ADVERTISEMENT

ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್‌ ಪೂರೈಸಿದ ದೋನಿ; ದೇಶದ ಐದನೇ ಬ್ಯಾಟ್ಸ್‌ಮನ್‌

ಏಜೆನ್ಸೀಸ್
Published 12 ಜನವರಿ 2019, 10:28 IST
Last Updated 12 ಜನವರಿ 2019, 10:28 IST
   

ಸಿಡ್ನಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಶನಿವಾರ ಏಕ ದಿನ ಪಂದ್ಯಗಳಲ್ಲಿ 10 ಸಾವಿರ ರನ್‌ ಗಡಿ ದಾಟಿದ್ದಾರೆ. ಈ ಮೂಲಕ ಏಕದಿನ ಪಂದ್ಯಗಳಲ್ಲಿ 10,000 ರನ್‌ ಪೂರೈಸಿದ ಭಾರತದ ಐದನೇ ಬ್ಯಾಟ್ಸ್‌ಮನ್‌ ಆಗಿ ದೋನಿ ಹೆಸರು ದಾಖಲಾಗಿದೆ.

ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ ಹಾಗೂ ವಿರಾಟ್‌ ಕೊಹ್ಲಿ; 10 ಸಾವಿರ ರನ್‌ ‍ಪೂರೈಸಿದ ಪಟ್ಟಿಯಲ್ಲಿದ್ದಾರೆ. 37 ವರ್ಷ ವಯಸ್ಸಿನ ಮಹೇಂದ್ರ ಸಿಂಗ್‌ ದೋನಿ 330 ಏಕದಿನ ಪಂದ್ಯಗಳಲ್ಲಿ 10,000 ರನ್‌ಗಳ ಗಡಿ ದಾಟಿದ್ದಾರೆ. 9 ಶತಕಗಳು, 68ಅರ್ಧ ಶತಕಗಳನ್ನು ಒಳಗೊಂಡಂತೆ 49.75 ಸರಾಸರಿಯೊಂದಿಗೆ ಈ ಸಾಧನೆ ಮಾಡಿದ್ದಾರೆ.

ಒಟ್ಟಾರೆ 10 ಸಾವಿರ ರನ್‌ಗಳನ್ನು ಪೂರೈಸಿರುವವರ ಪೈಕಿ ದೋನಿ 12ನೇ ಆಟಗಾರ.

ADVERTISEMENT

ನಿಧಾನಗತಿಯ ಬ್ಯಾಟಿಂಗ್‌ನಿಂದ ದೋನಿ ಕಳೆದ ವರ್ಷ ಬಹಳಷ್ಟು ಟೀಕೆಗೆ ಗುರಿಯಾಗಿದ್ದರು. 2018ರಲ್ಲಿ ಒಟ್ಟು 20 ಏಕದಿನ ಪಂದ್ಯಗಳಲ್ಲಿ ಅವರು ಒಂದೇ ಒಂದು ಅರ್ಧ ಶತಕವನ್ನೂ ಗಳಿಸದೆಯೇ 25 ಸರಾಸರಿಯಲ್ಲಿ ಗಳಿಸಿದ್ದು 275 ರನ್‌ಗಳನ್ನು ಮಾತ್ರ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 289 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಶಿಖರ್‌ ಧವನ್‌, ಕೊಹ್ಲಿ ಹಾಗೂ ರಾಯುಡು ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡಿತು. ರೋಹಿತ್‌ ಶರ್ಮಾ(133) ಮತ್ತು ದೋನಿ(51) ಜತೆಯಾಟ ಭಾರತ ತಂಡಕ್ಕೆ ಆಸರೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.