ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಗೆಲುವು ಸಾಧಿಸಿರುವ ಭಾರತ ತಂಡವು 3 ಪಂದ್ಯಗಳ ಸರಣಿಯನ್ನು 2–0ರಿಂದ ಕೈವಶಮಾಡಿಕೊಂಡಿದೆ.
ಕೆರಿಬಿಯನ್ನರು ನೀಡಿದ್ದ 312 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 49.4 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಶ್ರೇಯಸ್ ಅಯ್ಯರ್(63), ಸಂಜು ಸಾಮ್ಸನ್(54) ಅರ್ಧಶತಕ ಸಿಡಿಸುವ ಮೂಲಕ ಭಾರತದ ಚೇಸಿಂಗ್‌ಗೆ ಉತ್ತಮ ಸಾಥ್ ನೀಡಿದರು.ಆದರೆ, ಆಟಕ್ಕೆ ರೋಚಕತೆ ತಂದುಕೊಟ್ಟಿದ್ದು ಆಲ್‌ರೌಂಡರ್ ಅಕ್ಷರ್ ಪಟೇಲ್, ಕೈಜಾರುತ್ತಿದ್ದ ಪಂದ್ಯವನ್ನು ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಭಾರತದ ಕಡೆ ತಿರುಗಿಸಿದರು. 35 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಿತ 64 ರನ್ ಸಿಡಿಸಿ ಗೆಲುವಿನ ರೂವಾರಿಯಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ 115 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 74 ರನ್ ಗಳಿಸಿದ ನಾಯಕ ನಿಕೊಲಸ್ ಪೂರನ್ ತಂಡದ ಉತ್ತಮ ಮೊತ್ತಕ್ಕೆ ಅಡಿಪಾಯ ಹಾಕಿದರು. 50 ಓವರ್ ಅಂತ್ಯಕ್ಕೆ ವೆಸ್ಟ್ ಇಂಡೀಸ್ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 311/6
ಶಾಯ್ ಹೋಪ್: 115
ನಿಕೊಲಸ್ ಪೂರನ್: 74
ಬೌಲಿಂಗ್:
ಶಾರ್ದೂಲ್ ಠಾಕೂರ್: 54/3
ಭಾರತ: 49.4 ಓವರ್– 312/8
ಅಕ್ಷರ್ ಪಟೇಲ್: ಅಜೇಯ 64
ಶ್ರೇಯಸ್ ಅಯ್ಯರ್: 63
ಸಂಜು ಸಾಮ್ಸನ್: 54
ಬೌಲಿಂಗ್:
ಅಲ್ಜಾರಿ ಜೋಸೆಫ್: 46/2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.