೆ.ಎಸ್.ಭರತ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
ಮೂರನೇ ದಿನದಾಟದ ವೇಳೆ ವೃದ್ಧಿಮಾನ್ ಸಹಾ ಕುತ್ತಿಗೆ ನೋವಿನ ಕಾರಣ ಮೈದಾನದಿಂದ ನಿರ್ಗಮಿಸಿದರು. ಅವರ ಬದಲಿಗೆ ಕೆ.ಎಸ್.ಭರತ್ ಅವರು ಕೀಪಿಂಗ್ ನಿರ್ವಹಿಸುತ್ತಿದ್ದಾರೆ.
ಆರ್.ಅಶ್ವಿನ್ ಎಸೆದ 67ನೇ ಓವರ್‌ನಲ್ಲಿ ವಿಲ್ ಯಂಗ್ ಅವರು ರನ್ ಗಳಿಸಲು ಪ್ರಯತ್ನಿಸಿದರು. ಆದರೆ, ಬಾಲ್ ಬ್ಯಾಟ್‌ಗೆ ಬಡಿದು ವಿಕೆಟ್ ಕೀಪರ್ ಭರತ್ ಕೈಸೇರಿತು. ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಭರತ್, ತಕ್ಷಣ ಡಿಆರ್‌ಎಸ್ ಪಡೆಯುವಂತೆ ನಾಯಕ ಅಜಿಂಕ್ಯ ರಹಾನೆಗೆ ಸೂಚಿಸಿದರು. ಡಿಆರ್‌ಎಸ್ ರಿವ್ಯೂ ಔಟ್ ಆಗಿತ್ತು.
ಭರತ್ ಪ್ರದರ್ಶನಕ್ಕೆ ಸಹ ಆಟಗಾರರು ಅಭಿನಂದಿಸಿದರು. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್ 345 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ 113 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ. ಟಾಮ್ ಲಥಾಮ್ 95, ವಿಲ್ ಯಂಗ್ 89 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.