ADVERTISEMENT

IND vs NZ Test | ಬ್ಯಾಟರ್‌ಗಳ ಮೇಲೆ ಕುಲದೀಪ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:46 IST
Last Updated 19 ಅಕ್ಟೋಬರ್ 2024, 0:46 IST
<div class="paragraphs"><p>ಕುಲದೀಪ್ ಯಾದವ್</p></div>

ಕುಲದೀಪ್ ಯಾದವ್

   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುತ್ತಿದೆ. ನಾವು ಬೌಲಿಂಗ್ ಮಾಡುವಾಗ ಅದರ ಅನುಭವ ಆಗಿದೆ. ನಮ್ಮ ಬ್ಯಾಟರ್‌ಗಳು ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿಯ ಮೊತ್ತವನ್ನು ನೀಡಿದರೆ ಐದನೇ ದಿನ ನಮಗೆ ಅನುಕೂಲವಾಗಬಹುದು ಎಂದು ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದರು. 

ಟೆಸ್ಟ್ ಪಂದ್ಯದ ಮೂರನೇ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಅಲ್ಲದೇ ಈಗಿನ್ನೂ ಮೂರು ವಿಕೆಟ್‌ಗಳು ಮಾತ್ರ ಹೋಗಿವೆ. ಸರ್ಫರಾಜ್ ಖಾನ್ ಕ್ರೀಸ್‌ನಲ್ಲಿದ್ದಾರೆ. ಅವರು ಉತ್ತಮ ಲಯದಲ್ಲಿದ್ದಾರೆ. ಉಳಿದ ಬ್ಯಾಟರ್‌ಗಳು ಇದ್ದಾರೆ. ಆದ್ದರಿಂದ ನಮಗಿನ್ನೂ ಭರವಸೆ ಇದೆ. ಈಚೆಗೆ ಇರಾನಿ ಟ್ರೋಫಿಯಲ್ಲಿ ಸರ್ಫರಾಜ್ ದ್ವಿಶತಕ ಗಳಿಸಿದ್ದರು. ಇಲ್ಲಿಯೂ  200 ರನ್‌ ಗಳಿಸಲಿ ಎಂದು ಹಾರೈಸುತ್ತೇನೆ. ಅವರ ಬ್ಯಾಟಿಂಗ್ ಶೈಲಿ ಮತ್ತು ಕೌಶಲವು ನನಗೆ ಬಹಳ ಇಷ್ಟ’ ಎಂದರು. 

ADVERTISEMENT

ರಿಷಭ್ ವಿಶ್ರಾಂತಿ: ಗುರುವಾರ ವಿಕೆಟ್‌ಕೀಪಿಂಗ್ ಮಾಡುವಾಗ ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್ ಪಂತ್ ಅವರು ಶುಕ್ರವಾರವೂ ಕೀಪಿಂಗ್ ಮಾಡಲಿಲ್ಲ. ಡ್ರೆಸಿಂಗ್‌ ರೂಮ್‌ನಲ್ಲಿಯೇ ವಿಶ್ರಾಂತಿ ಪಡೆದರು. ಧ್ರುವ ಜುರೇಲ್ ಅವರು ಕೀಪಿಂಗ್ ಮಾಡಿದರು. ‌ ಅವರು ಫಿಟ್ ಆಗಿರುವ ಬಗ್ಗೆ ಮಾಹಿತಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.