ದುಬೈ: ಭಾರತ ತಂಡವು 3–0ಯಿಂದ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡು, ಎರಡನೇ ಸ್ಥಾನಕ್ಕೆ ಕುಸಿದಿದೆ.
ಹಾಲಿ ಡಬ್ಲ್ಯುಟಿಸಿ (ವಿಶ್ವ ಟೆಸ್ಟ್ ಚಾಂಪಿಯನ್‌ಪಿಪ್ ಫೈನಲ್) ವರ್ಷದಲ್ಲಿ ಭಾರತಕ್ಕೆ ಇದು ಐದನೇ ಸೋಲು. ಕಿವೀಸ್ ವಿರುದ್ಧ ಕೊನೆಯ ಪಂದ್ಯದ ಸೋಲಿನ ಬಳಿಕ ಪಿಸಿಟಿ ಪ್ರಮಾಣ ಶೇ 62.82ರಿಂದ 58.33ಕ್ಕೆ ಇಳಿಸಿದೆ. ಎರಡನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (62.50) ಅಗ್ರಸ್ಥಾನಕ್ಕೆ ಏರಿದೆ.
ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಪಿಪ್ ಫೈನಲ್ ತಲುಪುವ ಪ್ರಯತ್ನದಲ್ಲಿದ್ದ ಭಾರತ ತಂಡಕ್ಕೆ ನ್ಯೂಜಿಲೆಂಡ್ ತಂಡವು ಹ್ಯಾಟ್ರಿಕ್ ಸೋಲಿನ ಆಘಾತ ನೀಡಿದೆ.
ಹಾಲಿ ಡಬ್ಲ್ಯುಟಿಸಿ ವರ್ಷದಲ್ಲಿ ಭಾರತಕ್ಕೆ ಇನ್ನು ಉಳಿದಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಐದು ಪಂದ್ಯಗಳು ಮಾತ್ರ. ಫೈನಲ್ ಅರ್ಹತೆ ಪಡೆಯಲು ಈ ಐದು ಪಂದ್ಯಗಳ ಪೈಕಿ ಕನಿಷ್ಠ ನಾಲ್ಕನ್ನು ಗೆಲ್ಲಲೇಬೇಕಾದ ಒತ್ತಡವಿದೆ. ನ್ಯೂಜಿಲೆಂಡ್ ಸರಣಿಗೆ ಮೊದಲು ಭಾರತ ತಂಡ ಡಬ್ಲ್ಯುಟಿಸಿ ಫೈನಲ್ ತಲುಪುವ ನೆಚ್ಚಿನ ತಂಡವಾಗಿತ್ತು.
ಆಸ್ಟ್ರೇಲಿಯಾ ತಂಡದ ಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ. ಉಳಿದಿರುವ ಏಳು ಟೆಸ್ಟ್‌ಗಳಲ್ಲಿ ನಾಲ್ಕನ್ನು ಗೆದ್ದರೆ ಫೈನಲ್ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.