ಹುಬ್ಬಳ್ಳಿ:ತಾಳ್ಮೆಯ ಆಟವಾಡುತ್ತಿರುವ ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಅವರು ಮೊದಲ ಇನಿಂಗ್ಸ್‌ನ 30ನೇ ಓವರ್ 3ನೇ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ವೈಯಕ್ತಿಕ ರನ್ ಪೂರೈಸಿದರು.
ಇದರೊಂದಿಗೆ ಭಾರತ ತಂಡದ ಸ್ಕೋರ್ ಕೂಡ ಮೂರಂಕಿ ತಲುಪಿತು. ಪಾಂಚಾಲ್ ಹಾಗೂ ಕೆ.ಎಸ್. ಭರತ ಉತ್ತಮ ಆಟವಾಡುತ್ತಿದ್ದು, 74 ಎಸೆತಗಳಲ್ಲಿ 50 ರನ್‌ರನ್‌ಗಳಿಸಿದ್ದಾರೆ.
ಭಾರತ ‘ಎ‘ ಹಾಗೂ ನ್ಯೂಜಿಲೆಂಡ್ ’ಎ‘ ತಂಡಗಳ ನಡುವಣ ’ಟೆಸ್ಟ್’ ಪಂದ್ಯ
ಊಟದ ವಿರಾಮದಿಂದ ಮರಳಿದ ಬಳಿಕವೂ ಕಿವೀಸ್ ತಂಡದ ಬೌಲರ್‌ಗಳು ಭಾರತ ತಂಡದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೊನಚಿನ ದಾಳಿ ನಡೆಸಿದ ಜಾಕೋಬ್ ಡೆಫಿ ಎರಡು ವಿಕೆಟ್ ಕಬಳಿಸಿದರು.
ನಾಲ್ಕನೇ ಕ್ರಮದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ರಜತ್ ಪಾಟೀದಾರ್ ಅವರನ್ನು 22ನೇ ಓವರ್‌ನ ಕೊನೆ ಎಸೆತ ಎಸೆದ ಜಾಕೋಬ್ ಡೆಫಿ ಸ್ವಯಂ ಕ್ಯಾಚ್ ಪಡೆದದರು.
ಬಳಿಕ ಐದನೇ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮಾ ಅವರನ್ನು 24ನೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದರು.
ಪಂದ್ಯಕ್ಕೆ ಅಡ್ಡಿಯಾದ ತುಂತುರು ಮಳೆ
ಹುಬ್ಬಳ್ಳಿ: ಶುಕ್ರವಾರ ಮಧ್ಯಹ್ನ 2.44ಕ್ಕೆ ತುಂತುರು ಮಳೆ ಸುರಿಯಿತು. ಹೀಗಾಗಿ ಭಾರತ’ಎ‘ ಹಾಗೂ ನ್ಯೂಜಿಲೆಂಡ್ ’ಎ’ ತಂಡಗಳ ನಡುವಣ ಪಂದ‌್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಭಾರತ ’ಎ’ ತಂಡವು 44 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಆಡುತ್ತಿದೆ.
65 ಎಸೆತಗಳಲ್ಲಿ 47 ರನ್‌ಗಳಿಸಿರುವ ವಿಕೇಟ್ ಕೀಪರ್ ಬ್ಯಾಟ್ಸಮನ್ ಕೆ.ಎಸ್.ಭರತ ಕ್ರೀಸ್‌ನಲ್ಲಿದ್ದು, 73 ರನ್ ಗಳಿಸಿರುವ ನಾಯಕ ಪ್ರಿಯಾಂಕ್ ಪಾಂಚಾಲ್ ನಾನ್‌ಸ್ಟ್ರೈಕರ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.