ಚೆನ್ನೈ: ಬಾಂಗ್ಲಾದೇಶ ತಂಡವು ಇದುವರೆಗೆ ಭಾರತದ ಎದುರು 13 ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ 11ರಲ್ಲಿ ಭಾರತ ಗೆದ್ದಿದೆ. ಎರಡು ಪಂದ್ಯಗಳು ಡ್ರಾ ಆಗಿವೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡವು ಭಾರತದ ಎದುರು ಕೆಲವು ಪಂದ್ಯಗಳನ್ನು ಗೆದ್ದಿದೆ. ಆದರೆ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಇದುವರೆಗೆ ಜಯದ ರುಚಿ ಸವಿದಿಲ್ಲ.
ಇದೀಗ ಭಾರತದ ಎದುರು ಎಂಟನೇ ಸರಣಿ ಆಡುತ್ತಿರುವ ಬಾಂಗ್ಲಾ ತಂಡವು ಮತ್ತೊಮ್ಮೆ ನಿರಾಶೆಯ ಹಾದಿಯಲ್ಲಿದೆ. ಈ ಸಂಗತಿಯನ್ನು ಅರಗಿಸಿಕೊಳ್ಳುವುದು ಪ್ರವಾಸಿ ತಂಡಕ್ಕೆ ಕಷ್ಟವಾಗಬಹುದು. ಆದರೆ ಆತಿಥೇಯರ ಪ್ರಬಲ ಆಟದ ಮುಂದೆ ಬಾಂಗ್ಲಾ ತಂಡವು ಮಂಕಾಗಿರುವುದು ನಿಜ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡು ದಿನಗಳ ಆಟದಲ್ಲಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಜೊತೆಯಾಟದ ಬ್ಯಾಟಿಂಗ್ ಮುಂದೆ ಬಾಂಗ್ಲಾ ಕಂಗಾಲಾಯಿತು. ಎರಡನೇ ದಿನವಾದ ಶುಕ್ರವಾರ ಜಸ್‌ಪ್ರೀತ್ ಬೂಮ್ರಾ (50ಕ್ಕೆ4) ಅವರ ನೇತೃತ್ವದ ಮಧ್ಯಮವೇಗಿಗಳ ಪಡೆಯ ದಾಳಿಗೆ ಕುಸಿಯಿತು. ಭಾರತದ ಮೊದಲ ಇನಿಂಗ್ಸ್‌ನ 376 ರನ್‌ಗಳಿಗೆ ಉತ್ತರವಾಗಿ ಬಾಂಗ್ಲಾ ಗಳಿಸಿದ್ದು 149 ರನ್ (47.1 ಓವರ್‌ಗಳಲ್ಲಿ) ಮಾತ್ರ. ಆಕಾಶ್ ದೀಪ್ (19ಕ್ಕೆ2) ಮತ್ತು ಮೊಹಮ್ಮದ್ ಸಿರಾಜ್ (30ಕ್ಕೆ2) ಬೂಮ್ರಾಗೆ ಉತ್ತಮ ಜೊತೆ ನೀಡಿದರು.
227 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿದ ಭಾರತ ಎರಡನೇ ಇನಿಂಗ್ಸ್ ಆರಂಭಿಸಿದೆ. ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗಳಿಗೆ 81 ರನ್ ಗಳಿಸಿದೆ. ಶುಭಮನ್ ಗಿಲ್ (ಬ್ಯಾಟಿಂಗ್ 33) ಮತ್ತು ರಿಷಭ್ ಪಂತ್ (ಬ್ಯಾಟಿಂಗ್ 12) ಕ್ರೀಸ್‌ನಲ್ಲಿದ್ದಾರೆ. ಒಟ್ಟು 308 ರನ್‌ಗಳ ಮುನ್ನಡೆಯನ್ನು ಭಾರತ ಸಾಧಿಸಿದೆ.
ಆತಿಥೇಯ ತಂಡವು ಗುರುವಾರ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್‌ಗಳಿಗೆ 339 ರನ್ ಗಳಿಸಿತ್ತು. ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಆರ್. ಅಶ್ವಿನ್ ಮತ್ತು ಶತಕದ ಸನಿಹದಲ್ಲಿದ್ದ ರವಿಂದ್ರ ಜಡೇಜ ಎರಡನೇ ದಿನದಾಟದ ಬೆಳಿಗ್ಗೆ ಬೇಗನೆ ಔಟಾದರು. ಒಟ್ಟು 11.2 ಓವರ್‌ಗಳಲ್ಲಿ ಇವರಿಬ್ಬರೂ ಸೇರಿದಂತೆ ನಾಲ್ವರು ಬ್ಯಾಟರ್‌ಗಳ ವಿಕೆಟ್‌ಗಳನ್ನು ಬಾಂಗ್ಲಾ ಬೌಲರ್‌ಗಳು ಉರುಳಿಸಿದರು. ಒಟ್ಟು 47 ರನ್‌ಗಳು ತಂಡದ ಖಾತೆಗೆ ಸೇರಿದವು. ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ (6–3–8–3) ಮಿಂಚಿದರು.
ಆದರೆ ಬಾಂಗ್ಲಾ ಬಳಗದಲ್ಲಿ ಈ ಸಂತಸವು ಹೆಚ್ಚು ಹೊತ್ತು ಉಳಿಯಲಿಲ್ಲ. ಇನಿಂಗ್ಸ್‌ನ ಆರಂಭದಿಂದಲೇ ಬೂಮ್ರಾ ಆರ್ಭಟ ಆರಂಭವಾಯಿತು. ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ ಅವರನ್ನು ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಮಾಡಿದರು. ಇದಾಗಿ ಸ್ವಲ್ಪಹೊತ್ತಿನ ನಂತರ ಇನ್ನೊಂದು ಬದಿಯಿಂದ ದಾಳಿ ಆರಂಭಿಸಿದ್ದ ಆಕಾಶ್ ದೀಪ್ ಸತತ ಎರಡು ಎಸೆತಗಳಲ್ಲಿ ಝಾಕೀರ್ ಹಸನ್ ಹಾಗೂ ಮೊಮಿನುಲ್ ಹಕ್ ಅವರ ವಿಕೆಟ್‌ಗಳನ್ನು ಉರುಳಿಸಿದರು.
ನೆಲಕಚ್ಚಿ ಆಡುತ್ತಿದ್ದ ನಾಯಕ ನಜ್ಮುಲ್ ಹುಸೇನ್ ಶಾಂತೊ (20; 30ಎ) ಅವರ ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶಕೀಬ್ ಅಲ್ ಹಸನ್ (32 ರನ್), ಲಿಟನ್ ದಾಸ್ (22 ರನ್) ಮತ್ತು ಮೆಹದಿ ಹಸನ್ ಮಿರಜ್ (ಔಟಾಗದೆ 27) ಅವರು ಒಂದಿಷ್ಟು ಹೋರಾಟ ನಡೆಸಿದರು. ಎಡಗೈ ಸ್ಪಿನ್ನರ್ ಜಡೇಜ ಅವರು ಶಕೀಬ್ ಮತ್ತು ಲಿಟನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಬೌಲರ್‌ಗಳು ಯಾವುದೇ ಹಂತದಲ್ಲಿಯೂ ದೊಡ್ಡ ಜೊತೆಯಾಟ ಬೆಳೆಯಲು ಆಸ್ಪದ ಕೊಡಲಿಲ್ಲ.
ಭಾರತ
ಮೊದಲ ಇನಿಂಗ್ಸ್ 376
(91.2 ಓವರ್‌ಗಳಲ್ಲಿ)
ಜಡೇಜ ಸಿ ಲಿಟನ್ ಬಿ ತಸ್ಕಿನ್ 86 (124ಎ, 4X10, 6X2), ಅಶ್ವಿನ್ ಸಿ ಶಾಂತೊ ಬಿ ತಸ್ಕಿನ್ 113 (133ಎ, 4X11, 6X2), ಆಕಾಶ್ ಸಿ ಶಾಂತೊ ಬಿ ತಸ್ಕಿನ್ 17 (30ಎ, 4X4), ಬೂಮ್ರಾ ಸಿ ಝಾಕೀರ್ ಬಿ ಹಸನ್ 7 (9ಎ, 4X1), ಸಿರಾಜ್ ಔಟಾಗದೆ 0 (1ಎ)
ಇತರೆ: 30 (ಬೈ 18, ಲೆಗ್‌ಬೈ 7, ವೈಡ್ 1, ನೋಬಾಲ್ 4)
ವಿಕೆಟ್ ಪತನ: 7–343 (ರವೀಂದ್ರ ಜಡೇಜ; 82.1), 8–367 (ಆಕಾಶದೀಪ್ 88.5), 9–374 (ಅಶ್ವಿನ್; 90.5), 10–376 (ಬೂಮ್ರಾ 91.2), ಬೌಲಿಂಗ್ ತಸ್ಕಿನ್ ಅಹಮದ್ 21–4–55–3, ಹಸನ್ ಮೆಹಮೂದ್ 22.2–4–83–5, ನಹೀದ್ ರಾಣಾ 18–2–82–1, ಮೆಹದಿ ಹಸನ್ ಮಿರಾಜ್ 21–2–77–1, ಶಕೀಬ್ ಅಲ್ ಹಸನ್ 8–0–50–0, ಮೊಮಿನುಲ್ ಹಕ್ 1–0–4–0.
ಬಾಂಗ್ಲಾದೇಶ
ಮೊದಲ ಇನಿಂಗ್ಸ್ 149
(47.1 ಓವರ್‌ಗಳಲ್ಲಿ)
ಶಾದ್ಮನ್ ಬಿ ಬೂಮ್ರಾ 2 (6ಎ)
ಝಾಕೀರ್ ಬಿ ಆಕಾಶ್‌ದೀಪ್ 3 (22ಎ)
ಶಾಂತೊ ಸಿ ಕೊಹ್ಲಿ ಬಿ ಸಿರಾಜ್ 20 (30ಎ, 4X3), ಮೊಮಿನುಲ್ ಬಿ ಆಕಾಶ್‌ದೀಪ್ 0 (1ಎ), ಮುಷ್ಫೀಕುರ್ ಸಿ ರಾಹುಲ್ ಬಿ ಬೂಮ್ರಾ 8 (14ಎ, 4X2), ಶಕೀಬ್ ಸಿ ಪಂತ್ ಬಿ ಜಡೇಜ 32 (64ಎ, 4X5), ಲಿಟನ್ ಸಿ ಧ್ರುವ ಜುರೇಲ್ (ಬದಲೀ), ಬಿ ಜಡೇಜ 22 (42ಎ, 4X3), ಮೆಹದಿ ಔಟಾಗದೆ 27 (52ಎ, 4X2, 6X1), ಹಸನ್ ಸಿ ಕೊಹ್ಲಿ ಬಿ ಬೂಮ್ರಾ 9 (22ಎ, 4X2), ತಸ್ಕಿನ್ ಬಿ ಬೂಮ್ರಾ 11 (21ಎ, 4X1), ರಾಣಾ ಬಿ ಸೂರಜ್ 11 (11ಎ, 4X2)
ಇತರೆ: 4 (ಲೆಗ್‌ಬೈ 2, ನೋಬಾಲ್ 2)
ವಿಕೆಟ್ ಪತನ: 1–2 (ಶಾದ್ಮನ್ ಇಸ್ಲಾಂ; 0.6), 2–22 (ಝಾಕೀರ್ ಹಸನ್ 8.1), 3–22 (ಮೊಮಿನುಲ್ ಹಕ್, 8.2), 4–36 (ಶಾಂತೊ; 11.1), 5–40 (ಮುಷ್ಫೀಕುರ್ ರಹೀಂ 12.5), 6–91 (ಲಿಟನ್ ದಾಸ್; 28.2), 7–29 (ಶಕೀಬ್ ಅಲ್ ಹಸನ್; 30.3), 8–112 (ಹಸನ್ ಮೆಹಮೂದ್; 36.5), 9–130 (ತಸ್ಕಿನ್ ಅಹಮದ್; 42.4), 10–149 (ನಹೀದ್ ರಾಣಾ; 47.1)
ಬೌಲಿಂಗ್
ಜಸ್‌ಪ್ರೀತ್ ಬೂಮ್ರಾ 11–1–50–4, ಮೊಹಮ್ಮದ್ ಸಿರಾಜ್ 10.1–1–30–2, ಆಕಾಶದೀಪ್ 5–0–19–2, ಆರ್. ಅಶ್ವಿನ್ 13–4–29–0, ರವೀಂದ್ರ ಜಡೇಜ 8–2–19–2.
ಭಾರತ
ಎರಡನೇ ಇನಿಂಗ್ಸ್ 3ಕ್ಕೆ81
(23 ಓವರ್‌ಗಳಲ್ಲಿ)
ಯಶಸ್ವಿ ಸಿ ಲಿಟನ್ ಬಿ ರಾಣಾ 10 (17ಎ, 4X2), ರೋಹಿತ್ ಸಿ ಝಾಕೀರ್ ಬಿ ತಸ್ಕಿನ್ 5 (7ಎ, 4X1)
ಶುಭಮನ್ ಬ್ಯಾಟಿಂಗ್ 33 (64ಎ, 4X4), ವಿರಾಟ್ ಎಲ್‌ಬಿಡಬ್ಲ್ಯು ಬಿ ಮೆಹದಿ 17 (37ಎ, 4X2)
ರಿಷಭ್ ಬ್ಯಾಟಿಂಗ್ 12 (13ಎ, 4X1, 6X1)
ಇತರೆ: 4 (ಲೆಗ್‌ಬೈ 4)
ವಿಕೆಟ್ ಪತನ: 1–15 (ರೋಹಿತ್ ಶರ್ಮಾ; 2.3), 2–28 (ಯಶಸ್ವಿ ಜೈಸ್ವಾಲ್; 6.4), 3–67 (ವಿರಾಟ್ ಕೊಹ್ಲಿ; 19.2)
ಬೌಲಿಂಗ್
ತಸ್ಕಿನ್ ಅಹಮದ್ 3–0–17–1, ಹಸನ್ ಮೆಹಮೂದ್ 5–1–12–0, ನಹೀದ್ ರಾಣಾ 3–0–12–1, ಶಕೀಬ್ ಅಲ್ ಹಸನ್ 6–0–20–0, ಮೆಹದಿ ಹಸನ್ ಮಿರಾಜ್ 6–0–16–1.
‘300ನೇ ವಿಕೆಟ್‌ಗೆ ಸೂಕ್ತ ಮೈದಾನ’
ಚೆನ್ನೈ: ‘ಟೆಸ್ಟ್ ಕ್ರಿಕೆಟ್‌ನಲ್ಲಿ ನನಗೆ 300ನೇ ವಿಕೆಟ್ ಗಳಿಸಲು ಇದು ಸೂಕ್ತ ಕ್ರೀಡಾಂಗಣವಾಗಿದೆ. ಇಲ್ಲಿ ಅದನ್ನು ಸಾಧಿಸುವ ವಿಶ್ವಾಸವಿದೆ’ ಎಂದು ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಹೇಳಿದರು.
ಅವರು ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಅಶ್ವಿನ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು. ಇಬ್ಬರೂ ಏಳನೇ ವಿಕೆಟ್‌ಗೆ 199 ರನ್ ಸೇರಿಸಿ ತಂಡವು ಉತ್ತಮ ಮೊತ್ತ ಗಳಿಸಲು ಕಾರಣರಾದರು. ನಂತರ ಬೌಲಿಂಗ್‌ನಲ್ಲಿಯೂ ಎರಡು ವಿಕೆಟ್ ಪಡೆದರು. ಅವರ ಖಾತೆಯಲ್ಲಿ ಸದ್ಯ 296 ವಿಕೆಟ್‌ಗಳು ಇವೆ.
ಒಂದೇ ದಿನ 17 ವಿಕೆಟ್
ಚೆಪಾಕ್‌ನಲ್ಲಿ ಶುಕ್ರವಾರ ಒಂದೇ ದಿನ 17 ವಿಕೆಟ್‌ಗಳು ಪತನವಾದವು. ಪಿಚ್ ಬ್ಯಾಟರ್‌ಗಳಿಗೆ ನೆರವಾಗುವಂತೆ ಕಂಡರೂ ಬೌಲರ್‌ಗಳು ಪಾರಮ್ಯ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.