ADVERTISEMENT

ಏಷ್ಯಾ ಮಹಿಳಾ ಟಿ20 ಕ್ರಿಕೆಟ್‌: ಭಾರತಕ್ಕೆ ಪಾಕ್‌ ಮೊದಲ ಎದುರಾಳಿ

ಪಿಟಿಐ
Published 25 ಜೂನ್ 2024, 15:18 IST
Last Updated 25 ಜೂನ್ 2024, 15:18 IST
<div class="paragraphs"><p>ಭಾರತ ತಂಡ</p></div>

ಭಾರತ ತಂಡ

   

(ಚಿತ್ರ ಕೃಪೆ: X/@BCCIWomen)

ನವದೆಹಲಿ: ಹಾಲಿ ಚಾಂಪಿಯನ್ ಭಾರತ ತಂಡವು ಏಷ್ಯಾ ಕಪ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯವನ್ನು ಜುಲೈ 19ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಟೂರ್ನಿ ಶ್ರೀಲಂಕಾದ ದಂಬುಲಾದಲ್ಲಿ ನಡೆಯಲಿದೆ.

ADVERTISEMENT

ಏಷ್ಯಾ ಖಂಡದ ಅಗ್ರ ಎಂಟು ತಂಡಗಳು ಜುಲೈ 19 ರಿಂದ 28ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ.

ಈ ಬಾರಿ ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ಯುಎಇ ಮತ್ತು ನೇಪಾಳ ‘ಎ’ ಗುಂಪಿನಲ್ಲಿವೆ. ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಷ್ಯಾ ‘ಬಿ’ ಗುಂಪಿನಲ್ಲಿವೆ. ಹಿಂದಿನ ಟೂರ್ನಿ ಈ ರೀತಿ ನಡೆದಿರಲಿಲ್ಲ.

ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಭಾರತ ತನ್ನ ಉಳಿದ ಪ‍ಂದ್ಯಗಳಲ್ಲಿ ಜುಲೈ 21ರಂದು ಯುಎಇ ವಿರುದ್ಧ, ಜುಲೈ 23ರಂದು ನೇಪಾಳ ವಿರುದ್ಧ ಆಡಲಿದೆ.

ಎರಡೂ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ತಲುಪಲಿವೆ. ಈ ಪಂದ್ಯಗಳು ಕ್ರಮವಾಗಿ ಜುಲೈ 26 ಮತ್ತು 28ರಂದು ನಿಗದಿಯಾಗಿವೆ. ಪಂದ್ಯ ನಿರ್ವಹಣೆ ಮಾಡುವ ಸಿಬ್ಬಂದಿ ಕೂಡ ಮಹಿಳೆಯರೇ ಆಗಿರುತ್ತಾರೆ.

2012 ರಿಂದ ಈ ಟಿ20 ಟೂರ್ನಿ ನಡೆಯುತ್ತಿದ್ದು, ಭಾರತ ಅತಿ ಹೆಚ್ಚು ಬಾರಿ– ಏಳು ಸಲ ಏಷ್ಯಾ ಕಪ್ ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.