ನವದೆಹಲಿ: ಏಷ್ಯಾ ಕಪ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭ ಹಾರೈಸಿದ್ದಾರೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
‘ಪ್ರತಿಯೊಬ್ಬ ಭಾರತೀಯನೂ ಕಾಯುತ್ತಿದ್ದ ಪಂದ್ಯದ ದಿನ ಬಂದೇಬಿಟ್ಟಿದೆ. ಏಷ್ಯಾ ಕಪ್ 2022ರ ಆವೃತ್ತಿಯಲ್ಲಿ ಭಾರತ–ಪಾಕಿಸ್ತಾನ ಪಂದ್ಯ ವೀಕ್ಷಿಸಲು ನಾವೆಲ್ಲ ಕಾತರರಾಗಿದ್ದೇವೆ. ದೇಶದ ಹಾಗೂ ನನ್ನ ಕಡೆಯಿಂದ ಭಾರತ ತಂಡಕ್ಕೆ ಶುಭಾಶಯಗಳು. ಹೃತ್ಪೂರ್ವಕವಾಗಿ ಆಟವಾಡಿ ಗೆಲ್ಲೋಣ’ ಎಂದು ರಾಹುಲ್ ಗಾಂಧಿ ‘ಫೇಸ್‌ಬುಕ್’ ಮೂಲಕ ಹಾರೈಸಿದ್ದಾರೆ.
ಈ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತಕ್ಕೆ 10 ವಿಕೆಟ್ ಹೀನಾಯ ಸೋಲಾಗಿತ್ತು. ಹೀಗಾಗಿ ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ನಡುವಣ ಪಂದ್ಯಕ್ಕೆ ಕುತೂಹಲ ಹೆಚ್ಚಾಗಿದೆ.
1984ರಲ್ಲಿ ಆರಂಭವಾದ ಏಷ್ಯಾ ಕಪ್‌ನಲ್ಲಿ ಭಾರತ ಇದುವರೆಗೆ ಒಟ್ಟು ಏಳು ಬಾರಿ ಪ್ರಶಸ್ತಿ ಗಳಿಸಿವೆ. 2016ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ಆಯೋಜಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಟಿ20 ಮಾದರಿಯಲ್ಲೇ ಏಷ್ಯಾ ಕಪ್ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.