ADVERTISEMENT

ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 9:06 IST
Last Updated 5 ಮಾರ್ಚ್ 2019, 9:06 IST
   

ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ.‌

ಭಾರತದ ಎದುರು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಭಾರತದ ಪರ ಬ್ಯಾಟಿಂಗ್‌ ಆರಂಭಿಸಿದ ರೋಹಿತ್‌ ಶರ್ಮಾ ಶೂನ್ಯಕ್ಕೆ ಔಟ್‌ ಆಗಿದ್ದಾರೆ. ಇತ್ತ ನಾಯಕ ವಿರಾಟ್‌ ಕೊಹ್ಲಿ ಜೊತೆಗೂಡಿ ತಾಳ್ಮೆಯ ಆಟಕ್ಕೆ ಮೋರೆ ಹೋಗಿದ್ದ ಶಿಖರ್‌ ಧವನ್‌ 21 ರನ್‌ ಗಳಿಸಿ ಗ್ಲೇನ್‌ ಮ್ಯಾಕ್ಸ್‌ವೇಲ್‌ ಎಸೆದ ಎರಡನೇ ಓವರ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ADVERTISEMENT

ಸದ್ಯ ಬ್ಯಾಟಿಂಗ್‌ ಮುಂದುವರಿಸಿರುವ ಭಾರತದ 13ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 52ರನ್‌ ಗಳಿಸಿದೆ(ಕೊಹ್ಲಿ (21), ಅಂಬಟಿ ರಾಯುಡು (08).

ಮೊದಲ ಪಂದ್ಯದಲ್ಲಿ ಪರಾಕ್ರಮ ಮೆರೆದಿರುವ ಭಾರತ ತಂಡ ಆಸ್ಟ್ರೇಲಿಯಾ ಎದುರು ಮತ್ತೊಂದು ಜಯ ಸಾಧಿಸುವ ನಿರೀಕ್ಷೆಯಲ್ಲಿದೆ.

ವಿಶ್ವಕಪ್‌ನ ಪೂರ್ವಭಾವಿ ಅಭ್ಯಾಸ ಎಂದೇ ಪರಿಗಣಿಸಲಾಗಿರುವ ಸರಣಿಯ ಮೊದಲ ಪಂದ್ಯ ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದಿತ್ತು. ಅದರಲ್ಲಿ ಆತಿಥೇಯರು ಆರು ವಿಕೆಟ್‌ಗಳ ಜಯ ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.