ADVERTISEMENT

ICC Rankings: ಏಕದಿನ-ಟಿ20ನಲ್ಲಿ ಭಾರತ ನಂ.1, ಟೆಸ್ಟ್‌ನಲ್ಲಿ ಅಗ್ರಸ್ಥಾನ ನಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2024, 10:34 IST
Last Updated 3 ಮೇ 2024, 10:34 IST
<div class="paragraphs"><p>ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್</p></div>

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್

   

(ಚಿತ್ರ: ಪುಷ್ಕರ್ ವಿ)

ದುಬೈ: ಭಾರತ ಕ್ರಿಕೆಟ್‌ ತಂಡವು, ಶುಕ್ರವಾರ ಪ್ರಕಟವಾದ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ  ಏಕದಿನ ಮತ್ತು ಟಿ20 ವಿಭಾಗಗಳಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಆದರೆ ಟೆಸ್ಟ್‌ನಲ್ಲಿ ಎರಡನೇ ಸ್ಥಾನಕ್ಕೆ ಸರಿದಿದೆ.

ADVERTISEMENT

ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ, ವಿಶ್ವ ಟೆಸ್ಟ್‌ ಚಾಪಿಯನ್ನರಾದ ಆಸ್ಟ್ರೇಲಿಯಾ, ಭಾರತವನ್ನು ಹಿಂದೆಹಾಕಿ ಅಗ್ರಸ್ಥಾನಕ್ಕೇರಿದೆ.

ಭಾರತ (120), ಆಸ್ಟ್ರೇಲಿಯಾಕ್ಕಿಂತ (124) ಕೇವಲ ನಾಲ್ಕು ಪಾಯಿಂಟ್ಸ್‌ ಹಿಂದೆಯಿದೆ. ಇಂಗ್ಲೆಂಡ್‌ (105) ಮೂರನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ (103) ನಾಲ್ಕನೇ ಸ್ಥಾನದಲ್ಲಿದೆ.

ಮೂರರಿಂದ ಒಂಬತ್ತರವರೆಗಿನ ತಂಡಗಳ ಕ್ರಮಾಂಕ ಬದಲಾಗಿಲ್ಲ. ಅಫ್ಗಾನಿಸ್ತಾನ ಮತ್ತು ಐರ್ಲೆಂಡ್‌ ತಂಡಗಳು ಕಡಿಮೆ ಟೆಸ್ಟ್‌ ಆಡಿದ್ದು, ಅವುಗಳು ಪಟ್ಟಿಯಲ್ಲಿಲ್ಲ. ಜಿಂಬಾಬ್ವೆ ಕೂಡ ಇದೇ ಕಾರಣಕ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಐಸಿಸಿ ರ‍್ಯಾಂಕಿಂಗ್‌

ಆದರೆ ಏಕದಿನ ಮತ್ತು ಟಿ20ಯಲ್ಲಿ ಭಾರತ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತ 122 ಪಾಯಿಂಟ್ಸ್‌ ಗಳಿಸಿದೆ. ಮೊದಲ ಹತ್ತು ತಂಡಗಳ ಸ್ಥಾನದಲ್ಲಿ ಬದಲಾವಣೆಯಾಗಿಲ್ಲ. 11ನೇ ಸ್ಥಾನದಲ್ಲಿದ್ದ ಜಿಂಬಾಬ್ವೆ 12ನೇ ಸ್ಥಾನಕ್ಕೆ ಸರಿದಿದೆ. ಐರ್ಲೆಂಡ್‌ ಒಂದು ಸ್ಥಾನ ಬಡ್ತಿ ಪಡೆದಿದ್ದು 11ನೇ ಸ್ಥಾನಕ್ಕೇರಿದೆ.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ (116) ಮತ್ತು ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ (112) ಮಧ್ಯೆ ಕೇವಲ ನಾಲ್ಕು ಪಾಯಿಂಟ್‌ಗಳ ಅಂತರವಷ್ಟೇ ಇದೆ. ಪಾಕಿಸ್ತಾನ (106) ಮತ್ತು ನ್ಯೂಜಿಲೆಂಡ್‌ (101) ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ಟಿ20 ರ‍್ಯಾಂಕಿಂಗ್‌ನಲ್ಲಿ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡವನ್ನು ಹಿಂದೆಹಾಕಿ ಎರಡನೇ ಸ್ಥಾನಕ್ಕೇರಿದೆ. ಭಾರತ 264 ಪಾಯಿಂಟ್‌ಗಳೊಡನೆ ಅಗ್ರಸ್ಥಾದಲ್ಲಿದ್ದು, ಎರಡನೇ ಸ್ಥಾನದಲ್ಲಿರುವ ಕಾಂಗರೂ ಪಡೆ 257 ಪಾಯಿಂಟ್ಸ್ ಗಳಿಸಿದೆ. ಇಂಗ್ಲೆಂಡ್‌ (252) ಮೂರನೇ ಸ್ಥಾನದಲ್ಲಿದೆ. ಈ ಹಿಂದಿನ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ (250 ಪಾಯಿಂಟ್ಸ್‌) ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

ಐದನೇ ಸ್ಥಾನದಲ್ಲಿದ್ದ ಪಾಕಿಸ್ತಾನ (247) ಎರಡು ಸ್ಥಾನಗಳಷ್ಟು ಕೆಳಗಿಳಿದು ಏಳನೆ ಸ್ಥಾನಕ್ಕೆ ಸರಿದಿದೆ.

ಐಸಿಸಿ ರ‍್ಯಾಂಕಿಂಗ್‌ ಪಟ್ಟಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.