ADVERTISEMENT

ಭಾರತ ಯುವ ಪಡೆಗೆ ಸರಣಿ ಜಯದ ಸಂಭ್ರಮ

ಯೂತ್ ಟೆಸ್ಟ್‌: ಸಿದ್ದಾರ್ಥ್ ದೇಸಾಯಿ ಪರಿಣಾಮಕಾರಿ ದಾಳಿ; ಆತಿಥೇಯರಿಗೆ ನಿರಾಸೆ

ಪಿಟಿಐ
Published 28 ಜುಲೈ 2018, 19:30 IST
Last Updated 28 ಜುಲೈ 2018, 19:30 IST
ಸಿದ್ದಾರ್ಥ್ ದೇಸಾಯಿ
ಸಿದ್ದಾರ್ಥ್ ದೇಸಾಯಿ   

ಹಂಬನಟೋಟ: ಆರಂಭಿಕ ಬ್ಯಾಟ್ಸ್‌ಮನ್ ಅಥರ್ವ ತಾವಡೆ (177; 172 ಎ, 3 ಸಿ, 20 ಬೌಂ) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಪವನ್ ಶಾ (282; 332 ಎ, 1 ಸಿ, 33 ಬೌಂ) ಅವರ ಅಮೋಘ ಆಟದ ನಂತರ ಬೌಲಿಂಗ್‌ನಲ್ಲೂ ಭಾರತದ ಯುವ ಪಡೆ ಮಿಂಚಿತು. ಇದರ ಪರಿಣಾಮ ಇಲ್ಲಿ ನಡೆದ 19 ವರ್ಷದೊಳಗಿನವರ ಯುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 19 ವರ್ಷದೊಳಗಿನವ ತಂಡ ಭರ್ಜರಿ ಜಯ ಸಾಧಿಸಿತು.

ಅಂಜು ರಾವತ್ ನಾಯಕತ್ವದ ತಂಡ ಶ್ರೀಲಂಕಾವನ್ನು ಇನಿಂಗ್ಸ್ ಮತ್ತು 147 ರನ್‌ಗಳಿಂದ ಮಣಿಸಿತು. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಭಾರತದ ಯುವ ಪಡೆ ಇನಿಂಗ್ಸ್ ಮತ್ತು 29 ರನ್‌ಗಳ ಗೆಲುವು ಸಾಧಿಸಿತ್ತು.

ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 613 ರನ್ ಗಳಿಸಿದ್ದ ಭಾರತ ತಂಡಕ್ಕೆ ಉತ್ತರ ನೀಡಿದ ಶ್ರೀಲಂಕಾ 316 ರನ್‌ ಸೇರಿಸಿ ಫಾಲೊ ಆನ್‌ಗೆ ಒಳಗಾಗಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಆ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಲು ಆಗಲಿಲ್ಲ. ನಾಲ್ಕು ವಿಕೆಟ್ ಕಬಳಿಸಿದ ಸಿದ್ದಾರ್ಥ್ ದೇಸಾಯಿ ಮತ್ತು ತಲಾ ಎರಡು ವಿಕೆಟ್ ಉರುಳಿಸಿದ ಯತಿನ್ ಮಾಂಗ್ವಾನಿ, ಆಯುಷ್‌ ಬದೋನಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ತಳವೂರದಂತೆ ಮಾಡಿದರು. ದೇಸಾಯಿ ಮತ್ತು ಮಾಂಗ್ವಾನಿ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಆಟ ಆಡಿ ಮಿಂಚಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಭಾರತ 19 ವರ್ಷದೊಳಗಿನವರು, ಮೊದಲ ಇನಿಂಗ್ಸ್‌: 128.5 ಓವರ್‌ಗಳಲ್ಲಿ 8ಕ್ಕೆ 613 ಡಿಕ್ಲೇರ್‌, ಶ್ರೀಲಂಕಾ 19 ವರ್ಷದೊಳಗಿನವರು, ಮೊದಲ ಇನಿಂಗ್ಸ್‌: 114.3 ಓವರ್‌ಗಳಲ್ಲಿ 316; ಭಾರತ 19 ವರ್ಷದೊಳಗಿನವರು, ಎರಡನೇ ಇನಿಂಗ್ಸ್‌ (ಫಾಲೊ ಆನ್‌): 62.2 ಓವರ್‌ಗಳಲ್ಲಿ 150 (ನುಶಾನ್ ಮಂಡುಶ್ಕಾ ಫರ್ನಾಂಡೊ 25, ನುವಾನಿಡು ಫರ್ನಾಂಡೊ 28, ಸೂರ್ಯಭಂಡಾರ 10, ದಿನುಶಾ 11, ಮೆಂಡಿಸ್ 26, ವಿಯಸ್ಕಾಂತ್‌ 16; ಮೋಹಿತ್ ಜಂಗ್ರಾ 33ಕ್ಕೆ1, ಅರ್ಜುನ್ ತೆಂಡೂಲ್ಕರ್ 39ಕ್ಕೆ1, ಯತಿನ್ ಮಾಂಗ್ವಾನಿ 9ಕ್ಕೆ2, ಸಿದ್ದಾರ್ಥ್ ದೇಸಾಯಿ 40ಕ್ಕೆ4, ಆಯುಷ್ ಬದೋನಿ 17ಕ್ಕೆ2). ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ ಇನಿಂಗ್ಸ್ ಮತ್ತು 147 ರನ್‌ಗಳ ಜಯ; 2 ಪಂದ್ಯಗಳ ಸರಣಿಯಲ್ಲಿ 2–0 ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.