ADVERTISEMENT

ಬಲಿಷ್ಠ ವೇಗದ ಬೌಲರ್‌ಗಳನ್ನು ಹೊಂದಿರುವ ಭಾರತ ತಂಡ: ಸಚಿನ್‌ ತೆಂಡೂಲ್ಕರ್‌

ಪಿಟಿಐ
Published 25 ಜೂನ್ 2018, 18:11 IST
Last Updated 25 ಜೂನ್ 2018, 18:11 IST
ಸಚಿನ್‌ ತೆಂಡೂಲ್ಕರ್‌
ಸಚಿನ್‌ ತೆಂಡೂಲ್ಕರ್‌   

ನವದೆಹಲಿ : ‘ಏಕದಿನ, ಟೆಸ್ಟ್‌ ಹಾಗೂ ಟ್ವೆಂಟಿ–20 ಪಂದ್ಯಗಳ ಸರಣಿ ಆಡಲು ಇಂಗ್ಲೆಂಡ್‌ಗೆ ತೆರಳಿರುವ ಭಾರತ ತಂಡದ ವೇಗದ ಬೌಲಿಂಗ್‌ ಬಳಗ ಬಲಿಷ್ಠವಾಗಿದೆ’ ಎಂದು ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಬೌಲಿಂಗ್‌ ಪಡೆಯನ್ನು ಭಾರತ ತಂಡ ಹೊಂದಿದೆ. ಅವರು ಈ ಬಾರಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಚೆಂಡನ್ನು ಚೆನ್ನಾಗಿ ಸ್ವಿಂಗ್‌ ಮಾಡಬಲ್ಲ ಭುವನೇಶ್ವರ್‌ ಕುಮಾರ್‌, ಇಶಾಂತ್‌ ಶರ್ಮಾ, ಒತ್ತಡಕ್ಕೊಳಗಾಗದೇ ವಿಕೆಟ್‌ ಕಬಳಿಸಬ‌ಲ್ಲ ಉಮೇಶ್‌ ಯಾದವ್‌ ಹಾಗೂ ಜಸ್‌ಪ್ರೀತ್‌ ಬೂಮ್ರಾ ಭಾರತ ತಂಡದಲ್ಲಿದ್ದಾರೆ. ಅವರೆಲ್ಲರೂ ಇಂಗ್ಲೆಂಡ್‌ ನೆಲದಲ್ಲಿ ಮಿಂಚುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಹಾರ್ದಿಕ್‌ ಪಾಂಡ್ಯ ಹಾಗೂ ಭುವನೇಶ್ವರ್‌ ಕುಮಾರ್‌ ಬ್ಯಾಟಿಂಗ್‌ನಲ್ಲೂ ತಂಡದ ಕೈ ಹಿಡಿಯಬಲ್ಲರು. ಈಗಾಗಲೇ ಅನೇಕ ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರು ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ’ ಎಂದು ಸಚಿನ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.