ADVERTISEMENT

IND vs SA 2nd Test: ಆಫ್ರಿಕಾ ವಿರುದ್ಧ ಭಾರತಕ್ಕೆ ಹೊಸ ವರ್ಷದ ಮೊದಲ ಜಯ

ಏಜೆನ್ಸೀಸ್
Published 4 ಜನವರಿ 2024, 11:56 IST
Last Updated 4 ಜನವರಿ 2024, 11:56 IST
<div class="paragraphs"><p>ಭಾರತ ತಂಡ</p></div>

ಭಾರತ ತಂಡ

   

ಕೇಪ್‌ಟೌನ್: ನ್ಯೂಲ್ಯಾಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯದ ನಗೆ ಬೀರಿತು.

ಈ ಪಂದ್ಯ ಒಂದೂವರೆ ದಿನದಲ್ಲಿ ಮುಕ್ತಾಯವಾಯಿತು. ನಿನ್ನೆ ಮತ್ತು ಇಂದು (ಗುರುವಾರ) ವೇಗದ ಬೌಲರ್‌ಗಳೇ ಪಾರುಪತ್ಯ ಮೆರೆದರು.

ADVERTISEMENT

ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ ಅವರ ಏಕಾಂಗಿ ಹೋರಾಟದ ಶತಕ (106), ಭಾರತ ವೇಗಿಗಳಾದ ಬೂಮ್ರಾ, ಸಿರಾಜ್‌ ಅವರ ಬೌಲಿಂಗ್‌ ದಾಳಿ ಈ ಪಂದ್ಯದ ಪ್ರಮುಖ ಆರ್ಕಷಣೆಯಾದವು. 

ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 32 ರನ್‌ಗಳಿಂದ ಗೆದ್ದಿದ್ದ ಆತಿಥೇಯ ತಂಡವು ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. 

ಭಾರತದ ವೇಗಿ ಮೊಹಮ್ಮದ್ ಸಿರಾಜ್ (15ಕ್ಕೆ6) ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 23.2 ಓವರ್‌ಗಳಲ್ಲಿ 55 ರನ್ ಗಳಿಸಿ ಆಲೌಟ್ ಅಯಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡ 34.5 ಓವರ್‌ಗಳಲ್ಲಿ 153 ರನ್‌ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 98 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 36.5 ಓವರ್‌ಗಳಲ್ಲಿ 176 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡು ಭಾರತಕ್ಕೆ 79 ರನ್‌ಗಳ ಗುರಿ ನೀಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ 12 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಸ್ಕೋರ್‌...

ದಕ್ಷಿಣ ಆಫ್ರಿಕಾ

ಮೊದಲ ಇನಿಂಗ್ಸ್‌: 55-10 (23.2 Ov)

ಎರಡನೇ ಇನಿಂಗ್ಸ್‌: 176-10 (36.5 Ov)

ಭಾರತ 

ಮೊದಲ ಇನಿಂಗ್ಸ್‌: 153-10 (34.5 Ov)

ಎರಡನೇ ಇನಿಂಗ್ಸ್‌: 80-3 (12 Ov)

ಭಾರತಕ್ಕೆ 7 ವಿಕೆಟ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.