ADVERTISEMENT

ಪಿಂಕ್‌ ಟೆಸ್ಟ್: ಕೋಲ್ಕತ್ತ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಗಂಗೂಲಿ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 10:24 IST
Last Updated 22 ನವೆಂಬರ್ 2019, 10:24 IST
   

ಕೋಲ್ಕತ್ತ:ಭಾರತೀಯ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷಸೌರವ್ಗಂಗೂಲಿಅವರು ಭಾರತದಲ್ಲಿ ನಡೆಯುತ್ತಿರುವಮೊದಲ ಗುಲಾಬಿ ಚೆಂಡಿನ ಟೆಸ್ಟ್‌ ಪಂದ್ಯದಹಿನ್ನೆಲೆಯಲ್ಲಿಉತ್ಸುಕರಾಗಿಇಲ್ಲಿನ ಸಿಹಿತಿನಿಸುಗಳು ಗುಲಾಬಿ ಬಣ್ಣಕ್ಕೆತಿರುಗಿವೆಎಂದು ಟ್ವೀಟ್‌ ಮಾಡಿದ್ದಾರೆ.

ಇಲ್ಲಿನ ಸ್ಥಳೀಯ ಗುಲಾಬಿ ಬಣ್ಣದ ತಿನಿಸು ಸಂದೇಶ್‌ ಫೋಟೋವನ್ನು ಅವರು ಈ ಟೆಸ್ಟ್‌ಹಿನ್ನೆಲೆಯಲ್ಲಿಶೇರ್ಮಾಡಿದ್ದಾರೆ.

ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಮೊದಲ ಹಗಲೂ–ರಾತ್ರಿ, ಗುಲಾಬಿ ಚೆಂಡಿನಲ್ಲಿ ನಡೆಯಲಿರುವ ಟೆಸ್ಟ್‌ಹಿನ್ನೆಲೆಯಲ್ಲಿತಯಾರಿಸಲಾದ ವಿಶೇಷಸಿಹಿತಿಂಡಿಯ ಫೋಟೋವನ್ನು ಟ್ವೀಟ್‌ ಮಾಡಿದ ಅವರು ಇಲ್ಲಿ ಎಲ್ಲಾ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಹೇಳಿದ್ದಾರೆ.

ADVERTISEMENT

ನಗರವುಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಗಂಗೂಲಿ ಟ್ವೀಟ್‌ಮಾಡಿದ್ದುಇದಕ್ಕೆ ಗುಲಾಬಿ ಬಣ್ಣದ ದೀಪಗಳಿಂದಅಲಂಕಾರಗೊಂಡಕೋಲ್ಕತ್ತಾದಪ್ರಸಿದ್ದಕಟ್ಟಡಗಳ ಚಿತ್ರವನ್ನುಹಂಚಿದ್ದರು.

Well @bcci and @cab ... look forward to 5 days @JayShah pic.twitter.com/EbZigS3JMk

ಗುಲಾಬಿ ಬಣ್ಣದ ದೀಪಗಳಿಂದ ಕೂಡಿರುವ ತಮ್ಮ ಊರಿನವಿಡಿಯೊವನ್ನುಶೇರ್‌ ಮಾಡಿದ್ದಾರೆ.

ನಾಯಕವಿರಾಟ್ಕೊಹ್ಲಿಮತ್ತುಕೋಚ್ರವಿ ಶಾಸ್ತ್ರಿ ನೇತೃತ್ವದಲ್ಲಿ ವಿಶ್ವದ ಬಲಿಷ್ಠ ತಂಡವಾಗಿರೂಪುಗೊಳ್ಳುತ್ತಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿನ ಹೊಸ ಬದಲಾವಣೆಯೂ ಪಂದ್ಯವನ್ನುನೋಡುವವರಸಂಖ್ಯೆಯನ್ನುಹೆಚ್ಚಿಸಬಹುದು ಮತ್ತುಟಿವಿನೋಡುಗರ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ಹಗಲೂ–ರಾತ್ರಿ ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು 2015ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಪರಿಚಯಿಸಲಾಗಿದ್ದರೂಭಾರತದಲ್ಲಿಗಂಗೂಲಿ ಅವರಅಧ್ಯಕ್ಷತೆಯ ಅವಧಿಯಲ್ಲಿ ಪಿಂಕ್‌ ಟೆಸ್ಟ್‌ ಪಂದ್ಯ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.